ರಾಜಕೀಯ

ಗಾಂಧಿ ಪುತ್ಥಳಿಗೂ ಕಿಕ್ ಬ್ಯಾಕ್!?

Mainashree

ವಿಧಾನ ಪರಿಷತ್ತು: ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಸ್ಥಾಪಿಸಿರುವ ಧ್ಯಾನಾಸಕ್ತ ಗಾಂಧಿ ಪುತ್ಥಳಿ ಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮ ವಿವಾದ ವಿಚಾರ
ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು.

ಗಾಂಧೀಜಿ ಪ್ರತಿಮೆಗೆ ಎಷ್ಟು ವೆಚ್ಚವಾಯಿತು ಎಂದು ಪ್ರಶ್ನೆ ಎತ್ತಿದ್ದು ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ. ಜತೆಗೆ ಟೆಂಡರ್ ಕರೆಯದೇ ಏಕೆ ಯೋಜನೆ ಕಾರ್ಯಗತಗೊಳಿಸಲಾಯಿತು, ಟೆಂಡರ್ ಕರೆದಿದ್ದರೆ ಇನ್ನೂ ಕಡಿಮೆ ವೆಚ್ಚದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದಿತ್ತಲ್ಲವೇ, ಅನೇಕರಿಗೆ ಕಿಕ್‍ಬ್ಯಾಕ್ ಹೋಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇದಕ್ಕುತ್ತರಿಸಿದ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ಕೆಪಿಪಿ ಆ್ಯಕ್ಟ್‍ನಲ್ಲಿರುವ ಅವಕಾಶ ಬಳಸಿಕೊಂಡು ಟೆಂಡರ್ ಕರೆಯದೇ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಯಾವುದೇ ಕಿಕ್‍ಬ್ಯಾಕ್ ಅಥವಾ ಅವ್ಯವಹಾರ ನಡೆದಿಲ್ಲ ಎಂದು ಸಮಜಾಯಿಷಿ ನೀಡಿದರು.

ಈ ವೇಳೆ ಮಾತನಾಡಿದ ಉಗ್ರಪ್ಪ, ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಗೋಡ್ಸೆವಾದಿಯನ್ನು ಏಕೆ ಕರೆಸಿ ಭಾಷಣ ಮಾಡಿಸಲಾಯಿತು, ಇದು ಗಾಂ„ಗೆ ಮಾಡಿದ ಅಪಚಾರ ಎಂದು ಏರುದನಿಯಲ್ಲಿ ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರು ಏಕ ದನಿಯಲ್ಲಿ ಉಗ್ರಪ್ಪರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ, ಅರ್ಥವಿಲ್ಲದ ಪ್ರಶ್ನೆಗೆ ಉತ್ತರವಿಲ್ಲ ಎಂದು ಸಭಾಪತಿಯವರೂ ಹೇಳಿದರು.

SCROLL FOR NEXT