ರಾಜಕೀಯ

ನೋಟು ಅಮಾನ್ಯದಿಂದ ಸಾಧಿಸಿದಾದರೂ ಏನು? - ಪ್ರಿಯಾಂಕ ಚತುರ್ವೇದಿ ಪ್ರಶ್ನೆ

Nagaraja AB

ಬೆಂಗಳೂರು: ಡಿಜಿಟಲ್ ಆರ್ಥಿಕತೆ ಕಡೆಗೆ ಭಾರತವನ್ನು ಕೊಂಡೊಯ್ಯುವ ಉದ್ದೇಶದಿಂದ ಕೇಂದ್ರಸರ್ಕಾರ ಕೈಗೊಂಡ 1 ಸಾವಿರ ಹಾಗೂ 500 ರೂ ನೋಟ್ ಅಮಾನ್ಯದಿಂದ ಸಾಧಿಸಿದಾದರೂ ಏನು ಎಂದು ಎಐಸಿಸಿ ವಕ್ತಾರೆ ಪ್ರಿಯಾಂಕ ಚತುರ್ವೇದಿ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೋಟು ಅಮಾನ್ಯದ ನಂತರ ಹೆಚ್ಚಿನ ಹಣ ಸಿಗದಂತಾಗಿದ್ದು, ದೇಶದಲ್ಲಿನ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

13 ರಾಜ್ಯಗಳಲ್ಲಿ ನಗದು ಕೊರತೆ ಎದುರಾಗಿದೆ. ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗಿದೆ. ದಿನನಿತ್ಯದ ವಸ್ತುಗಳನ್ನು ಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ.  7 ಲಕ್ಷ ಕೋಟಿ ರೂಪಾಯಿಯನ್ನು ಹೊರಗಡೆ ಸಾಗಿಸಲಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕರ ಹಣವನ್ನು ಸರ್ಕಾರ ಕಸಿಯುತ್ತಿದ್ದು, ಸಾರ್ವಜನಿಕರು ಮದುವೆ ಮತ್ತಿತರ ಸಮಾರಂಭಗಳಿಗೆ ಹಣಕ್ಕಾಗಿ ಪರದಾಡುವಂತಾಗಿದೆ ಎಂದು ಪ್ರಿಯಾಂಕ ಚತುರ್ವೇದಿ ಹೇಳಿದರು.

SCROLL FOR NEXT