ಯಡಿಯೂರಪ್ಪ 
ರಾಜಕೀಯ

ಸಚಿವ ಸ್ಥಾನಕ್ಕೆ ಹೆಚ್ಚಿದ ಒತ್ತಡ: ಬಿಎಸ್'ವೈಗೆ ಕಗ್ಗಂಟಾಗಿ ಪರಿಣಮಿಸಿದ ಸಂಪುಟ ವಿಸ್ತರಣೆ

ಉಪಚುನಾವಣೆ ಅಂತ್ಯಗೊಂಡ ಬಳಿಕ ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕರು ಇದೀಗ ಸಮಯವನ್ನು ವ್ಯರ್ಥ ಮಾಡದೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ಆರಂಭಿಸಿದ್ದಾರೆ. 

ಬೆಂಗಳೂರು: ಉಪಚುನಾವಣೆ ಅಂತ್ಯಗೊಂಡ ಬಳಿಕ ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕರು ಇದೀಗ ಸಮಯವನ್ನು ವ್ಯರ್ಥ ಮಾಡದೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ಆರಂಭಿಸಿದ್ದಾರೆ. 

ಜನವರಿ 15ಕ್ಕೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದ್ದು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಪ್ರತೀ ಕ್ಷಣವೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹಾತೊರೆಯುತ್ತಿದ್ದಾರೆ. 

ಜನವರಿ 15 ಅಂದರೆ ಸಂಕ್ರಾಂತಿ ಹಬ್ಬವಾದ ಬಳಿಕ ಸಂಪುಟ ವಿಸ್ತರಣೆಯಾಗಲಿದೆ. ಡಿಸೆಂಬರ್ 17ರಿಂದ ಜನವರಿ 14ರವರೆಗೂ ಶೂನ್ಯ ಮಾಸವಿರುವುದರಿಂದ ಈ ಸಮಯದಲ್ಲಿ ಯಾವುದೇ ಕಾರ್ಯಗಳನ್ನು ನಾಯಕರು ಕೈಗೊಳ್ಳುವುದಿಲ್ಲ. ಅಧಿಕೃತವಾಗಿಯೂ ಮುಖ್ಯಮಂತ್ರಿಗಳಾಗಲೀ ಅಥವಾ ಪಕ್ಷವೇ ಆದರೂ ಯಾವುದೇ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ಸಂಪುಟ ವಿಸ್ತರಣೆಗೂ ಈ ಸಮಯದಲ್ಲಿ ದಿನಾಂಕವನ್ನು ನಿಗದಿ ಮಾಡುವುದಿಲ್ಲ ಎಂದು ಬಿಜೆಪಿ ಕೇಂದ್ರೀಯ ನಾಯಕತ್ವದ ಮೂಲಗಳು ಮಾಹಿತಿ ನೀಡಿವೆ. 

ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೀಘ್ರದಲ್ಲಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ತಿಂಗಳ ಅಂತಿಮ ವಾರದಲ್ಲಿ ಭೇಟಿಯಾಗಲಿದ್ದು, ಭೇಟಿ ಬಳಿಕ ದಿನಾಂಕ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ಹಿಂದೆಯೇ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಹಾಯ ಮಾಡಿದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ ಅವರ ಈ ಘೋಷಣೆ ಇದೀಗ ಬಿಜೆಪಿಯಲ್ಲಿರುವ ಹಿರಿಯ ನಾಯಕರಿಗೆ ತಲೆ ಬಿಸಿಯಾಗುವಂತೆ ಮಾಡಿದೆ. ಬಿಜೆಪಿಯಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದು, ಆ ನಾಯಕರೆಲ್ಲರೂ ಇದೀಗ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಸಾಕಷ್ಟು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಹಿರಿಯ ನಾಯಕರು ಸಚಿವ ಸ್ಥಾನಕ್ಕಾಗಿ ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಯಡಿಯೂರಪ್ಪ ಅವರಿಗೆ ಹಗ್ಗದ ಮೇಲಿನ ನಡಿಗೆಯಂತೆ ಕಗ್ಗಂಟಾಗಿ ಪರಿಣಮಿಸಿದೆ. 

ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿರುವವರು ಹಾಗೂ ಪಕ್ಷದ ಪ್ರಾಮಾಣಿಕ ನಾಯಕರಿಗೆ ಸಮಾನಾಂತರವಾಗಿ ನೋಡಿಕೊಳ್ಳುವಂತೆ ಕೇಂದ್ರೀಯ ನಾಯಕತ್ವ ಈಗಾಗಲೇ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. 

