ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದ ಸಚಿವ ರೋಷನ್ ಬೇಗ್ ಟ್ವೀಟರ್ ನಲ್ಲಿ ಕ್ಷಮೆಯಾಚಿಸಿದ್ದಾರೆ.
ನಮ್ಮ ಪ್ರಧಾನಮಂತ್ರಿಗಳ ಮೇಲೆ ನನಗೂ ಅತ್ಯುನ್ನತ ಗೌರವ ಮತ್ತು ಭಕ್ತಿವಿದೆ. ಅವರು ಬಿಜೆಪಿ ಪ್ರಧಾನಮಂತ್ರಿ ಮಾತ್ರವಲ್ಲ, ಅವರು ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಹೀಗಾಗಿ ಪ್ರಧಾನಮಂತ್ರಿಗಳ ವಿರುದ್ಧದ ನನ್ನ ಹೇಳಿಕೆಯಿಂದ ಹಲವರ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಇನ್ನುಂದೆ ನಾನು ಎಂದಿಗೂ ಮೋದಿ ಪ್ರಧಾನಮಂತ್ರಿಗಳ ವಿರುದ್ಧ ಅಂತಹ ಅವಾಚ್ಯ ಶಬ್ದಗಳನ್ನು ಬಳಸುವುದಿಲ್ಲ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಶಿವಾಜಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳು ಭಾಷೆಯಲ್ಲಿಯೇ ಮಾತನಾಡಿದ್ದ ರೋಷನ್ ಬೇಗ್ 500 ರುಪಾಯಿ ಮತ್ತು 1000 ರುಪಾಯಿ ನೋಟುಗಳ ಅಪನಗದೀಕರಣದಿಂದ ಪ್ರಧಾನಿ ಮೋದಿ ವಿರುದ್ಧ ಅವರಿಗೆ ವೋಟ್ ಹಾಕಿದವರೇ ತಿರುಗಿಬಿದ್ದಿದ್ದು ಸೂ....ಮಗ ನೋಟು ಬ್ಯಾನ್ ಮಾಡಿದ ಪ್ರಧಾನಿ ಎಂದು ಆಡಿಕೊಳ್ಳುತ್ತಿದ್ದಾರೆ ಎಂಬುದಾಗಿ ವಾಗ್ದಾಳಿ ನಡೆಸಿದ್ದರು. ಈ ವೇಳೆ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು.
ಪ್ರಧಾನಮಂತ್ರಿಗಳ ವಿರುದ್ದ ಬಹಿರಂಗವಾಗಿ ಕೀಳು ಮಟ್ಟದ ಪದಪ್ರಯೋಗ ಮಾಡಿದ್ದ ರೋಷನ್ ಬೇಗ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics