ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾವಿನ ವಿಚಾರ ಪ್ರಸ್ತಾಪಿಸಿ ಕಣ್ಣೀರಿಟ್ಟಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇದೀಗ ಮತ್ತೆ ಭಾವುಕರಾಗಿ ಅಂತಹುದ್ದೇ ಮಾತುಗಳನ್ನಾಡಿರುವುದಕ್ಕೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ನಿನ್ನೆಯಷ್ಟೇ ಮಂಡ್ಯ, ಮಳವಳ್ಳಿ ಮದ್ದೂರುಗಳಲ್ಲಿ ಪ್ರಚಾರ ಭಾಷಣ ಮಾಡಿದ್ದ ಕುಮಾರಸ್ವಾಮಿಯವರು, ನಾನು ಸಾಯೋದಾಗಿದ್ರೆ ಇಸ್ರೇಲ್ ನಲ್ಲಿಯೇ ಸಾಯಬೇಕಿತ್ತು. ಯಾವತ್ತು ಸಾಯುತ್ತೇನೋ ಗೊತ್ತಿಲ್ಲ. ಬದುಕಿರುವ ತನಕ ನಂಬಿದ ಜನರನ್ನು ಉಳಿಸುತ್ತೇನೆ. ಜನರ ಹಣ ಕೊಳ್ಳೆ ಹೊಡೆಯುವ ದರಿದ್ರ ನನಗೆ ಬಂದಿಲ್ಲ. ನಾಡಿನ ಜನತೆಗೆ ದ್ರೋಹ ಮಾಡಿ ಎಂದಿಗೂ ಬದುಕುವುದಿಲ್ಲ. ನಾಡಿನ ಜನತೆಗೆ ದ್ರೋಹ ಮಾಡಿ ಎಂದಿಗೂ ಬದುಕುವುದಿಲ್ಲ ಎಂದು ಭಾವನಾತ್ಮಕವಾಗಿ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು, ಕುಮಾರಸ್ವಾಮಿಯವರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಹಿಡಿದು ಭಾವನಾತ್ಮಕ ಭಾಷಣ ಮಾಡುವುದನ್ನು ನಿಲ್ಲಿಸಬೇಕು. ಭಾವನಾತ್ಮಕವಾಗಿ ಮಾತನಾಡುವ ಬದಲು ಅಭಿವೃದ್ಧಿ ಕಾರ್ಯಗಳು ಹಾಗೂ ಉತ್ತಮ ಆಡಳಿತದತ್ತ ಗಮನ ಹರಿಸಬೇಕೆಂದು ಹೇಳಿದ್ದಾರೆ.
ರಾಜ್ಯದಲ್ಲಿ ಜನರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ನಿಮ್ಮ ಭಾವನಾತ್ಮಕ ಭಾಷೆಗಳು ಜನರ ಮೇಲೆ ಯಾವುದೇ ರೀತಿಯ ಪರಿಣಾಮಗಳು ಬೀರುವುದಿಲ್ಲ. ಜನರ ಸಹಾಯಕ್ಕೂ ಬರುವುದಿಲ್ಲ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಮಂಡ್ಯ ಅಭಿವೃದ್ಧಿಗಾಗಿ ಏನನ್ನೂ ಮಾಡುತ್ತಿಲ್ಲ. ಮಂಡ್ಯ ಜಿಲ್ಲೆ ಅವರ ರಾಜಕೀಯ ಭವಿಷ್ಯಕ್ಕೆ ಮರುಜನ್ಮ ನೀಡಿದೆ. ಅವರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿಯನ್ನಾಗಿದೆ ಮಾಡಿದೆ. ಆದರೆ, ಇಂತಹ ಜಿಲ್ಲೆಗೆ ಅವರು ಏನನ್ನೂ ಮಾಡುತ್ತಿಲ್ಲ. ನಾನು ಮಂಡ್ಯ ಜಿಲ್ಲೆಯಲ್ಲಿಯೇ ಹುಟ್ಟಿದರೂ, ಒಂದು ಬಾರಿ ಕೂಡ ಮಂಡ್ಯ ಜಿಲ್ಲೆಯಲ್ಲಿ ಗೆಲವು ಸಾಧಿಸಲಿಲ್ಲ. ಆದರೂ ಮುಖ್ಮಯಂತ್ರಿಯಾಗಿ ಇಲ್ಲಿನ ಅಭಿವೃದ್ಧಿಗಾಗಿ ಕೋಟ್ಯಾಂತರ ಹಣವನ್ನು ಬಿಡುಗಡೆ ಮಾಡಿದ್ದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics