ಪ್ರಧಾನಿ ನರೇಂದ್ರ ಮೋದಿ 
ರಾಜಕೀಯ

ಬೆಂಗಳೂರಿಗೆ ಕೆಟ್ಟ ಹೆಸರು ತರಬಹುದಾದ ಎಲ್ಲಾ ಕೆಲಸವನ್ನೂ ಕಾಂಗ್ರೆಸ್ ಸರ್ಕಾರ ಮಾಡಿದೆ: ಪ್ರಧಾನಿ ಮೋದಿ

ಸಿದ್ಧರಾಮಯ್ಯನವರಿಗೆ ಬೆಂಗಳೂರಿನ ಮೇಲೆ ಅದೆಷ್ಟು ದ್ವೇಷ ಇದೆಯೆಂದರೆ, ಈ ನಗರವನ್ನು ಹದಗೆಡಿಸುವದಕ್ಕೆ 3 ಜನರಿಗೆ ಗುತ್ತಿಗೆ ಕೊಟ್ಟಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ದಿನ ಬಾಕಿ ಇರುವಂತೆಯೇ  ಪ್ರಚಾರದ ಅಖಾಡ ಮತ್ತಷ್ಟು ರಂಗು ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವಾಕ್ ಸಮರ ಮುಂದುವರೆದಿದೆ. ಇಂದು ರಾಜ್ಯದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ,  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಸವನಗುಡಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಸಿದ್ಧರಾಮಯ್ಯನವರಿಗೆ ಬೆಂಗಳೂರಿನ ಮೇಲೆ ಅದೆಷ್ಟು ದ್ವೇಷ ಇದೆಯೆಂದರೆ, ಈ ನಗರವನ್ನು ಹದಗೆಡಿಸುವದಕ್ಕೆ 3 ಜನರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಪರಸ್ಪರ ಜಿದ್ದಿಗೆ ಬಿದ್ದವರಂತೆ ಬೆಂಗಳೂರನ್ನು ಹಾಳು ಮಾಡುತ್ತಿದ್ದಾರೆ  ಎಂದು ಆರೋಪಿಸಿದರು.

ಸಿದ್ಧರಾಮಯ್ಯ ವೋಟ್ ಬ್ಯಾಂಕಿನ ಆಸೆಗಾಗಿ ವಿಶ್ವವಿಖ್ಯಾತವಾಗಿರುವ ಬೆಂಗಳೂರನ್ನು ಈ ತ್ರಿವಳಿ ನಾಯಕರ ಕೈಗೆ ಒಪ್ಪಿಸಿ ಈ ಮಹಾನ್ ನಗರಕ್ಕೆ ಕುಖ್ಯಾತಿ ತಂದಿದ್ದಾರೆ ಸ್ವಲ್ಪ ಮಳೆ ಬಂದರೂ ಸಹ ಬೆಂಗಳೂರು ಇಂದು ನಡುಗಡ್ಡೆಯ ಥರಾ ಮುಳುಗಡೆ ನಗರವಾಗಿ ಮಾರ್ಪಾಡಾಗುತ್ತದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದ್ದ ಸರ್ಕಾರ ಸೂಟ್ ಕೇಸ್ ವ್ಯವಹಾರದಲ್ಲಿ ಮುಳುಗಿದೆ ಎಂದು ಆಪಾದಿಸಿದರು.

ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷಗಳಲ್ಲಿ ಬೆಂಗಳೂರನ್ನು ಕೊಳಚೆ ನಗರವಾಗಿ ಪರಿವರ್ತಿಸಿದೆ. ನಮ್ಮ ಹೊಸ ಸರ್ಕಾರ ಬಂದ ತಕ್ಷಣವೇ ಈ ನಗರವನ್ನು ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ನಾವು ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ವಚನಗಳನ್ನು ಪೂರೈಸಲು ನಮ್ಮ ಸರ್ಕಾರದ ಪ್ರಥಮ ಸಂಪುಟ ಸಭೆಯಲ್ಲೇ ನೀಲ ನಕ್ಷೆ ತಯಾರಿಸಲಿದ್ದೇವೆ ಎಂದು ಹೇಳಿದರು.

