ರಾಜಕೀಯ

ಅಧಿಕಾರ ಇರಲಿ, ಇಲ್ಲದಿರಲಿ ತುಮಕೂರು ಸಂಸದ ಜಿ.ಎಸ್. ಬಸವರಾಜುಗೆ 'ಕಾಯಕವೇ ಕೈಲಾಸ'!

Shilpa D
ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಬಿಜೆಪಿ ಸಂಸದ ಜಿ.ಎಸ್ ಬಸವರಾಜು ಸೋಲಿಸಿದ್ದಾರೆ, ಬಸವರಾಜು ಅವರ ಗೆಲುವಿಗೆ ಕಾಂಗ್ರೆಸ್ ಬಂಡಾಯ ನಾಯಕರು ಸಹಾಯ ಮಾಡಿದ್ದಾರೆ.
2024ರ ವೇಳೆಗೆ ಎಲ್ಲಾ ರೀತಿಯಲ್ಲೂ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ್ದಾರೆ,. ಅಧಿಕಾರದಲ್ಲಿ ಇರದಿದ್ದಾಗಲೂ ಬಸವರಾಜು ಕೆಲಸಗಳ ಮೂಲಕ ಪ್ರಸಿದ್ಧರಾಗಿದ್ದಾರೆ,  ಈಗಾಗಲೇ ಕೆಲಸ ಆರಂಭಿಸಿದ್ದಾರೆ, ಪ್ರತಿದಿನ ಸುಮಾರು ನೂರಾರು ಮಂದಿ  ಬಸವರಾಜು ಅವರ ಮನೆ ಮತ್ತು ಕಚೇರಿಗೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಬರುತ್ತಿದ್ದಾರೆ.ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಪತ್ರಗಳನ್ನು ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಬಸವರಾಜು ಅವರ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಕೊಡಿಸುವಂತೆ ಇಲ್ಲವೇ ಕೆಲಸ ಕೊಡಿಸುವಂತೆ ಮನವಿ ಸಲ್ಲಿಸುತ್ತಾರೆ.
ಹಾಸನ ಜಿಲ್ಲೆಯ ಗೊರೂರು ಜಲಾಶಯದಿಂದ ಹೇಮಾವತಿ ನದಿಯ ಮೂಲಕ 24.4 ಟಿಎಂಸಿ ನೀರನ್ನು ತುಮಕೂರಿಗೆ ತರುವುದೇ ಮೊದಲ ಆದ್ಯತೆ, ಈ ಸಂಬಂಧ ಈಗಾಗಲೇ  ಎಂಜಿನೀಯರ್ ಗಳ ಜೊತೆ ಚರ್ಚಿಸಿದ್ದು, ಜೊತೆಗೆ ಶೀಘ್ರವೇ ಕಾಲುವೆ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ,
ಜೊತೆಗೆ ತುಮಕೂರು ನಗರವನ್ನು ಹಸಿರುನಗರ ವನ್ನಾಗಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ, ತಮ್ಮ ಕ್ಷೇತ್ರದಲ್ಲಿ ಎಚ್ ಎ ಎಲ್ ಚಾಪರ್ ಯೂನಿಟ್ ಮತ್ತು ಇಸ್ರೋ ತರುವ ಕಾರ್ಯ ಪ್ರಗತಿಯಲ್ಲಿದೆ,
ತಮ್ಮ ದೇಹದಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ ಎಂದು ಹೇಳಿದ್ದ ಬಸವರಾಜು 2008 ರಲ್ಲಿ ಯಡಿಯೂರಪ್ಪ ನಿಕಟವರ್ತಿಯಾಗಿದ್ದರು, 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿ ಗೆದ್ದಿದ್ದರು.
SCROLL FOR NEXT