ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ತಂದೆ ಮಾಜಿ ಪ್ರಧಾನಿ ದೇವೇಗೌಡರನ್ನೇ ಮನೆಯಿಂದ ಹೊರಹಾಕಿದ್ದರು ಎಂದು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ಚಾಮಿ ಸಿಎಂ ವಿರುದ್ಧ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಜಿ ಪ್ರದಾನಿ ದೇವೇಗೌಡರನ್ನು ಕುಮಾರಸ್ವಾಮಿ ಮನೆಯಿಂದ ಹೊರಹಾಕಿದ್ದರು. ಕುಮಾರಪಾರ್ಕ್ನ ಹತ್ತಿರದ ಸಣ್ಣ ಮನೆಯಲ್ಲಿ ಅವರು ವಾಸ ಮಾಡುತ್ತಿದ್ದರು. ಬಾಕ್ಸ್ನಲ್ಲಿ ಅವರಿಗೆ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದವರು ನಾವು ಅವರ ಮಕ್ಕಳಲ್ಲ ಎಂದು ಹೇಳಿದ್ದಾರೆ,
ವಿ,ಎಸ್ ಉಗ್ರಪ್ಪ ದೇವೇಗೌಡರ ಬೆನ್ನು ಉಜ್ಜುತ್ತಿದ್ದರು. ಅವರನ್ನು ತಮ್ಮ ಮಾನಸ ಪುತ್ರ ಎಂದೇ ಹೇಳುತ್ತಿದ್ದರು, ಆದರೆ ಅಂಥವರೇ ಜೆಡಿಎಸ್ ತೊರೆದು ಬೇರೆ ಪಕ್ಷ ಸೇರಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಆಗ ಯಾವ ಮಕ್ಕಳು ದೇವೇಗೌಡರನ್ನು ನೋಡಿಕೊಳ್ಳುತ್ತಿರಲಿಲ್ಲ. ಈಗ ಕುಮಾರಸ್ವಾಮಿ ನನ್ನ ಮುಂದೆ ಬರಲಿ ಯಾಕಪ್ಪ ಅವತ್ತು ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಅಂತ ಕೇಳುತ್ತಿನೀ ಎಂದು ಶಾಸಕ ಮಾಧುಸ್ವಾಮಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ,
ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ ಯಾರೋ ಅವರಿಗೆ ಕಲ್ಲಲ್ಲಿ ಹೊಡೆದರು. ಆಗ ನಾನು ಅವರಿಗೆ ಎದೆಕೊಟ್ಟು ನಿಂತೆ. ನನ್ನ ಮಕ್ಕಳು ಈ ರೀತಿ ಏಟು ತಿನ್ನುತ್ತಿರಲಿಲ್ಲ ಎಂದು ನನ್ನ ತಬ್ಬಿಕೊಂಡು ದೇವೇಗೌಡರು ಅತ್ತಿದ್ದರು.
ಮಾಸನ ಪುತ್ರ ಬಿ.ಎಲ್ ಶಂಕರ್ ಮತ್ತು ವೈ.ಕೆ ರಾಮಯ್ಯ ಯಾಕೆ ಪಕ್ಷ ಬಿಟ್ಟು ಹೋದರು. ರಾಜಕೀಯ ಜೀವನದಲ್ಲಿ ನಾನು ಕುಮಾರಸ್ವಾಮಿಗಿಂತ ಹಿರಿಯನಾಗಿದ್ದೇನೆ ಎಂದು ಮಾಧುಸ್ವಾಮಿ ಆ ವಿಡಿಯೋದಲ್ಲಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics