ಸಂಗ್ರಹ ಚಿತ್ರ 
ರಾಜಕೀಯ

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಪ್ರಿಯಾಂಕಾ ಗಾಂಧಿ ಹೆಸರು ನಾಪತ್ತೆಯಾಗಿದ್ದು ಏಕೆ?

ವಿಧಾನಸಭಾ ಚುನಾವಣೆ ನಿಮಿತ್ತ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿಯೇ ಸಾಗಿದ್ದು, ಏತನ್ಮಧ್ಯೆ ರಾಜಕೀಯ ಪಕ್ಷಗಳಿಂದ ಸ್ಚಾರ್ ಪ್ರಚಾರಕರ ಪಟ್ಟಿ ಪಡೆದುಕೊಂಡಿರುವ ಚುನಾವಣಾ ಆಯೋಗ ನಿನ್ನೆ ಆ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬೆಂಗಳೂರು: ವಿಧಾನಸಭಾ ಚುನಾವಣೆ ನಿಮಿತ್ತ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿಯೇ ಸಾಗಿದ್ದು, ಏತನ್ಮಧ್ಯೆ ರಾಜಕೀಯ ಪಕ್ಷಗಳಿಂದ ಸ್ಚಾರ್ ಪ್ರಚಾರಕರ ಪಟ್ಟಿ ಪಡೆದುಕೊಂಡಿರುವ ಚುನಾವಣಾ ಆಯೋಗ ನಿನ್ನೆ ಆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ತಲಾ 40 ಸ್ಟಾರ್ ಪ್ರಚಾರಕರ ಹೆಸರುಗಳ ಪಟ್ಟಿಯನ್ನು ಆಯೋಗ ಬಿಡುಗಡೆ ಮಾಡಿದ್ದು, ಪ್ರಧಾನಿ ಮೋದಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಅಮಿತ್ ಶಾ ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನ ಘಟಾನುಘಟಿ ನಾಯಕರು ಸ್ಚಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಇನ್ನು ಈ ಪಟ್ಟಿಯಲ್ಲಿರುವ ಸ್ಟಾರ್ ಪ್ರಚಾರಕ ಪೈಕಿ ಹಲವು ಅಭ್ಯರ್ಥಿಗಳೂ ಕೂಡ ಆಗಿರುವುದು ವಿಶೇಷ. ಕಾಂಗ್ರೆಸ್ ಪಕ್ಷದ ಸಿಎಂ ಸಿದ್ದರಾಮಯ್ಯ, ಸಚಿವ ಡಿಕೆ ಶಿವಕುಮಾರ್, ಸಚಿವೆ ಉಮಾಶ್ರೀ ಸೇರಿದಂತೆ ಪಟ್ಟಿಯಲ್ಲಿರುವ 40 ಮಂದಿಯ ಪೈಕಿ 6ಕ್ಕೂ ಹೆಚ್ಚು ಮಂದಿ ಚುನಾವಣಾ ಕಣದಲ್ಲಿದ್ದಾರೆ. 
ಇನ್ನುಳಿದಂತೆ 12ಕ್ಕೂ ಚಿತ್ರಕಲಾವಿದರು, ಕ್ರೀಡಾಪಟುಗಳು ಪಕ್ಷಗಳ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಪ್ರತೀ ಬಾರಿಯ ಚುನಾವಣೆಯಂತೆ ಈ ಬಾರಿ ಚುನಾವಣೆಯಲ್ಲೂ ನಟ-ನಟಿಯರ ಜನಪ್ರಿಯತೆ ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಎಂದಿನಂತೆ ಮುಂದಾಗಿವೆ. ನಟಿ ಹಾಗೂ ಸಚಿವೆ ಉಮಾಶ್ರೀ ಈ ಬಾರಿಯೂ ತೇರದಾಳ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಚಿತ್ರರಂಗದಿಂದ ಕಾಂಗ್ರೆಸ್ ಅಭ್ಯರ್ಥಿ ಇವರೊಬ್ಬರೇ. ಪಕ್ಷದ ಪರ ರಮ್ಯಾ, ಅಂಬರೀಷ್, ಮೆಗಾಸ್ಟಾರ್ ಚಿರಂಜೀವಿ, ಖುಷ್ಬೂ, ಮಾಲಾಶ್ರೀ, ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸ್ಟಾರ್ ಕ್ಯಾಂಪೇನರ್​ಗಳಾಗಿದ್ದಾರೆ.
ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಿಯಾಂಕಾ ಹೆಸರೇ ಇಲ್ಲ
ಆದರೆ ಕಾಂಗ್ರೆಸ್ ಪಕ್ಷದ ಈ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಹೆಸರೇ ಇಲ್ಲ. ಈ ಹಿಂದೆ ನಡೆದ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದ್ದರು. ಆದರೆ ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಪ್ರಿಯಾಂಕಾ ಗಾಂಧಿ ಹೆಸರು ಎಲ್ಲಿಯೂ ಕೇಳಿಬರುತ್ತಿಲ್ಲ. ಗಾಂಧಿ ಕುಟುಂಬದಿಂದ ಸೋನಿಯಾ ಮತ್ತು ರಾಹುಲ್ ಗಾಂಧಿ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ. ಈ ಹಿಂದೆ ಕರ್ನಾಟಕ ಚುನಾವಣೆಯಲ್ಲೂ ಪ್ರಿಯಾಂಕ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿತ್ತಾದರೂ, ಪ್ರಸ್ತುತ ಬಿಡೆಗಡೆಯಾಗಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅವರ ಹೆಸರಿಲ್ಲ.
ಬದಲಾದ ರಾಹುಲ್ ವರ್ಚಸ್ಸು, ಪ್ರಿಯಾಂಕಾ ಗಾಂಧಿ ಗೈರಿಗೆ ಕಾರಣ?
ಇನ್ನು ಈ ಹಿಂದೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಾಗ ಪ್ರಿಯಾಂಕ ಗಾಂಧಿ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರೇ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು. ಆದರೆ ಆ ಬಳಿಕದ ದಿನಗಳಲ್ಲಿ ರಾಹುಲ್ ಗಾಂಧಿ ತಮ್ಮ ವರ್ಚಸ್ಸು ಬದಲಿಸಿಕೊಂಡಿದ್ದು, ಪ್ರಮುಖವಾಗಿ ಪಕ್ಷದ ಅಧ್ಯಕ್ಷಗಾದಿಗೇರಿದ ಬಳಿಕ ಪಕ್ಷದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿನ ಅವರ ಖ್ಯಾತಿ ಕೂಡ ಇದಕ್ಕೆ ಕಾರಣವಾಗಿದ್ದು, ಟ್ವಿಟರ್ ನಲ್ಲಿ ರಾಹುಲ್ ಗಾಂಧಿಗೆ ಸುಮಾರು 6.76 ಮಿಲಿಯನ್ ಫಾಲೋವರ್ ಗಳಿದ್ದಾರೆ. 
ಇದಲ್ಲದೇ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ನಟ ಅಂಬರೀಶ್ ರಂತಹ ಘಟಾನುಘಟಿ ನಾಯಕರಿದ್ದು, ತಮ್ಮ ಕ್ಷೇತ್ರವಷ್ಟೇ ಅಲ್ಲದೇ ತಮ್ಮ ಬೆಂಬಲಿಗ ಅಥವಾ ಪಕ್ಷದ ಇತರೆ ಅಭ್ಯರ್ಥಿಗಳ ಕ್ಷೇತ್ರವನ್ನೂ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅಂತೆಯೇ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆ ರಮ್ಯಾ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಬಹುಶಃ ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪ್ರಿಯಾಂಕ ಗಾಂಧಿ ಅನುಪಸ್ಥಿತಿಯಲ್ಲೂ ತಾವು ಉತ್ತಮ ಪ್ರಚಾರ ನಡೆಸಬಹುದು ಎಂಬ ಲೆಕ್ಕಾಚಾರ ಹಾಕುತ್ತಿರಬಹುದು. ಕರ್ನಾಟಕ  ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಅನುಪಸ್ಥಿತಿ ಕಾಡುವುದಿಲ್ಲ ಎಂಬ ಆಲೋಚನೆಯೂ ಇರಬಹುದು. ಆದರೆ ಪ್ರಿಯಾಂಕಾ ಗಾಂಧಿ ಕೂಡ ಪ್ರಚಾರ ನಡೆಸಿದರೆ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!