ಚಿಂಚೋಳಿ: ಇದೇ 19ರಂದು ಉಪ ಚುನಾವಣೆ ನಡೆಯುವ ಚಿಂಚೋಳಿ ಕ್ಷೇತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಲಂಬಾಣಿ ವೇಷ ತೊಟ್ಟು ಚುನಾವಣೆ ಪ್ರಚಾರ ಮಾಡಿ ಗಮನ ಸೆಳೆದರು.
ಕೂಡ್ಲಿ ಗ್ರಾಮದಲ್ಲಿ ಲಂಬಾಣಿ ಮಹಿಳೆಯರ ಡ್ರೆಸ್ ಧರಿಸಿ ಲಂಬಾಣಿ ನೃತ್ಯದಲ್ಲಿ ಪಾಲ್ಗೊಂಡು ಬಿಜೆಪಿ ಪರ ಮತಯಾಚಿಸಿದರು.
ನಂತರ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಮೊದಲ ಬಾರಿಗೆ ಲಂಬಾಣಿ ನಿಗಮ ಸ್ಥಾಪನೆ ಮಾಡಿತ್ತು. ಜಾಧವ್ ಬಿಜೆಪಿ ಸೇರಿದ ಮೇಲೆ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ನಮ್ಮ ಶಾಸಕರ ಬಲ 106ಕ್ಕೇರಲಿದೆ. ಕಾಂಗ್ರೆಸ್ ಪಕ್ಷ ಒಳಗಿನಿಂದಲೇ ಕುಸಿದು ಹೋಗುತ್ತಿದೆ. ಸಶಕ್ತ ದೇಶ ಹಾಗೂ ಸಶಕ್ತ ಕರ್ನಾಟಕಕ್ಕಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.