ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಫುಡ್ ಫೆಸ್ಟಿವಲ್ ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ತಮ್ಮ ಎಂಜಲೆಲೆಯಲ್ಲಿದ್ದ ಊಟವನ್ನು ಬಲವಂತವಾಗಿ ಪೊಲೀಸರಿಗೆ ತಿನ್ನಿಸಿರುವ ಫೋಟೋಗಳು ವೈರಲ್ ಆಗಿದೆ.
ಸ್ಕೌಡ್ಸ್ ಅಂಡ್ ಗೈಡ್ ಮೈದಾನದಲ್ಲಿ ಫುಡ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದ ಜಮೀರ್ ಅಹ್ಮದ್ ಮೈಸೂರು ಊಟವನ್ನು ಗಡದ್ದಾಗಿ ತಿಂದಿದ್ದಾರೆ. ನಂತರ ಊಟದ ಎಲೆಯಲ್ಲಿ ಮಿಕ್ಕಿದ್ದ ಊಟವನ್ನು ಇಲ್ಲಿ ಬನ್ನಿ ಅಂತಾ ಪೊಲೀಸರನ್ನು ಕರೆದು ಒಬ್ಬರಿಗೆ ಬಾಯಿಗೆ ಎಂಜಲು ಕೈಯಲ್ಲಿ ತುತ್ತು ತಿನಿಸಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ.
ಸಚಿವರ ಕೈ ತುತ್ತಿಗೆ ಬೇಡ ಅನ್ನೋದಕ್ಕೂ ಆಗದೇ ಪೊಲೀಸ್ ಪೇದೆಗಳು ಬಾಯಿ ಒರೆಸಿಕೊಂಡು ಸುಮ್ಮನಾದರು. ಆದರೆ ಸಚಿವ ಈ ನಡೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.