ಜಿ ಪರಮೇಶ್ವರ್ 
ರಾಜಕೀಯ

ಸುಮ್ಮನೆ ಸ್ಟೀಲ್ ಬ್ರಿಡ್ಜ್‌ಗೆ ವಿರೋಧಿಸುವುದಲ್ಲ, ಪರಿಹಾರಕ್ಕೆ ಸೂಕ್ತ ಸಲಹೆ ನೀಡಿ: ಡಿಸಿಎಂ ಪರಮೇಶ್ವರ್

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ ಸ್ಟೀಲ್ ಬ್ರಿಡ್ಜ್ ಯೋಜನೆಗೆ ನೀವು ವಿರೋಧಿಸುವುದಾದರೆ, ಅದನ್ನು ಪರಿಹರಿಸಬಹುದಾದ ಸಲಹೆಯನ್ನು ನೀಡಿ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು...

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ ಸ್ಟೀಲ್ ಬ್ರಿಡ್ಜ್ ಯೋಜನೆಗೆ ನೀವು ವಿರೋಧಿಸುವುದಾದರೆ, ಅದನ್ನು ಪರಿಹರಿಸಬಹುದಾದ ಸಲಹೆಯನ್ನು ನೀಡಿ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಮನವಿ ಮಾಡಿದ್ದಾರೆ. 
ಸ್ಟೀಲ್ ಬ್ರಿಡ್ಜ್‌ ಯೋಜನೆಯಿಂದ ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳದ ಇಸ್ಟೀಂ ಮಾಲ್ ವರೆಗಿನ ಜನರಿಗೆ ಉಪಯೋಗವಾಗಲಿದ್ದು ಸಂಚಾರ ದಟ್ಟನೆ ಕಡಿಮೆಯಾಗುತ್ತದೆ. ಈ ಯೋಜನೆಯನ್ನು ಪಾರದರ್ಶಕವಾಗಿ ಮಾಡಲಾಗುತ್ತದೆ. ಇದನ್ನು ಎಲಿವೆಟೆಡ್ ಕಾರಿಡಾರ್ ಎಂದು ಕರೆಯಬಹುದು. ಆದರೆ ಜನರು ಇದನ್ನು ಸ್ಟೀಲ್ ಬ್ರಿಡ್ಜ್ ಎಂದು ಕರೆಯುತ್ತಿದ್ದಾರೆ. 
ಈ ಯೋಜನೆಯಿಂದ ಕಿಕ್ ಬ್ಯಾಕ್ ಪಡೆಯಲಾಗುತ್ತದೆ ಎಂದು ಆರೋಪಿಸುವವರು ಸಂಚಾರಿ ದಟ್ಟನೆ ಕಡಿಮೆ ಮಾಡುವ ಸಲಹೆಯನ್ನು ನೀಡಿ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ಸರ್ಕಾರದ ಯೋಜನೆಯನ್ನು ಈ ಹಿಂದೆ ಸಾರ್ವಜಿಕರು ಹಾಗೂ ರಾಜಕೀಯ ಪಕ್ಷಗಳ ತೀವ್ರ ವಿರೋಧದಿಂದ ನಿಂತುಹೋಗಿತ್ತು. ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮತ್ತೆ ಈ ಯೋಜನೆಯನ್ನು ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!