ಶಾಸಕ ರೋಶನ್ ಬೇಗ್ 
ರಾಜಕೀಯ

ರಾಮ ಮಂದಿರವನ್ನು ಭಾರತದಲ್ಲಿ ನಿರ್ಮಿಸದಿದ್ದರೆ, ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ?: ರೋಶನ್ ಬೇಗ್

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸಲ್ಮಾನರ ವಿರೋಧವಿಲ್ಲ, ಲೋಕಸಭೆ ಚುನಾವಣೆ ...

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸಲ್ಮಾನರ ವಿರೋಧವಿಲ್ಲ, ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವುದರಿಂದ ಭಾರತೀಯ ಜನತಾ ಪಾರ್ಟಿ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ, ಶಾಸಕ ರೋಶನ್ ಬೇಗ್ ಆರೋಪಿಸಿದ್ದಾರೆ. ರಾಮಮಂದಿರ ಭಾರತದಲ್ಲಿ ನಿರ್ಮಾಣವಾಗದಿದ್ದರೆ, ಪಾಕಿಸ್ತಾನದಲ್ಲಿ ಕಟ್ಟಲು ಆಗುತ್ತದೆಯೇ ಎಂದು ಅವರು ಕೇಳಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಎಂದಿಗೂ ಅಡ್ಡಿಪಡಿಸಿಲ್ಲ ಮತ್ತು ಅಡ್ಡಿಪಡಿಸುವುದೂ ಇಲ್ಲ, ಭಾರತದಲ್ಲಿ ರಾಮಮಂದಿರ ನಿರ್ಮಿಸಲು ಸಾಧ್ಯವಾಗದಿದ್ದರೆ ಪಾಕಿಸ್ತಾನದಲ್ಲಿ ಕಟ್ಟಬೇಕೆ, ಅದು ಭಾರತದಲ್ಲಿಯೇ ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ  ನಡೆಸಿದ ಅವರು, ಭಾರತೀಯ ಜನತಾ ಪಾರ್ಟಿ ಹಿಂದೂ ಮತ್ತು ಮುಸ್ಲಿಂರ ಮಧ್ಯೆ ಬಿಕ್ಕಟ್ಟು ತಂದೊಡ್ಡುತ್ತಿದೆ. ರಾಮಮಂದಿರ ವಿವಾದ ಕೋರ್ಟ್ ನಲ್ಲಿದೆ. ಬಿಜೆಪಿಯವರು ಸುಮ್ಮನೆ ಹಿಂದೂ ಮತ್ತು ಮುಸ್ಲಿಂರ ಮಧ್ಯೆ ಸಂಘರ್ಷ ತಂದೊಡ್ಡುತ್ತಿದ್ದಾರೆ ಎಂದರು.

ಮುಂದಿನ ಕೆಲವೇ ತಿಂಗಳಲ್ಲಿ ಸಂಸತ್ತು ಚುನಾವಣೆ ಇರುವುದರಿಂದ ಬಿಜೆಪಿ ರಾಮಮಂದಿರ ನಿರ್ಮಾಣ ಕುರಿತು ವಿಧೇಯಕ ತರಲು ಯತ್ನಿಸುತ್ತಿದೆ. ದೇಶದ ಬಹುತೇಕ ಮಂದಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಕೆಲಸಗಳ ಬಗ್ಗೆ ಅಸಮಾಧಾನ ಇರುವುದರಿಂದ ಬಿಜೆಪಿಯವರು ರಾಮಮಂದಿರ ವಿಚಾರವನ್ನು ಸುಮ್ಮನೆ ಕೆಣಕುತ್ತಿದ್ದಾರೆ ಎಂದರು.

ಬಿಜೆಪಿಯವರು ವಿಧೇಯಕ ತರಲು ಈಗ ಪ್ರಯತ್ನಿಸುತ್ತಿದ್ದಾರೆ. ಇದೇ ಕೆಲಸವನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಏಕೆ ಮಾಡಲಿಲ್ಲ. ತಮ್ಮ ಬಗ್ಗೆ ಜನತೆಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂಬುದು ಬಿಜೆಪಿಯವರಿಗೆ ಗೊತ್ತಾಗಿದೆ, ಹೀಗಾಗಿ ರಾಮಮಂದಿರ ಕುರಿತು ವಿಧೇಯಕ ತರಲು ಯತ್ನಿಸುತ್ತಿದ್ದಾರೆ ಎಂದು ರೋಶನ್ ಬೇಗ್ ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್