ಬೆಂಗಳೂರು: ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬ ನಾಣ್ಣುಡಿಯಿದೆ. ಅದರಂತೆ ಚುನಾವಣೆ ಸಮೀಪವಾದಾಗ ಅಭ್ಯರ್ಥಿಗಳು ತಮ್ಮ ಪಕ್ಷ ಟಿಕೆಟ್ ನೀಡಲಿಲ್ಲವಾದರೇ ವಿರೋಧ ಪಕ್ಷಕ್ಕೆ ಜಿಗಿಯುತ್ತಾರೆ ಬೆಂಗಳೂರು ನಗರದಲ ಹಲವು ಕ್ಷೇತ್ರಗಳಲ್ಲಿ ಇದೇ ಕಸರತ್ತು ನಡೆದಿದೆ.
ರಾಜ್ಯ ಒಟ್ಟು 224 ಕ್ಷೇತ್ರಗಳ ಪೈಕಿ ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ,ಹೀಗಾಗಿ ಬೆಂಗಳೂರಿನಲ್ಲಿ ಹೆಚ್ಚು ಸಂಖ್ಯೆಯ ಸೀಟುಗಳನ್ನು ಗೆಲ್ಲುವುದು ಎಲ್ಲಾ ರಾಜಕೀಯ ಪಕ್ಷಗಳಿಗೆ ಅನಿವಾರ್ಯವಾಗಿದೆ,
ಹಾಗಾಗಿ ರಾಜಕೀಯ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿವೆ, ಅದೇ ವಿಧಾನಸಭೆ ಕ್ಷೇತ್ರದಿಂದ ಬೇರೆ ಪಕ್ಷದ ಚಿಹ್ನೆಯಡಿ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ.
2017ನೇ ಅಕ್ಟೋಬರ್ ತಿಂಗಳಲ್ಲಿ ಮಾಜಿ ಶಾಸಕ ನೆ.ಲ ನರೇಂದ್ರ ಬಾಬು ಬಿಜೆಪಿ ಸೇರ್ಪಡೆಯಾದರು. ಕಾಂಗ್ರೆಸ್ ಪಕ್ಷದಿಂದ ಹಾಗೂ ಸ್ವತಂತ್ರ್ಯಅಭ್ಯರ್ಥಿಯಾಗಿ ನಂದಿನಿ ಲೇಔಟ್ ನಿಂದ ಕೌನ್ಸಿಲರ್ ಹಾಗೂ ಮಹಾಲಕ್ಷ್ಮಿ ಲೇಔಟ್ ನಿಂದ 2 ಬಾರಿ ಶಾಸಕರಾಗಿ ಅಯ್ಕೆ.ಯಾಗಿದ್ದರು. 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದರು.
ಬಿಜೆಪಿಯ ಮಾಜಿ ಮೇಯರ್ ಹರೀಶ್ ಮತ್ತು ಜೆಡಿಎಸ್ ನ ಕೆ. ಗೋಪಾಲಯ್ಯ ಅವರ ವಿರುದ್ಧ ನರೆಂದೇರ ಬಾಬು ಸ್ಪರ್ಧಿಸಿ ಗೋಪಾಲಯ್ಯ ವಿರುದ್ಧ ಸೋತಿದ್ದರು. ಸೋತ ನಂತರ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂದು ನರೇಂದ್ರ ಬಾಬು ಬೇಸರ ವ್ಯಕ್ತ ಪಡಿಸಿದ್ದಾರೆ,
ಪ್ರಸಕ್ತ ಚುನಾವಣೆಯಲ್ಲಿ ಬಾಬು ಬಿಜೆಪಿಯಿಂದ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ,ಈ ಕ್ಷೇತ್ರದ ಜನತೆಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ,ಅವರಿಗಾಗಿ ಕೆಲಸ ಮಾಡುವುದನ್ನು ನೋಡಿದ್ದಾರೆ, ನನ್ನ ಬೆಂಬಲಿಗರಿಗೆ ಕಾಂಗ್ರೆಸ್ ಅವಮಾನ ಮಾಡಿದೆ, ಹೀಗಾಗಿ ಈ ಬಾರಿ ನನ್ನ ಗೆಲುವಿಗೆ ಅವರೆಲ್ಲಾ ಸಹಾಯ ಮಾಡುತ್ತಾರೆ ಎಂದು ನರೇಂದ್ರ ಬಾಬು ಅಭಿಪ್ರಾಯ ಪಟ್ಟಿದ್ದಾರೆ.
2005 ರಲ್ಲಿ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎಸ್ ಎಂ ಕೃಷ್ಣ ರಾಜ್ಯಪಾಲರಾಗಿ ತೆರಳಿದ ನಂತರ, ಜೆಡಿಎಸ್ ಆ ಕ್ಷೇತ್ರಕ್ಕೆ ಜಮೀರ್ ಅಹಮದ್ ಖಾನ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು . ಮೂರು ಬಾರಿ ಜಮೀರ್ ಶಾಸಕರಾಗಿದ್ದರು. ಆದರೆ 2017ರ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದರಿಂದ ಜಮೀರ್ ಸೇರಿ 7 ಮಂದಿ ಶಾಸಕರನ್ನು ಜೆಡಿಎಸ್ ನಿಂದ ಅಮಾನತು ಗೊಳಿಸಲಾಯಿತು. ನಂತರ ಕಾಂಗ್ರೆಸ್ ಸೇರಿದ ಜಮೀರ್ ಈಗ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಜಮೀರ್ ಜೊತೆ ಜೆಡಿಎಸ್ ನಿಂದ ಅಮಾಮತುಗೊಂಡ ಅಖಂಡ ಶ್ರೀನಿವಾಸ ಮೂರ್ತಿ ಪುಲಿಕೇಶಿ ನಗರದಿಂದ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ, 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶ್ರಿನಿವಾಸ್ ಮೂರ್ತಿ ವಿರುದ್ಧ ಪ್ರಸನ್ನ ಕುಮಾರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿ ಪುಲಿಕೇಶಿ ನಗರದಿಂದ ಕಣಕ್ಕಳಿದಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ವ್ಯಕ್ತಿಗಿಂತ ಪಕ್ಷ ಮುಖ್ಯವಾಗುತ್ತದೆ, ಆಧರೆ ಸ್ಥಳೀಯ ಕಾರ್ಪೋರೇಷನ್ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗಳಿಗೆ ಮಹತ್ವ ನೀಡಲಾಗುತ್ತದೆ,ಏಕೆಂದರೇ ಅಭ್ಯರ್ಥಿಗಳ ಜೊತೆ ಅಲ್ಲಿನ ನಿವಾಸಿಗಳ ನೇರ ಸಂಪರ್ಕ ಇರುತ್ತದೆ ಎಂದು ಸಿಟಿಜನ್ ಆ್ಯಕ್ಷನ್ ಫೋರಂ ನ ಜಂಟಿ ಕಾರ್ಯದರ್ಶಿ ಎನ್ ಮುಕುಂದ್ ಹೇಳಿದ್ದಾರೆ.
ಆದರೆ ವಿಧಾನಸಭೆ ಚುನಾವಣೆ ವೇಳೆ ವ್ಯಕ್ತಿ ಹಾಗೂ ಪಕ್ಷ ಎರಡು ಮುಖ್ಯವಾಗಿರುತ್ತದೆ. ಮತದಾರರು ಅಭ್ಯರ್ಥಿಗಳ ಗೆಲುವು ಹಿಂದಿನ ದಾಖಲೆಗಳ ಮೇಲೆ ನಿಂತಿರುತ್ತದೆ ಎಂದು ಹೇಳಿದ್ದಾರೆ.