ಈಶ್ವರಪ್ಪ ಮತ್ತು ಪ್ರಸನ್ನ ಕುಮಾರ್
ಶಿವಮೊಗ್ಗ: ಮೇ 5 ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಈ ವೇಳೆ ಮೋದಿಗಾಗಿ ನಾವು ಬಿಜೆಪಿಗೆ ಮತ ಹಾಕುತ್ತೇವೆ ಎಂದು ಮತದಾರರು ಘೋಷಣೆ ಕೂಗಿದ್ದರು. ಮತದಾರರನ್ನು ಉತ್ತೇಜಿಸಲು ಜಿಲ್ಲಾ ಬಿಜೆಪಿ ಮುಖಂಡರು ಉತ್ತಮ ಕೆಲಸಗಳನ್ನೇನೋ ಮಾಡುತ್ತಿದ್ದಾರೆ, ಆದರೆ ಶಿವಮೊಗ್ಗದಲ್ಲಿ ಈಶ್ವರಪ್ಪ ವಿರುದ್ಧ ಸ್ಪರ್ದಿಸಿರುವ ಅಭ್ಯರ್ಥಿಗಳು ಪ್ರಬಲರಾಗಿದ್ದು ತ್ರಿಕೋನ ಹಣಾಹಣಿ ನಡೆಯಲಿದೆ.
ಕಾಂಗ್ರೆಸ್ ನ ಕೆ,ಬಿ ಪ್ರಸನ್ನ ಕುಮಾರ್ ಮತ್ತು ಜೆಡಿಎಸ್ ನ ಎಚ್.ಎನ್ ನಿರಂಜನ ಪ್ರಬಲ ಅಭ್ಯರ್ಥಿಗಳಾಗಿದ್ದಾರೆ, ಈಶ್ವರಪ್ಪಗೆ ಇದು 7ನೇ ಹಾಗೂ ಪ್ರಸನ್ನ ಕುಮಾರ್ ಅವರಿಗೆ 2ನೇ ಚುನಾವಣೆಯಾಗಿದೆ.
1989, 1994, 2004 ನತ್ತು 2008 ರಲ್ಲಿ ಬಿಜೆಪಿಯಿಂದ ಈಶ್ವರಪ್ಪ ಗೆಲುವು ಸಾಧಿಸಿದ್ದರು, 1999 ಮತ್ತು 2013 ರಲ್ಲಿ ಸೋಲನುಭವಿಸಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನ ಕುಮಾರ್ ಜಯ ಗಳಿಸಿದ್ದರು. ಕೆಜೆಪಿ ಅಭ್ಯರ್ಥಿ ಎಸ್. ರುದ್ರೇಗೌಡ ಕೇವಲ 278 ಮತಗಳಿಂದ ಸೋತಿದ್ದರು, 2018ರ ಚುನಾವಣೆ ವಿಭಿನ್ನವಾಗಿಗೆ ಎಂದು ಈಶ್ವರಪ್ಪ ಹೇಳಿದ್ದಾರೆ, ಕೆಜೆಪಿಯ ರುದ್ರೇಗೌಡ ಅವರಿಗೆ ಹೋಗಿದ್ದ ಮತಗಳು ಈ ಬಾರಿ ನಮಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ,
ಹಿಂದುತ್ವಾ ಅಜೆಂಡಾ ಪ್ರಮುಖ ಅಂಶವಾಗಿದ್ದು ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಅನುಷ್ಠಾನ ವಿಳಂಬವಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ ಪ್ರಸನ್ನ ಕುಮಾರ್ ತಮ್ಮ ಸರ್ಕಾರದ ಜನಪ್ರಿಯ ಯೋಜನೆಗಳು ಹಾಗೂ ಸಾಧನೆಗಳನ್ನು ಮಾನದಂಡವಾಗಿರಿಸಿಕೊಂಡು ಮತ ಕೇಳುತ್ತಿದ್ದಾರೆ.
ರಸ್ತೆಗಳು ವಿವಿಧ ಭವನ ಮತ್ತು ಸಮುದಾಯ ಭವನ ನಿರ್ಮಿಸಲು ಅನುದಾನ ನೀಡಿದೆ,ಜೊತೆಗೆ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗೊಳಿಸಿದೆ, ಇದೆಲ್ಲಾದರ ಪ್ರಯೋಜನ ಪ್ರಸನ್ನ ಅವರಿಗೆ ಸಿಗುತ್ತಿದೆ,.ಕಳೆದ ಐದು ವರ್ಷಗಳಲ್ಲಿ ನಡೆದ ಎಲ್ಲಾ ಅಧಿವೇಶನಗಳಲ್ಲಿಯೂ ಭಾಗವಹಿಸಿರುವ ಪ್ರಸನ್ನ ಕುಮಾರ್ ಹಲವು ವಿಷಯಗಳ ಮೇಲೆ ಚರ್ಚೆ ನಡೆಸಿ ಗಮನ ಸೆಳೆದಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಿರಂಜನ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ, ಕಳೆದ 12 ದಿನಗಳಿಂದ ಬಿರುಸಿನ ಪ್ರಚಾರ ನಡೆಸುತ್ತಿರುವ ಅವರು ಸಣ್ಣ ಪುಟ್ಟ ಸ್ಲಂ ಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ, ಕುಮಾರ ಸ್ವಾಮಿ ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ನಾವು ಪ್ರಚಾರ ಮಾಡುತ್ತಿದ್ದೇವೆ, ರೇತರು ಹಾಗೂ ಉದ್ಯೋಗಸ್ಥ ವರ್ಗ ತಮ್ಮನ್ನು ಬೆಂಬಲಿಸುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಈ ಕ್ಷೇತ್ರದಲ್ಲಿ ಮುಸ್ಲಿಮ್ ಬ್ರಾಹ್ಮಣರು, ಪರಿಶಿಷ್ಟ ಜಾತಿ, ಲಿಂಗಾಯತ. ವೀರಶೈವ, ಒಖ್ಕಲಿಗ , ತಮಿಳರು ಹಾಗೂ ಕ್ರಿಶ್ಚಿಯನ್ ಸಮುದಾಯವಿದೆ, ಈ ಮೊದಲು ಬ್ರಾಹ್ಮಣ ಸಮುದಾಯ ಬಿಜೆಪಿ ಬೆಂಬಲಿಸುತ್ತಿತ್ತು,. ಆದರೆ ಈ ಬಾರಿ ಕಾಂಗ್ರೆಸ್ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ನಿಷ್ಠಾವಂತ ಮತಗಳು ವಿಭಜನೆಯಾಗುತ್ತದೆ.