ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳು
ಬೆಂಗಳೂರು: ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲವು ಕಷ್ಟವಾಗಿದೆ.
ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೃಷ್ಣಪ್ಪ ಕ್ಷೇತ್ರವನ್ನು ನಿರ್ಲಕ್ಷ್ಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿರುವುದರಿಂದ ಹಳ್ಳಿಗಳಿಗೆ ಮತ್ತು ಕೊಳಚೆ ಪ್ರದೇಶಗಳಲ್ಲಿ ಪ್ರಚಾರಕ್ಕೆ ಕೃಷ್ಣಪ್ಪ ತೆರಳಲಿಲ್ಲ.
ಕ್ಷೇತ್ರ ನಿರ್ಲಕ್ಷ್ಯ ಆರೋಪದ ಜೊತೆಗೆ ಕಾಂಗ್ರೆಸ್ ನ ಪ್ರತಿಸ್ಪರ್ಧಿ ಆರ್ ಕೆ ರಮೇಶ್ ಅವರಿಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಸಂಸದ ಡಿ.ಕೆ ಸುರೇಶ್ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗೂ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮುದಾಯದ ಮತದಾರರಿದ್ದಾರೆ. ಈ ಬಾರಿ ಚುನಾವಣೆಗಾಗಿ ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ರಮೇಶ್ ಉತ್ತಮ ಕೆಲಸ ಮಾಡಿದ್ದಾರೆ. ಜೊತೆಗೆ ರೆಡ್ಡಿ ಸಮುದಾಯದ ಮತಗಳು ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಪರವಾಗಿ ಬೀಳುವ ಸಾಧ್ಯತೆಗಳಿವೆ,
ಬಿಜೆಪಿ ಅಭ್ಯರ್ಥಿ ರಿಯಲ್ ಎಸ್ಟೇಟ್ ಸ್ನೇಹಿ ಎಂದು ಕೃಷ್ಣಪ್ಪ ಬಗ್ಗೆ ಇಲ್ಲಿನ ಜನರು ವ್ಯಂಗ್ಯವಾಡಿದ್ದಾರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರತಿ ಮೂಲೆ ಮೂಲೆಯಲ್ಲಿಯೂ ಅಪಾರ್ಟ್ ಮೆಂಟ್ ಗಳನ್ನು ಕಾಣಬಹುದಾಗಿದೆ.
ಮತ್ತೊಂದೆಡೆ ಶಾಸಕರು ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದಾರೆ . ಜೊತೆಗೆ ಜೆಡಿಎಸ್ ಅಭ್ಯರ್ಥಿ ಕೂಡ ಕಳೆದ 1 ವರ್ಷದಿಂದ ತಳ ಮಟ್ಟದ ಕೆಲಸ ಮಾಡುತ್ತಾ ಬಂದಿದ್ದಾರೆ.