ಮೋದಿ 2.0: ಯಡಿಯೂರಪ್ಪ ನಿಕಟವರ್ತಿಗಳಿಗೆ ಸಚಿವ ಸ್ಥಾನವಿಲ್ಲ! 
ರಾಜಕೀಯ

ಮೋದಿ 2.0: ಯಡಿಯೂರಪ್ಪ ನಿಕಟವರ್ತಿಗಳಿಗೆ ಸಚಿವ ಸ್ಥಾನವಿಲ್ಲ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿಕಟವರ್ತಿಗಳಿಗೆ ಇದೀಗ ತೀವ್ರ ಅಸಮಾಧಾನವಾಗಿದೆ. ಗುರುವಾರ ರಚನೆಯಾದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ....

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿಕಟವರ್ತಿಗಳಿಗೆ ಇದೀಗ ತೀವ್ರ ಅಸಮಾಧಾನವಾಗಿದೆ. ಗುರುವಾರ ರಚನೆಯಾದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ಯಡಿಯೂರಪ್ಪ ಆಪ್ತವಲಯದ ಯಾರೊಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.  ಶೋದಾ ಕರಂದ್ಲಾಜೆ, ಬಿ.ವೈ ರಾಘವೇಂದ್ರ ಮತ್ತು ಶಿವಕುಮಾರ್ ಉದಾಸಿ ಸೇರಿದಂತೆ  ಹಲವು ಜನಪ್ರಿಯ ಸಂಸದರು ಯಡಿಯೂರಪ್ಪ ಅವರ ಬೆಂಬಲಿಗರಾಗಿದ್ದು ಅವರಲ್ಲಿ ಒಬ್ಬರಿಗೂ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರಕದಿರುವುದು ಯಡಿಯೂರಪ್ಪ ಸೇರಿ ಅವರ ಸಹವರ್ತಿಗಳಿಗೆ ತೀವ್ರ ನಿರಾಶೆಗೆ ಕಾರಣವಾಗಿದೆ.
ಆದಾಗ್ಯೂ, ಮುಂಬೈ-ಕರ್ನಾಟಕದ ಹಲವು ನಾಯಕರು ಸುರೇಶ್ ಅಂಗಡಿಯವರಿಗೆ ಸಚಿವ ಸ್ಥಾನ ದೊರಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.. "ಯಡಿಯೂರಪ್ಪ ಅವರನ್ನು ಸಂತೋಷಪಡಿಸಲು ಕರಾಂದ್ಲಾಜೆ, ಉದಾಸಿ ಅಥವಾ ರಾಘವೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗಿತ್ತು" ಬೆಳಗಾವಿಯ ಲಿಂಗಾಯತ ನಾಯಕರು ಹೇಳಿದ್ದಾರೆ.
ಜಿ.ಎಸ್. ಬಸವರಾಜ್, ಜಿ.ಎಂ.ಸಿದೇಶ್ವರ್, ಪಿ.ಸಿ. ಗದ್ದಿಗೌಡರ್, ಪ್ರತಾಪ್ ಸಿಂಹ ಸಹ ಯಡಿಯೂರಪ್ಪ ಸಮೀಪವರ್ತಿಗಳಾಗಿದ್ದಾರೆ.ಅಲ್ಲದೆ ಬಿಜೆಪಿಯ ಹೈಕಮಾಂಡ್ ನಾಯಕರಿಗೆ ಸಹ ಇವರು ನಿಕಟ ಸಂಪರ್ಕ ಹೊಂದಿದವರಿದ್ದಾರೆ. ಅದಾಗ್ಯೂ ಅಂಗಡಿ ಹೊರತಾಗಿ ಬೇರಾವ ಲಿಂಗಾಯತ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. "ಸದಾನಂದಗೌಡ ಮತ್ತು ಪ್ರಹಾದ್ ಜೋಷಿ, ಅನುಕ್ರಮವಾಗಿ ವೋಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅವರಿಗೆ ಗೆ ಕ್ಯಾಬಿನೆಟ್ ಮಂತ್ರಿ ದರ್ಜೆಯನ್ನು ನೀಡಲಾಗಿದೆ ... ಆದರೆ ಲಿಂಗಾಯತ ಮುಖಂಡರಿಗೆ ರಾಜ್ಯ ಸಚಿವ ಸ್ಥಾನ ಕೊಡಲಾಗಿದೆ. ಮೋದಿಯವರ ಕಳೆದ ಸಚಿವ ಸಂಪುಟದಲ್ಲಿಯೂ ಸಹ ಲಿಂಗಾಯತ ನಾಯಕರಾದ ಸಿದ್ದೇಶ್ವರ್ ಅವರಿಗೆ ರಾಜ್ಯ ಸಚಿವ ಸ್ಥಾನ ಸಿಕ್ಕಿತ್ತು." ಇನ್ನೋರ್ವ ಲಿಂಗಾಯತ ಮುಖಂಡರು ಹೇಳಿದ್ದಾರೆ.
ಯಡಿಯೂರಪ್ಪ ಅವರ ಎಲ್ಲಾ ಸಹವರ್ತಿಗಳನ್ನು ಹೊರಗಿಟ್ಟಿರುವುದಲ್ಲದೆ ಕರ್ನಾಟಕದಲ್ಲಿ "ವಿವಾದಾತ್ಮಕ" ನಾಯಕರೆಂದು ಗುರುತಿಸಿಕೊಂಡ ಎಲ್ಲ ಮುಖಂಡರನ್ನೂ ಸಚಿವ ಸ್ಥಾನದಿಂದ ದೂರವಿರಿಸಲಾಗಿದೆ.ಆದರೆ ಯಡಿಯೂರಪ್ಪ ಅವರನ್ನು ಈ ರಾಜ್ಯದಲ್ಲಿನ ಬಿಜೆಪಿ ಪಾಳಯದಲ್ಲಿ ಅತ್ಯುನ್ನತ ನಾಯಕರೆಂದು ಪರಿಗಣಿಸಲಾಗುತ್ತದೆ ಎಂದು ಮುಖಂಡರೊಬ್ಬರು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video