ಕುಮಾರ ಸ್ವಾಮಿ ಮತ್ತು ಜಿ ಪರಮೇಶ್ವರ್
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿ ದೋಸ್ತಿ ಪಕ್ಷಗಳ 25 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
11 ಸಚಿವರಿಗೂ ಖಾತೆ ಹಂಚಿಕೆ ಮಾಡಿ ಜೆಡಿಎಸ್ ಪಟ್ಟಿ ಸಿದ್ಧ ಪಡಿಸಿಕೊಂಡಿದೆ. ಆದರೆ ಕಾಂಗ್ರೆಸ್ ನಲ್ಲಿ ಕೊನೆ ಕ್ಷಣದವರಗೊ ಲಾಬಿ ನಡೆದ ಕಾರಣ ಇನ್ನೂ ಖಾತೆ ಹಂಚಿಕೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ಸಚಿವರುಗಳಿಗೆ ಹಂಚಿರುವ ಖಾತೆ ವಿವರವುಳ್ಳ ಪಟ್ಟಿಯನ್ನು ಸಿಎಂ ಕುಮಾರ ಸ್ವಾಮಿ ರಾಜ್ಯಪಾಲರಿಗೆ ಕಳುಹಿಸಿ ಅಧಿಕೃತ ಅನುಮೋದನೆಗಾಗಿ ಕಾಯುತ್ತಿದ್ದಾರೆ.
ಆದರೆ ಗುರುವಾರ ರಾತ್ರಿಯಾದರೂ ಕಾಂಗ್ರೆಸ್ ಪಟ್ಟಿ ತಯಾರಾಗಿರಲಿಲ್ಲ. ಕೆಲವು ಬದಲಾವಣೆಗಳ ನಂತರ ಕಾಂಗ್ರೆಸ್ ಪಟ್ಟಿಗೆ ಎಐಸಿಸಿ ಅಂಕಿತ ಹಾಕಿತ್ತು, ಆದರೆ ಕೆಲವು ಸಚಿವರುಗಳಿಗೆ ತಮಗೆ ನೀಡಿರುವ ಖಾತೆಯ ಬಗ್ಗೆ ಅಸಮಾಧಾನ ಇರುವುದರಿಂದ ಅದನ್ನು ಬದಲಾಯಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೊಸದಾಗಿ ಪಟ್ಟಿ ಮಾಡಿ ಮತ್ತೆ ಎಐಸಿಸಿ ಅನುಮೋದನೆ ಪಡೆಯಬೇಕಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ನಮ್ಮ ಪಟ್ಟಿ ಸಿದ್ದವಾಗಿದೆ. ಆದರೆ ಕಾಂಗ್ರೆಸ್ ಇನ್ನೂ ಪಟ್ಟಿ ಸಿದ್ದಮಾಡುವಲ್ಲಿ ವಿಳಂಬ ಮಾಡುತ್ತಿದೆ, ನಮ್ಮ ಪಟ್ಟಿ ಪೂರ್ಣಗೊಂಡಿದೆ,ಅದರಲ್ಲಿ ಯಾವುದೇ ಬದಲಾವಣೆಯಿಲ್ಲ, ಕಾಂಗ್ರೆಸ್ ಪೂರ್ಣ ಪಟ್ಟಿ ನೀಡಿದ ಮೇಲೆ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ, ಆದರೆ ಈಗಾಗಲೇ ಪಟ್ಟಿಯನ್ನು ಕುಮಾರ ಸ್ವಾಮಿ ಅವರಿಗೆ ಕಳುಹಿಸಲಾಗಿದೆ ಎಂದು ಡಿಸಿಎಮ ಪರಮೇಶ್ವರ್ ಹೇಳಿದ್ದಾರೆ.
ಯಾರಿಗೆ ಯಾವ ಖಾತೆ ಎಂಬುದು ಶುಕ್ರವಾರ ಹೊರ ಬೀಳುವ ಸಾಧ್ಯತೆಯಿದೆ. ನಗರಯೋಜನ ಮತ್ತು ವಸತಿ- ಯು.ಟಿ ಖಾದರ್, ವೈದ್ಯಕೀ ಶಿಕ್ಷಣ- ಡಿ.ಕೆ ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರ- ಕೃಷ್ಣ ಬೈರೇಗೌಡ, ಸಮಾಜ ಕಲ್ಯಾಣ ಪ್ರಿಯಾಂಕ್ ಖರ್ಗೆ ಅವರಿಗೆ ನೀಡುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics