ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ (ಸಂಗ್ರಹ ಚಿತ್ರ) 
ರಾಜಕೀಯ

ಸಿಎಂ ಸಿದ್ದು, ಪರಮ್ ಗೆ "ಹೈ" ಕಮಾಂಡ್ ತುರ್ತು ಬುಲಾವ್

ಕರ್ನಾಟಕದಲ್ಲಿ ಕಾಂಗ್ರೆಸ್ ಪಾಲಿಗೆ ತೀವ್ರ ಮುಜುಗರವನ್ನುಂಟು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಸಂಬಂಧ ಇದೀಗ ದೆಹಲಿ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಬುಲಾವ್ ನೀಡಿದ್ದಾರೆ...

ಬೆ೦ಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಾಲಿಗೆ ತೀವ್ರ ಮುಜುಗರವನ್ನುಂಟು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಸಂಬಂಧ ಇದೀಗ ದೆಹಲಿ  ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಬುಲಾವ್ ನೀಡಿದ್ದಾರೆ.

ವಿಧಾನಸಭಾ ಉಪಚುನಾವಣೆ, ಪ೦ಚಾಯಿತಿ ಫಲಿತಾ೦ಶದ ಜತೆಯಲ್ಲೇ ಮುಖ್ಯಮ೦ತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಬಿದ್ದಿರುವ ದುಬಾರಿ ವಾಚ್ ವಿವಾದ ಸ೦ಬ೦ಧ ಚರ್ಚಿಸಲು ಇದೇ  ಮಾ.5ರ೦ದು ದೆಹಲಿಗೆ ಬರುವ೦ತೆ ಸಿಎ೦ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‍ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾ೦ಧಿ ಬುಲಾವ್ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ  ಡಾ.ಜಿ.ಪರಮೇಶ್ವರ್ ಪ್ರತ್ಯೇಕವಾಗಿ ವರಿಷ್ಠರನ್ನು ಭೇಟಿ ಮಾಡಿ ವರದಿ ನೀಡಿ ಮರಳಿದ್ದಾರೆ. ಪರಮೇಶ್ವರ್ ಹಿಂತಿರುಗಿದ ಬಳಿಕ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ವರಿಷ್ಠರನ್ನು ಭೇಟಿ ಮಾಡಿ ತಮ್ಮನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಇಬ್ಬರ ಅಭಿಪ್ರಾಯ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ವಸ್ತುನಿಷ್ಠ ವರದಿ ನೀಡಲು ರಾಜ್ಯ ಉಸ್ತುವಾರಿ  ದಿಗ್ವಿಜಯ್‌ಸಿಂಗ್‌ಗೆ ಸೋನಿಯಾ ಸೂಚಿಸಿದ್ದಾರೆ.

ಕಾಂಗ್ರೆಸ್ ಪಾಲಿಗೆ ಭರವಸೆಯಾಗಿದ್ದ ಕರ್ನಾಟಕದಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲೇ ಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್ ಹೈಕಮಾಂಡ್ ಪಕ್ಷ ಹಾಗೂ ಸಕಾ೯ರದ ರಾಜ್ಯ  ನಾಯಕತ್ವಕ್ಕೆ ಸಜ೯ರಿ ಮಾಡಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಜೆಟ್ ಅಧಿವೇಶನದ ಬಳಿಕ ಬದಲಾವಣೆಗೆ ಮುಹೂತ೯ ನಿಗದಿಯಾಗಿದೆ ಎ೦ಬ ಅಭೀಪ್ರಾಯವೂ ಕೂಡ  ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಮಾ. 5ರಂದು ದೆಹಲಿಗೆ ಬರುವಂತೆ ಎಐಸಿಸಿ ವರಿಷ್ಠರು ಬುಲಾವ್ ನೀಡಿರುವುದನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ದೃಢಪಡಿಸಿದ್ದಾರೆ. ಆದರೆ ಇದಕ್ಕೆ  ವ್ಯತಿರಿಕ್ತ ಎಂಬಂತೆ ಗೃಹ ಕಚೇರಿ ‘ಕೃಷ್ಣಾ’ ದಲ್ಲಿ ನಡೆದ ಸುದ್ದಿಗೋಷ್ಠಿ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ‘ನಾನೇಕೆ ಹೋಗಲಿ?’ ಏಪ್ರಿಲ್ ನಂತರ ದೆಹಲಿಗೆ ತೆರಳುವುದಾಗಿ  ತಿಳಿಸಿದ್ದಾರೆ.

ದೆಹಲಿಗೆ ನಾನೇಕೆ ಹೋಗಲಿ? ಇನ್ನೂ ಬಜೆಟ್ ಸಿದ್ಧತೆ ನಡೆಯಬೇಕು. ಈ ತಿ೦ಗಳ ಕೊನೆಯವರೆಗೆ ಬಜೆಟ್ ಅಧಿವೇಶನ ಇರುತ್ತದೆ. ಏಪ್ರಿಲ್‍ನಲ್ಲಿ ದೆಹಲಿಗೆ ತೆರಳಿ ಸ೦ಪುಟ ಪುನಾರಚನೆ ಕುರಿತು  ವರಿಷ್ಠರೊ೦ದಿಗೆ ಚಚಿ೯ಸುವೆ.
-ಸಿದ್ದರಾಮಯ್ಯ ಮುಖ್ಯಮ೦ತ್ರಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

'Ground Ops ಗಾಗಿ ಭಾರತೀಯ ಸೇನೆ ಸಂಪೂರ್ಣ ಸಜ್ಜು: ಪಾಕ್ ಗೆ ವಾರ್ನಿಂಗ್ ನೀಡಿದ ಸೇನಾ ಮುಖ್ಯಸ್ಥ ದ್ವಿವೇದಿ!

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ'; ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಜಮ್ಮು-ಕಾಶ್ಮೀರ: ಇದೇ ಮೊದಲು, ಮಸೀದಿಯ ಇಮಾಮ್ ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು! ಕಾರಣವೇನು ಗೊತ್ತಾ?

SCROLL FOR NEXT