ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ 
ರಾಜಕೀಯ

ನಾನು ಏನೂಂತ ತಿಳಿಯಲು ಕಾಗೋಡು ಮತ್ತೊಮ್ಮೆ ಹುಟ್ಟಿ ಬರಬೇಕು

ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಜನಾರ್ದನ ಪೂಜಾರಿ ಯಾರು ಎಂದು ಗೋತ್ತಾಗಬೇಕಾದರೆ...

ಮಂಗಳೂರು: ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಜನಾರ್ದನ ಪೂಜಾರಿ ಯಾರು ಎಂದು ಗೋತ್ತಾಗಬೇಕಾದರೆ ಇನ್ನೊಮ್ಮೆ ಹುಟ್ಟಿ ಬರಬೇಕು. ಬಹುಶಃ ಅವರಿಗೆ ಅರಳು, ಮರಳು ಇರಬೇಕು ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಗುಡುಗಿದ್ದಾರೆ.

ಪೂಜಾರಿ ಯಾರೆಂದು ಗೊತ್ತಿಲ್ಲ ಎನ್ನುವ ಕಾಗೋಡು ನಾನು ವಕೀಲ ಆಗಿದ್ದೆ ಎಂದಿದ್ದಾರೆ. ಅದು ಅವರಿಗೆ ಹೇಗೆ ತಿಳಿಯಿತು? ಪೂಜಾರಿ ಕೇಂದ್ರ ಸಚಿವರಾಗಿದ್ದಾಗ ನಿಮಗೆ ಚಿಗುರು ಮೀಸೆ ಬರ್ಲಿಲ್ಲ. ನಾನು ಕಾಂಗ್ರೆಸ್‌ನ ಚುನಾವಣಾ ಕೇಂದ್ರ ಸಮಿತಿಯಲ್ಲಿ ಇದ್ದಾಗ ಚುನಾವಣೆಗೆ ಸ್ಫರ್ಧಿಸಲು ಟಿಕೆಟ್ ಕೊಡಿಸಿಲ್ವಾ?

ನಿಮಗೆ ಈಗ ಗುರುತು ಸಿಗುವುದಿಲ್ಲವಾ? ಆ ಪರಿಸ್ಥಿತಿಗೆ ಬಂದಿದ್ದೀರಾ ಎಂದು ಪೂಜಾರಿ ವ್ಯಂಗ್ಯವಾಡಿದರು. 4 ಬಾರಿ ಸಂಸದನಾಗಿದ್ದೆ. 2 ಅವಧಿಗೆ ರಾಜ್ಯಸಭೆ ಸದಸ್ಯನಾಗಿದ್ದೆ. ಯಾವುದೇ ಬಿಸಿನೆಸ್ ಮಾಡುತ್ತಿಲ್ಲ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿಲ್ಲ. ನಾನು ಕುಡಿಯುವುದಿಲ್ಲ. ಪೂಜಾರಿ ಏನೆಂದು ತಿಳಿಯಲು ಇವರಿಗೆ ಇನ್ನೊಂದು ಜನ್ಮ ಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: ಬ್ರಿಕ್ಸ್‌ ಶೃಂಗಸಭೆಗೆ ದೆಹಲಿಗೆ ಬಂದಿಳಿದ ಕ್ಸಿ ಜಿನ್‌ಪಿಂಗ್; ಕುತೂಹಲ ಕೆರಳಿಸಿದ ಭಾರತ-ಚೀನಾ ಮಾತುಕತೆ

ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೇನೆ: ಇನ್ಸ್​​ಪೆಕ್ಟರ್ ಧನಂಜಯ್ ಗೆ ಪ್ರತಾಪ್ ಸಿಂಹ ವಾರ್ನಿಂಗ್!

Non Committal?: 'ಎಷ್ಟು ರಿಹರ್ಸಲ್ ಮಾಡಿಸ್ತೀರೋ.. ಆದ್ರೆ ಬರ್ತಾ ಇದೀನಿ'!, ಅಗರ್ಕರ್, ಗಂಭೀರ್ ರೋಸ್ಟ್ ಮಾಡಿದ್ರಾ Rohit Sharma?

Ganesh Chaturthi: ಬೆಂಗಳೂರಿನಲ್ಲಿ ಈ ದಿನ ಮಾಂಸ ಮಾರಾಟ, ಪ್ರಾಣಿವಧೆ ಸಂಪೂರ್ಣ ನಿಷೇಧ! ಕಸಾಯಿಖಾನೆಗಳು ಬಂದ್

BRICS 2026: ವ್ಯಾಪಾರ ಏಕೀಕರಣಕ್ಕೆ ಒತ್ತಾಸೆ ಕೋರಿದ ಪ್ರಧಾನಿ ಮೋದಿ ಮೊದಲ ದಿನ ಹೇಳಿದ್ದೇನು?