ಭಾರತದ ಅಭಿವೃದ್ಧಿಯನ್ನು ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳು ಹಾಡಿ ಹೊಗಳುತ್ತಿವೆ. ವಿದೇಶಿ ಬಂಡವಾಳ ಹೂಡಿಕೆ ಆಕರ್ಷಣೆಯ ಅಗ್ರಗಣ್ಯ ರಾಷ್ಟ್ರಗಳಲ್ಲಿ ಭಾರತ ಕೂಡಾ ಒಂದು ಪ್ರತಿಯೊಬ್ಬ ಭಾರತೀಯ ಕೂಡಾ ಹೆಮ್ಮೆಪಡುವಂತಹ ಕಾಮಗಾರಿಗಳು ದೇಶದಲ್ಲಿ ನಡೆಯುತ್ತಿವೆ. ರೈಲ್ವೆ ಅಭಿವೃದ್ಧಿ, ವಿದ್ಯುದೀಕರಣ, ಗ್ಯಾಸ್ ಸಂಪರ್ಕ, ರಸ್ತೆ ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ದಾಖಲೆಯ ಮಟ್ಟದಲ್ಲಿ ಪ್ರಗತಿಯ ದಾಪುಗಾಲು ಹಾಕುತ್ತಿದೆ ಎಂದು ತಿಳಿಸಿದರು.

ರವಿ ಕಾಣದ್ದನ್ನು ಕವಿ ಕಂಡ' ಎಂಬ ಮಾತಿದೆ. ತಮ್ಮ ಪ್ರಣಾಳಿಕೆಯನ್ನು 'ನಾಲ್ಕನೇ ಮಹಾಕಾವ್ಯ'ಎಂದು ಕಾಂಗ್ರೆಸ್ ನವರು ಹೇಳಿದ್ದರು. ಆದರೆ, ಅವರ ಪ್ರಣಾಳಿಕೆಯ ಪ್ರತಿಯೊಂದು ಸಾಲಿನಲ್ಲೂ ಕೂಡಾ ಕನ್ನಡದ ಕೊಲೆಯಾಗಿದೆ ನಮ್ಮ ಪ್ರಣಾಳಿಕೆ ಕಾಂಗ್ರೆಸ್ ನ ತರಹ ಹುಸಿ ಕನಸನ್ನು ಬಿತ್ತಿದ 'ಮಹಾಕಾವ್ಯ'ದ ಥರ ಅಲ್ಲ. ನಮ್ಮದು 'ವಚನ' ಕೊಡುವ ಹಾಗೂ ಕೊಟ್ಟ ವಚನವನ್ನು ಪರಿಪೂರ್ಣವಾಗಿ ಪಾಲಿಸುವ ಪಕ್ಷವಾಗಿದೆ ಎಂದರು.

ಸಿದ್ದರಾಮಯ್ಯ  ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ವ್ಯವಸ್ಥೆಯನ್ನು ಹಾಳು ಮಾಡಿದ್ದು, ನಾಮಕಾವಸ್ಥೆಗೆ ಎಸಿಬಿಯನ್ನು ಸ್ಥಾಪನೆ ಮಾಡಿದೆ. ಸಿದ್ದರಾಮಯ್ಯ ನಡತೆ ಪ್ರಮಾಣ ಪತ್ರವನ್ನು ಸೂಟ್ ಕೇಸ್ ನಲ್ಲಿಟ್ಟುಕೊಂಡು  ಓಡಾಡುತ್ತಿರುತ್ತಾರೆ ಎಂದು ಹೇಳಿದರು.

