ರಾಜಕೀಯ

ರಶ್ಮಿ ಮಹೇಶ್ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ

ವಿಧಾನ ಪರಿಷತ್ತು: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಅವ್ಯವಹಾರ ಮತ್ತು ಆ ಸಂಸ್ಥೆಯ ಮಹಾನಿರ್ದೇಶಕಿ ರಶ್ಮಿ ಮಹೇಶ್ ಮೇಲಿನ ಹಲ್ಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇ ಕೆಂಬ ಪ್ರತಿಪಕ್ಷಗಳ ಒತ್ತಾಯವನ್ನು ಸರ್ಕಾರ ತಳ್ಳಿಹಾಕಿದೆ.

ಬಿಜೆಪಿ ಸದಸ್ಯ ಗೋ.ಮಧುಸೂದನ್ ವಿಷಯ ಪ್ರಸ್ತಾಪಿಸಿ, ಪ್ರಕರಣದ ತೀವ್ರತೆ ಅರಿತು ರಶ್ಮಿ ಮಹೇಶ್ ಅವರೇ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಸಿಬಿಐಗೆ ವಹಿಸುವಂತೆ ಕೇಳಿಕೊಂಡಿದ್ದಾರೆ. ನಾವು ಕೂಡ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.

ಮಧುಸೂದನ್ ಆಗ್ರಹಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಕೃಷ್ಣಭಟ್, ಕೆ.ಬಿ.ಶಾಣಪ್ಪ, ನಾರಾಯಣಸ್ವಾಮಿ ಸೇರಿ ಅನೇಕ ಸದಸ್ಯರು ಸಿಬಿಐಗೆ ವಹಿಸುವಂತೆ ಪಟ್ಟು ಹಿಡಿದರೂ ಸರ್ಕಾರ ಮಾತ್ರ ಜಗ್ಗಲಿಲ್ಲ. ರಶ್ಮಿಯವರು ಎಟಿಐ ಅವ್ಯವಹಾರದ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದ ಕೂಡಲೇ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯವರ ಮೂಲಕ ಪ್ರಾಥಮಿಕ ತನಿಖೆ ನಡೆಸಲಾಯಿತು. ಸಂಸ್ಥೆಯಲ್ಲಿ 7 ವಿಚಾರಗಳಲ್ಲಿ ಕೆಟಿಟಿಪಿ ಕಾಯಿದೆ ಉಲ್ಲಂಘನೆ ಆಗಿರುವುದು ತಿಳಿಯಿತು. ಈ ಹಿನ್ನೆಲೆಯಲ್ಲಿ ಹಿಂದಿನ ಮಹಾನಿರ್ದೇಶಕರಾದ ಅಮಿತಾ ಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಿ ಸಮಜಾಯಿಷಿ ಕೇಳಲಾಗಿದೆ. ದಾಖಲೆ ಸಂಖ್ಯೆ ದೊಡ್ಡದಿರುವ ಕಾರಣ ಅವರು 8 ವಾರಗಳ ಕಾಲಾವಕಾಶ ಕೋರಿದ್ದಾರೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭಾ ನಾಯಕರು ಸದನಕ್ಕೆ ಮಾಹಿತಿ ನೀಡಿದರು.

SCROLL FOR NEXT