ಸಿ.ಪಿ ಯೋಗೇಶ್ವರ್ ಮತ್ತು ಡಿ.ಕೆ ಸುರೇಶ್
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯುವುದು ಬಹುತೇಕ ಖಚಿತಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆ ಆರಂಭಗೊಂಡಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಹೆಸರು ಅಂತಿಮಗೊಂಡಿದೆ. ಆದರೆ, ಬಿಜೆಪಿಯಲ್ಲಿ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದರಿಂದ ದೊಡ್ಡ ಸಮಸ್ಯೆಯಾಗಿತ್ತು. ಹಲವು ಸುತ್ತಿನ ಚರ್ಚೆ ನಂತರ ಚಾಲ್ತಿಯಲ್ಲಿದ್ದ ಎಲ್ಲ ಹೆಸರೂ ತೆರೆಮರೆಗೆ ಸರಿದು ಯೋಗೇಶ್ವರ್ ಹೆಸರು ಅಂತಿಮಗೊಂಡಿದೆ ಎನ್ನಲಾಗಿದೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿ.ಪಿ ಯೋಗೇಶ್ವರ್, ಡಿ.ಕೆ ಸಹೋದರರ ಅಹಂಕಾರ ಹಾಗೂ ಉದ್ಧಟತನಕ್ಕೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸಂಸದ ಡಿ.ಕೆ ಸುರೇಶ್ ಅವರು ಆಯ್ಕೆಯಾದ ಸಂದರ್ಭದಲ್ಲಿ ಚನ್ನಪಟ್ಟಣ ಮತದಾರರು ಅವರ ಬೆಂಬಲಕ್ಕೆ ನಿಂತಿದ್ದರು, ನಾನು ಸಮಾಜವಾದಿ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಬಂದು ನಮ್ಮಲ್ಲಿ ಕೇಳಿಕೊಂಡಿದ್ದರಿಂದ ಬೆಂಬಲ ನೀಡಿದ್ದೆವು.
ಕಳೆದ ಐದು ವರ್ಷದಲ್ಲಿ ಅವರು ಏನು ಮಾಡಿದರೆಂಬುದು ಎಲ್ಲರಿಗೂ ತಿಳಿದಿದೆ, ಅವರ ನಡೆ ನೋವು ತಂದಿದೆ, ಮೋದಿಯೇ ಇಲ್ಲಿ ಬಂದು ನಿಂತರೂ ಸುರೇಶ್ ಗೆಲ್ಲಿಸುತ್ತೇವೆ, ಮೋದಿ ಅವರಿಗಿಂತ ನನ್ನ ಸಹೋದರ ಡಿ,ಕೆ ಸುರೇಶ್ ಹೆಚ್ಚಿನ ಲೀಡ್ ತೆಗೆದುಕೊಳ್ಳಲಿದ್ದಾರೆ ಶಿವಕುಮಾರ್ ಅವರ ಅಹಂಕಾರದ ಮಾತುಗಳಿಗೆ ಜನರೇ ಉತ್ತರ ನೀಡುತ್ತಾರೆ ಎಂದು ಯೋಗೇಶ್ವರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics