ರಾಜಕೀಯ

ಕುಮಾರಸ್ವಾಮಿ ಸನ್ನಿವೇಶದ ಶಿಶು:37 ಶಾಸಕರನ್ನಿಟ್ಟುಕೊಂಡು ಸಾಲಮನ್ನಾ ಸಾಧ್ಯವಿಲ್ಲ: ದೇವೇಗೌಡ

Shilpa D
ಬೆಂಗಳೂರು: 37 ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಮಾಡುವುದಾದರೂ ಹೇಗೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಬೇಸರದ ಮಾತುಗಳನ್ನು ಆಡಿದ್ದಾರೆ. 
ಕಾಂಗ್ರೆಸ್ ಮುಲಾಜಿನಲ್ಲಿದೆನೆಂಬ ಕುಮಾರಸ್ವಾಮಿ ಹೇಳಿಕೆ ನೀಡಿದ ಪ್ರತಿಕ್ರಿಯಿಸಿರುವ ದೇವೇಗೌಡರು ಕುಮಾರಸ್ವಾಮಿ ಸನ್ನಿವೇಶದ ಶಿಶು, ಹೆಚ್ಡಿಕೆ ಹೇಳುತ್ತಿರುವುದು ನಿಜ ನನಗೂ ಈ ವಿಚಾರವಾಗಿ ನೋವಿದೆ ರಾಜ್ಯದ ಆರೂವರೆ ಕೋಟಿ ಜನ ಹೆಚ್ಡಿಕೆ ಗೆ ಬೆಂಬಲ ನೀಡಿಲ್ಲ ಕೇವಲ 37 ಶಾಸಕರನ್ನು ಇಟ್ಟುಕೊಂಡು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಪದವಿಯನ್ನು ಕಾಂಗ್ರೆಸ್ ಪಡೆದುಕೊಳ್ಳಲಿ ಎಂದು ನಾನು ಹೇಳಿದ್ದೆ ಆದರೆ ಕಾಂಗ್ರೆಸ್ ನವರು ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಪದವಿಯನ್ನು ಪಡೆಯಬೇಕು ಎಂದು ಹೇಳಿದ್ದಾರೆ. ಹಣಕಾಸು ಇಲಾಖೆಯನ್ನು ಕಾಂಗ್ರೆಸ್ ತನಗೆ ಬೇಕೆಂದು ಕೇಳುತ್ತಿದೆ. 
ಒಟ್ಟಾರೆಯಾಗಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ ಮೈತ್ರಿಯಲ್ಲಿ ನಡೆಯುತ್ತಿಲ್ಲ ಎಂಬ ಆತಂಕದ ನುಡಿಯನ್ನು ದೇವೇಗೌಡರು ನುಡಿದ್ದಿದ್ದಾರೆ.  ಕುಮಾರ ಸ್ವಾಮಿ  ಪ್ರಧಾನಿ ಮೋದಿ ಹಾಗೂ ರಾಜ್ಯದ ಸಂಸದರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ, ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿದೆ, ಈ ಸಂಬಂಧ ಎಚ್.ಡಿಕೆ  ಪ್ರಧಾನಿ ಜೊತೆ ಚರ್ಚಿಸಿಲಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
SCROLL FOR NEXT