ಕಾಂಗ್ರೆಸ್ ನಾಯಕ ಮೋಹನ್ ಪ್ರಕಾಶ್
ನವದೆಹಲಿ; ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಗೆಲುವಿನ ಹೊಸ್ತಿಲಿನಲ್ಲಿ ಬಿಜೆಪಿ ನಿಂತಿದೆ. ಈ ನಡುವಲ್ಲೇ ಕಾಂಗ್ರೆಸ್ ಮತ್ತೆ ಇವಿಎಂ ಕುರಿತು ಪ್ರಶ್ನೆ ಎತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಮೋಹನ್ ಪ್ರಕಾಶ್ ಅವರು, ಮೊದಲನೇ ದಿನದಿಂದಲೂ ನಾನೂ ಈ ಕುರಿತು ಹೇಳುತ್ತಲೇ ಬಂದಿದ್ದೇನೆ. ಭಾರತದಲ್ಲಿರುವ ಪ್ರತೀಯೊಂದು ರಾಜಕೀಯ ಪಕ್ಷವೂ ಇವಿಎಂ ಕುರಿತು ಪ್ರಶ್ನೆ ಎತ್ತಿದೆ. ಬಿಜೆಪಿ ಕೂಡ ಈ ಹಿಂದೆ ಪ್ರಶ್ನೆ ಮಾಡಿತ್ತು. ಇದೀಗ ಎಲ್ಲಾ ಪಕ್ಷಗಳೂ ಇವಿಎ ಕುರಿತು ಸಂಶಯ ವ್ಯಕ್ತಪಡಿಸುತ್ತಿದ್ದರೆ, ಚುನಾವಣೆಗೆ ಬ್ಯಾಲೆಟ್ ಬಳಸುವುದಕ್ಕೆ ಬಿಜೆಪಿಗೇನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.
ಸದ್ಯದ ಬೆಳವಣಿಗೆಗಳ ಪ್ರಕಾರ ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ, 40 ಸ್ಥಾನಗಳಲ್ಲಿ ಈಗಾಗಲೇ ಗೆಲವು ಸಾಧಿಸಿದ್ದು, ಸುಮಾರು 70 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, ಸರಳ ಬಹುಮತ ಪಡೆಯುವತ್ತ ಮುನ್ನುಗ್ಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ ರಚನೆ ಕಸರತ್ತಿಗೆ ಚಾಲನೆ ನೀಡಿದೆ. ಮತ ಎಣಿಕೆ ಪ್ರಕ್ರಿಯೆ ಮುಂದುವರೆಯುತ್ತಿರುವ ಬೆನ್ನಲ್ಲೇ ಬಿ.ಎಸ್.ಯಡಿಯೂರಪ್ಪ ಅವರಿಗೆ ದೆಹಲಿಗೆ ಆಗಮಿಸುವಂತೆ ಕರೆ ಬಂದಿದ್ದು, ಸಂಜೆ 6 ಗಂಟೆಗೆ ದೆಹಲಿಯಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಯಡಿಯೂರಪ್ಪ ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗುವ ನಿರೀಕ್ಷೆಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics