ರಾಜಕೀಯ

ಲೋಕಸಭೆ ಚುನಾವಣೆ 2019: ಬಿಜೆಪಿ ಹಾಲಿ ಸಂಸದರಿಗಿಲ್ಲ ಟಿಕೆಟ್? ಹೊಸ ಮುಖಗಳೇ ಟಾರ್ಗೆಟ್!

Shilpa D
ಬೆಂಗಳೂರು: ಕರ್ನಾಟಕದ ಹಾಲಿ 15 ಸಂಸದರು ಗೆಲ್ಲುವ ಅವಶ್ಯಕತೆ ಬಿಜೆಪಿ ಹೈಕಮಾಂಡ್ ಗಿಲ್ಲ, ಕರ್ನಾಟಕದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ 22 ಗೆಲ್ಲುವ  ವಿಶ್ವಾಸವನ್ನು ಬಿಜೆಪಿ ಹೊಂದಿದೆ, ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ಕೊಡದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ, ಹೀಗಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಅವಕಾಶ ಕೊಡಲು ನಿರ್ಧರಿಸಲಾಗಿದೆ.
ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ 50 ವರ್ಷ ವಯಸ್ಸಿನ ಕೆಳಗಿನ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸಿದೆ, ರಾಜ್ಯದ ಕೆಲವು ಸಂಸದರನ್ನು ಬದಿಗಿಟ್ಟ ಸಮರ್ಥ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುವುದು ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರದ ಜನಸಂಖ್ಯೆ, ಪಕ್ಷದೆಡೆಗಿನ ನಿಷ್ಠೆ, ತತ್ವ ಸಿದ್ಧಾಂತಗಳ ಮೌಲ್ಯಮಾಪನದೊಂದಿಗೆ ಹೊಸಬರಿಗೆ ಅವಕಾಶ ನೀಡಲಿದೆ.,ಸದ್ಯದ ಪರಿಸ್ಥತಿಯಲ್ಲಿ ಬಿಜೆಪಿ 12 ಸೀಟುಗಳನ್ನು ಗೆಲ್ಲುವ ಶಕ್ತಿ ಹೊಂದಿದೆ, ಮತ್ತಷ್ಟು ಸೀಟುಗಳನ್ನು ಗೆಲ್ಲುವ ದೃಷ್ಟಿಯಿಂದ ಬೂತ್ ಲೆವೆಲ್ ನಲ್ಲಿ ಕೆಲಸ ಮಾಡಲು ಮುಂದಾಗಿದೆ. ಇತ್ತೀಚಿನ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದೆ ಎಂದು ಬಿಜೆಪಿ ಪದಾದಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ನವೆಂಬರ್ 3ನೇ ತಾರಿಖಿನಂದು ನಡೆಯುವ  3 ಕ್ಷೇತ್ರಗಳ ಲೋಕಸಭೆ ಉಪ ಚುನಾವಣೆಗೂ ಬಿಜೆಪಿ ಸಿದ್ದತೆ ನಡೆಸುತ್ತಿದೆ. ಬಳ್ಳಾರಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡಲಿದ್ದು, ಹೈ ವೋಲ್ಟೇಜ್ ಕಣವಾಗಲಿದೆ, ಮೂರು ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸ ಹೊಂದಿದೆ.
SCROLL FOR NEXT