ಸಿದ್ದರಾಮಯ್ಯ-ಶ್ರೀರಾಮುಲು 
ರಾಜಕೀಯ

ಬಾದಾಮಿ ಫಲಿತಾಂಶದ ಮೇಲೆ ನಿಂತಿರುವ ರಾಜ್ಯ ರಾಜಕೀಯದ ಭವಿಷ್ಯ

ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಮತದಾನಕ್ಕೆ ಇನ್ನು ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು...

ಬಾದಾಮಿ: ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಮತದಾನಕ್ಕೆ ಇನ್ನು ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು, ಬಾದಾಮಿ ಕ್ಷೇತ್ರದ ಫಲಿತಾಂಶದ ಮೇಲೆ ರಾಜ್ಯದ ಪ್ರಮುಖ ರಾಜಕೀಯ ಮುಖಂಡರ ದೃಷ್ಟಿ ನೆಟ್ಟಿದೆ. ಸಿದ್ದರಾಮಯ್ಯನವರಿಗೆ ಬಾದಾಮಿ ಕ್ಷೇತ್ರ ಪ್ರತಿಷ್ಠೆಯ ಕಣವಾದರೆ ಅವರು ಗೆದ್ದರೆ ಕರ್ನಾಟಕದ ಕಾಂಗ್ರೆಸ್ ನಾಯಕರಾಗುವುದಂತೂ ಸತ್ಯ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವುದು ಅನುಮಾನವಾದಾಗ ಸುರಕ್ಷತೆಗಾಗಿ ಬಾದಾಮಿ ಕ್ಷೇತ್ರವನ್ನು ಆಯ್ದುಕೊಂಡರು ಎಂಬ ಟೀಕೆ ವಿರೋಧ ಪಕ್ಷಗಳದ್ದು.

ಕುರುಬ ಜನಾಂಗ ಅಧಿಕ ಸಂಖ್ಯೆಯಲ್ಲಿರುವ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸುಲಭವಾಗಿ ಗೆಲ್ಲಬಹುದು ಎಂಬ ಗ್ರಹಿಕೆಯಿಂದ ಆ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ ಎಂದು ಅರಿತ ಬಿಜೆಪಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿತು. ಸಾಂಪ್ರದಾಯಿಕ ಲಿಂಗಾಯತ ಮತಗಳನ್ನು ಹೊರತುಪಡಿಸಿ ಪರಿಶಿಷ್ಟ ಪಂಗಡದ ಮತಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು.

ಈ ಮಧ್ಯೆ ಜೆಡಿಎಸ್, ಕಾಂಗ್ರೆಸ್ ನಿಂದ ಬಂದ ಹನಮಂತ್ ಮಾವಿನಮರದ್ ಅವರನ್ನು ಕಣಕ್ಕಿಳಿಸಿದೆ. ಪಂಚಮಸಾಲಿ ಲಿಂಗಾಯತ ಧರ್ಮಕ್ಕೆ ಸೇರಿರುವ ಹನಮಂತ್ ಫಲಿತಾಂಶದಲ್ಲಿ ಅಚ್ಚರಿ ಬದಲಾವಣೆ ತರಲೂಬಹುದು.

ಇಲ್ಲಿ ಯಾವುದೇ ಅಭ್ಯರ್ಥಿಯ ಭವಿಷ್ಯ ಅನಿಶ್ಚಿತತೆಯಿಂದ ಇದ್ದರೂ ಕೂಡ ಪ್ರಮುಖ ಜಾತಿ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯನವರ ಪರ ಒಲವು ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಒಟ್ಟಾರೆ 2.14 ಲಕ್ಷ ಮತದಾರರಿದ್ದು ಅವರಲ್ಲಿ ಶೇಕಡಾ 25ರಷ್ಟು ಅಂದರೆ ಸುಮಾರು 52,000 ಮಂದಿ ಕುರುಬ ಸಮುದಾಯದವರು.

ಗ್ರಾಮೀಣ ಮತದಾರರು ತಮ್ಮ ಜಾತಿಯ ಅಭ್ಯರ್ಥಿ ಪರ ಮತ ಹಾಕುವ ಸಾಧ್ಯತೆ ಹೆಚ್ಚಾಗಿದ್ದು ಕುರುಬ ಮತದಾರರು ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ. ಮಾಜಿ ಶಾಸಕ ಭೀಮಪ್ಪ ಚಿಮ್ಮನಕಟ್ಟಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದವರು ಕುರುಬ ಸಮುದಾಯದವರು. ಕುರುಬ ಸಮುದಾಯ ಸಿದ್ದರಾಮಯ್ಯನವರಿಗೆ ಮತ ಹಾಕಬಹುದು ಎನ್ನುತ್ತಾರೆ ಗ್ರಾಮ ಪಂಚಾಯತ್ ಸದಸ್ಯ ಶಂಕರಪ್ಪ ಮುಚ್ಚಲಗೂಡು.

ಇತ್ತೀಚೆಗೆ ಸಿದ್ದರಾಮಯ್ಯನವರು ಇಲ್ಲಿ ಮತ ಪ್ರಚಾರ ಮಾಡಿದ್ದು ತಾಲ್ಲೂಕು ಕೇಂದ್ರಗಳಿಗಿಂತ ಹೆಚ್ಚಾಗಿ ಗ್ರಾಮಾಂತರ ಪ್ರದೇಶದಲ್ಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT