ರಾಜಕೀಯ

ಹನುಮಂತನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ!

Raghavendra Adiga
ಬೆಂಗಳೂರು: ರಾಜ್ಯದೆಲ್ಲೆಡೆ ಈಗ ಚುನಾವಣಾ ಕಾವು ಏರುತ್ತಿದೆ. ನೀತಿ ಸಂಹಿತೆಯ ಬಿಸಿ ಎಲ್ಲೆಡೆ ಹರಡಿದೆ. ವಿಶೇಷವೆಂದರೆ ಕೇವಲ ರಾಜಕಾರಣಿಗಳಿಗೆ, ಮತದಾರರಿಗೆ ಮಾತ್ರ ಈ ನೀತಿ ಸಂಹಿತೆ ಅಡ್ಡಿಯಾಗಿಲ್ಲ, ಹನುಮಂತನಿಗೂ ಇದರ ಶಾಖ ತಾಗಿದೆ!
ಬೆಂಗಳೂರಿನ ಎಚ್‌ಬಿಆರ್‌ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ  62 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹ  ಸಾಗಣೆಗೂ ನೀತಿ ಸಂಹಿತೆ ಅಡ್ಡಿಯಾಗಿತ್ತು.
ಬೆಂಗಳೂರಿನಿಂದ 35 ಕಿಮೀ ದೂರದ ಹೊಸಕೋಟೆ ಸಮೀಪ ಚುನಾವಣಾಧಿಕಾರಿಗಳು ವಿಗ್ರಹ ಸಾಗಣೆಯಲ್ಲಿ ತೊಡಗಿದ್ದ ಟ್ರಾಲಿಯನ್ನು ತಡೆದಿದ್ದರು.
ಸೋಮವಾರ ರಾತ್ರಿ ಅಧಿಕಾರಿಗಳು 300 ಚಕ್ರಗಳ ಈ ದೊಡ್ಡ ಗಾತ್ರದ ವಾಹನ ತಡೆದು ತಪಾಸಣೆ ನಡೆಸಿದ್ದಾರೆ. ಮತ್ತು ವಿಗ್ರಹ ಸಾಗಣೆಯನ್ನು ನಿಷೇಧಿಸಿದ್ದಾರೆ. ಆ ನಂತರ ಮಂಗಳವಾರ ಮಧ್ಯಾಹ್ನದ ವೇಳೆಗೆ ಚುನಾವಣಾ ಆಯೋಗವು ಮಧ್ಯ ಪ್ರವೇಶಿಸಿ  ಆಂಜನೇಯ ವಿಗ್ರಹ ಸಾಗಣೆಗೆ ಅನುಮತಿಸಿದೆ. 
ಆಂಜನೇಯನ ವಿಗ್ರಹವಿದ್ದ ವಾಹನ ರಸ್ತೆಯಲ್ಲೇ ನಿಂತ ಕಾರಣ ಹಳೆ ಮದ್ರಾಸ್‌ ರೋಡ್ ನಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು.
ಹೀಗೆ  ಆಂಜನೇಯನಿಗೂ ಚುನಾವಣೆ ನೀತಿ ಸಂಹಿತೆಯ ಶಾಖ ತಗುಲಿತ್ತು.
SCROLL FOR NEXT