ರೈತರು ನೆಮ್ಮದಿಯಾಗಿ ಬದುಕಲು, ಯುವ ಜನಾಂಗಕ್ಕೆ ಉತ್ತಮ ಶಿಕ್ಷಣ ಕೌಶಾಲ್ಯಾಭಿವೃದ್ದಿ, ಒದಗಿಸುವ ಮೂಲಕ ಉತ್ತಮ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗುವುದು, ಸಮಾಜ ಒಡೆಯುವ ರಾಜಕಾರಣಕ್ಕೆ ಅಂತ್ಯ ಹಾಡಲಾಗುವುದು, ಮಹಿಳೆಯರಿಗೆ ಸುರಕ್ಷತೆ ಒದಗಿಸಲಾಗುವುದು ಎಂದು ನರೇಂದ್ರಮೋದಿ ಭರವಸೆ ನೀಡಿದರು.

ಡಾ. ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಲೇ  ಐದು ಮಂದಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಮನ ಮೋಹನ್ ಸಿಂಗ್ ಅವರನ್ನು ಸೋನಿಯಾಗಾಂಧಿ ನಿಯಂತ್ರಿಸುತ್ತಿದ್ದರು ಎಂದು ನರೇಂದ್ರಮೋದಿ ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಕೂಡಾ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ನಮ್ಮ ಸಂಕಲ್ಪ ಸಾವಿರ ದಿನಗಳಲ್ಲಿ ಈ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಒದಗಿಸುವುದಾಗಿತ್ತು. ನಮ್ಮ ಸಂಕಲ್ಪವನ್ನು ಸಾಧಿಸಿದ ತೃಪ್ತಿ ನಮ್ಮ ಸರ್ಕಾರಕ್ಕಿದೆ ಎಂದರು.

ದೇಶದಲ್ಲಿ ಇನ್ನೂ4 ಕೋಟಿ ಕುಟುಂಬಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿವೆ. ಸೌಭಾಗ್ಯ ಯೋಜನೆಯಡಿ ವಿದ್ಯುತ್ ಇರದ ದೇಶದ 4 ಕೋಟಿ ಕುಟುಂಬಗಳಿಗೆ ಒಂದು ವರ್ಷದಲ್ಲಿ ಉಚಿತ ವಿದ್ಯುತ್ ಸಂಪರ್ಕ ಒದಗಿಸುತ್ತೇವೆ ಎಂದು ಹೇಳಿದರು.

ದಿವ್ಯಾಂಗರ ಪರ ನಮಗಿರುವ ಸಂವೇದನೆಯ ಕಾರಣದಿಂದ ಅವರಿಗೆ ಸಿಗಬೇಕಾದ ಮೀಸಲಾತಿಯನ್ನು ಹೆಚ್ಚಿಸಿದ್ದು ಬಿಜೆಪಿಯ ಸಾಧನೆ. ದಿವ್ಯಾಂಗರಿಗೆ ಅಗತ್ಯವಾದ ಸಾಧನಗಳನ್ನು ಒದಗಿಸಿ, 5 ಸಾವಿರಕ್ಕೂ ಹೆಚ್ಚು ಕ್ಯಾಂಪ್ ಗಳನ್ನು ನಡೆಸಿದ್ದು ನಮ್ಮ ಸಾಧನೆಯಾಗಿದೆ ಎಂದರು.

ಯುಪಿಎ  ಸರ್ಕಾರದ ಕಾಲದಲ್ಲಿ ಇಡೀ ದೇಶದಲ್ಲಿ ಕೇವಲ 2 ಮೊಬೈಲ್ ಉತ್ಪಾದನಾ ಕಂಪನಿಗಳು ಮಾತ್ರ ಇದ್ದವು. ಈಗ ದೇಶದಲ್ಲಿ 120 ಮೊಬೈಲ್ ಕಂಪೆನಿಗಳಿವೆ. ಮಿಷನ್ ಇಂದ್ರಧನುಷ್ ಮೂಲಕ ದೇಶದ ಎಲ್ಲ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಇಡೀ ದೇಶವನ್ನು ಸಂಪೂರ್ಣ ಆರೋಗ್ಯಯುತ ಗೊಳಿಸುವ ಸಂಕಲ್ಪ ನಮ್ಮದು ಎಂದು ನರೇಂದ್ರಮೋದಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್