ಇನ್ನು ರಾಜ್ಯ ಸಂಪುಟದಲ್ಲಿ 11 ಮಂದಿ ನೂತನ ಶಾಸಕರು ಸೇರಿದಂತೆ ಗರಿಷ್ಠ ಎಂದರೂ 17 ಸಚಿವರನ್ನು ಸೇರ್ಪಡೆಗೊಳಿಸಬಹುದಾಗಿದೆ. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ಆರ್.ಆರ್.ನಗರ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ ಉಪಚುನಾವಣೆ ಇನ್ನೂ ಬಾಕಿಯಿದ್ದು, ಇದರಲ್ಲಿ ಎರಡು ಸ್ಥಾನಗಳನ್ನು ಖಾಲಿ ಬಿಡುವ ಸಾಧ್ಯತೆಗಳಿವೆ. ಇದರಂತೆ ಯಡಿಯೂರಪ್ಪ ಅವರು 15 ಮಂದಿ ಶಾಸಕರನ್ನಷ್ಟೇ ತಮ್ಮ ಸಂಪುಟಕ್ಕೆ ಸೇರ್ಪಡೆಗೊಳಿಸಬಹುದು. ಉಪಚುನಾವಣೆಯಲ್ಲಿ ಸೋಲು ಕಂಡ ಎಂಟಿಬಿ ನಾಗರಾಜ್ ಹಾಗೂ ಎಹೆಚ್. ವಿಶ್ವನಾಥ್ ಅವರನ್ನೂ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದೇ ಆದರೆ, ಇನ್ನು 13 ಸ್ಥಾನಗಳು ಬಾಕಿ ಉಳಿದಿರುತ್ತವೆ. ಇದರಲ್ಲಿ 11 ಮಂದಿ ನೂತನ ಶಾಸಕರಿಗೆ ಸ್ಥಾನ ನೀಡಿದರೆ, ಇನ್ನುಳಿದ 2 ಸ್ಥಾನಗಳನ್ನು ಪಕ್ಷದ ನಿಷ್ಠಾವಂತ ನಾಯಕರಿಗೆ ನೀಡಬೇಕಾಗುತ್ತದೆ. ಹೀಗಾಗಿ ಸಂಪುಟ ವಿಸ್ತರಣೆ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ. 

ಸಂಪುಟ ವಿಸ್ತರಣೆ ಬಳಿಕ ಎದುರಾಗುವ ಬಂಡಾಯಕ್ಕೆ ಈಗಾಗಲೇ ಉಪಾಯವನ್ನು ಕಂಡುಕೊಳ್ಳಲು ಮುಂದಾಗಿರುವ ಬಿಜೆಪಿ ಸಚಿವ ಸ್ಥಾನದಷ್ಟೇ ಮುಖ್ಯವಾಗಿರುವ ನಿಗಮ ಮಂಡಳಿಯಲ್ಲಿ ಉಳಿದ ನಾಯಕರಿಗೆ ಸ್ಥಾನ ನೀಡಲು ಚಿಂತನೆ ನಡೆಸಿದೆ. ಈ ಉಪಾಯ ಕೂಡ ಯಡಿಯೂರಪ್ಪ ಅವರಿಗೆ ಅಷ್ಟು ಸುಲಭದ ಹಾದಿಯಾಗುವುದಿಲ್ಲ ಎಂದು ವರದಿಗಳು ತಿಳಿಸಿವೆ. 

ಹಲವು ವರ್ಷಗಳ ಬಳಿಕ ಜೆಡಿಎಸ್ ಭದ್ರಕೋಟೆಯಾಗಿದ್ದ ಕೆ.ಆರ್.ಪೇಟೆಯನ್ನು ಸಾಕಷ್ಟು ಶ್ರಮಗಳ ಬಳಿಕ ಬಿಜೆಪಿ ಕಸಿದುಕೊಂಡಿದ್ದು, ಮುಂದೆ ಎಂದಿಗೂ ಆ ಕ್ಷೇತ್ರವನ್ನು ಕಳೆದುಕೊಳ್ಳಲು ಬಿಜೆಪಿ ಇಚ್ಛಿಸುವುದಿಲ್ಲ ಹೀಗಾಗಿ ಸಚಿವ ಸಂಪುಟ ವಿಸ್ತರಣೆ ವೇಳೆ ಹಳೇ ಮೈಸೂರ ಭಾಗವನ್ನೂ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಹಾಗೂ ಪಕ್ಷದ ನಾಯಕರು ಮುಂದುವರೆಯಬೇಕೆಂದು ರಾಷ್ಟ್ರೀಯ ನಾಯಕರು ಸಿಎಂಗೆ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು