ಹುಬ್ಬಳ್ಳಿ: ಖಾನಾಪುರ ಅರಣ್ಯ ಪ್ರದೇಶದಲ್ಲಿ ಹುಲಿ ಬಿಟ್ಟಿದ್ದ ಪ್ರಕರಣದಲ್ಲಿ ತಮ್ಮ ಪುತ್ರ ರಾಣಾ ಜಾರ್ಜ್ ಪಾತ್ರವೇನೂ ಇಲ್ಲ. ಒಂದೊಮ್ಮೆ ರಾಣಾ ತಪ್ಪಿತಸ್ಥನಾಗಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಈ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾ„ಕಾರದ ಮಾರ್ಗಸೂಚಿ ಅನ್ವಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ (ಪಿಸಿಸಿಎಫ್ ವನ್ಯಜೀವಿ) ಖಾನಾಪುರ ಅರಣ್ಯದಲ್ಲಿ ಹುಲಿ ಬಿಡಲು ಆದೇಶ ಹೊರಡಿಸಿದ್ದಾರೆ. ಇದು ರಾಣಾ ಜಾರ್ಜ್ ಮಾಡಿದ ಆದೇಶವೇನೂ ಅಲ್ಲ. ರಾಣಾ ಜಾರ್ಜ್ ರಾಜ್ಯ ವನ್ಯಜೀವ ಸಂರಕ್ಷಣಾ ನಿಗಮದ ಸದಸ್ಯರಷ್ಟೇ. ಇದನ್ನೇ ಆಧಾರವಾಗಿಟ್ಟುಕೊಂಡು ಸ್ಥಳೀಯರೊಬ್ಬರು ರಾಣಾ ಮತ್ತಿತರರ ವಿರುದ್ಧ ದೂರು ಸಲ್ಲಿಸಿದ್ದಾರೆ. ಸ್ಥಳೀಯ
ಠಾಣೆಯ ಪೊಲೀಸ್ ಅಧಿಕಾರಿ ಎಫ್ ಐಆರ್ ದಾಖಲಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಣಾ ಪಾತ್ರವಿಲ್ಲದಿರುವುದು ಸ್ಪಷ್ಟ ಎಂದರು.