ಚಹಾ, ಟೀ ಸೇವಿಸಿದ ಕಾಂಗ್ರೆಸ್ ನಾಯಕರು 
ರಾಜಕೀಯ

ಕಾಂಗ್ರೆಸ್ ನಾಯಕರು ತಿಂದ ಬಿಸ್ಕತ್ತು, ಟೀಗೆ 6 ಸಾವಿರ ರೂ. ಬಿಲ್ ಪಾವತಿಸಿದ ರಾಹುಲ್ ಗಾಂಧಿ

ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರು ತಿಂದ ಬಿಸ್ಕತ್ತು, ಟೀಗೆ 6 ಸಾವಿರ ಬಿಲ್ ಪಾವತಿ ಮಾಡಿದ್ದಾರೆ.

ಕುಮಟಾ: ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರು ತಿಂದ ಬಿಸ್ಕತ್ತು, ಟೀಗೆ 6 ಸಾವಿರ ಬಿಲ್ ಪಾವತಿ ಮಾಡಿದ್ದಾರೆ.
ಹೌದು... ಇಂದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಂಬಂಧ ಮಂಗಳೂರಿಗೆ ತೆರಳುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಮತ್ತಿತ್ತರ ನಾಯಕರು ಕುಮಾಟ ದುಂಡಕುಳಿಯ ಡಾಬಾದಲ್ಲಿ ಟೀ ಬ್ರೇಕ್ ತೆಗೆದುಕೊಂಡರು. ಈ ವೇಳೆ ಎಲ್ಲ ನಾಯಕರೂ ಟೀ ಸೇವಿಸಿ, ಬಿಸ್ಕತ್ತು ತಿಂದರು. ಇದಕ್ಕೆ ಬರೊಬ್ಬರಿ 6 ಸಾವಿರ ರೂ. ಬಿಲ್ ಆಗಿದ್ದು, ಇದನ್ನು ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಪಾವತಿ ಮಾಡಿದ್ದಾರೆ.
ಡಾಬಾಗೆ ರಾಹುಲ್ ಮತ್ತು ತಂಡ ಬೇಟಿ ನೀಡುತ್ತಿದ್ದಂತೆಯೇ ಅವರನ್ನು ಸ್ವಾಗತಿಸಿದ ಡಾಬಾ ಮಾಲೀಕ ಉದಯನಾಯಕ್ ಅವರು ಕಾಂಗ್ರೆಸ್ ನಾಯಕರಿಗೆ ವಿಶೇಷ ಚಹಾ ಮತ್ತು ಬಿಸ್ಕತ್ತು ನೀಡಿದರು. ಈ ವಿಶೇಷ ಚಹಾ ಮತ್ತು ಬಿಸ್ಕತ್ತುಗಳನ್ನು ಆ ತಂಡದೊಂದಿಗೆ ತೆರಳಿದ್ದ ಫುಡ್ ಇನ್ಸ್ ಪೆಕ್ಟರ್ ಪರಿಶೀಲಿಸಿ ಆ ಬಳಿಕವೇ ಕಾಂಗ್ರೆಸ್ ಅಧ್ಯಕ್ಷರಿಗೆ ನೀಡಿದರು ಎನ್ನಲಾಗಿದೆ. 
ಬಳಿಕ ಕುಮಟಾಗೆ ತೆರಳಿದ ನಾಯಕರು ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಿ ಅಲ್ಲಿಂದ ನೇರವಾಗಿ ಮಂಗಳೂರಿಗೆ ತೆರಳಿದರು. ಮಂಗಳೂರಿನ  ಟಿಎಂಪೈ ಹಾಲ್​​ ನಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!