ಬೆಂಗಳೂರು: ಪ್ರಸಕ್ತ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ಬಿಜೆಪಿ ಸರ್ಕಾರಕ್ಕೆ ಅಸ್ತಿತ್ವದ ಪ್ರಶ್ನೆಯಾಗಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶಗದೊಂದಿಗೆ ಶನಿವಾರದಿಂದ ಬಿರುಸಿನ ಪ್ರಚಾರಕ್ಕೆ ಧುಮಕಲಿದ್ದಾರೆ.
ಸತತ 11 ದಿನಗಳ ಕಾಲ ಅಭ್ಯರ್ಥಿಗಳ ಇಬ್ಬರೂ ನಾಯಕರು ಮತ ಯಾಚಿಸಲಿದ್ದಾರೆ.
ಅಥಣಿ ಕ್ಷೇತ್ರದಿಂದ ಪ್ರಚಾರ ಆರಂಭವಾಗಲಿದ್ದು, ಮೊದಲ ದಿನ ಶನಿವಾರದಂದು ಅಥಣಿ, ಕಾಗವಾಡ, ಗೋಕಾಕ್ ಕ್ಷೇತ್ರದಲ್ಲಿ ಸಾರ್ವಜನಿಕರ, ಕಾರ್ಯಕರ್ತರ ಸಭೆಯಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ.
ನ.24ರಂದು ಯಲ್ಲಾಪುರ, ಹಿರೇಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಕಾರ್ಯಕರ್ತರ ಸಭೆಯ ಬಳಿಕ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನ.25ರಂದು ಹೊಸಪೇಟೆ, ಕೆ.ಆರ್.ಪೇಟೆ, ಹುಣಸೂರಲ್ಲಿ ಪ್ರಚಾರ ಮಾಡಲಿದ್ದಾರೆ. ಮೈಸೂರಿನಲ್ಲಿ ವಾಸ್ತವ್ಯ ಹೂಡಿ ಮರುದಿನ ಪ್ರಚಾರ ಕಾರ್ಯ ಮುಂದುವರೆಸಲಿದ್ದಾರೆ.
ನ.26ರಂದು ಚಿಕ್ಕಬಳ್ಳಾಪುರ, ಯಶವಂತಪುರ, ಶಿವಾಜಿನಗರದಲ್ಲಿ ಮತಯಾಚಿಸಲಿದ್ದಾರೆ. ನ.27ರಂದು ಹೊಸಕೋಟೆ, ಕೆ.ಆರ್.ಪುರ, ಮಹಾಲಕ್ಷ್ಮೀ ಲೇಔಟ್ ನಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆಂದು ಬಿಜೆಪಿ ತಿಳಿಸಿದೆ.
ನ.28ರಂದು ಹುಣಸೂರು, ಯಲ್ಲಾಪುರ, ಹಿರೇಕೆರೂರು ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಹಾವೇರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನ.29ರಂದು ರಾಣೆಬೆನ್ನೂರು, ಹೊಸಪೇಟೆಯಲ್ಲಿ ಸಾರ್ವಜನಿಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನ.30ರಂದು ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಡಿ.1ರಂದು ಹೊಸಕೋಟೆ, ಕೆ.ಆರ್.ಪೇಟೆ, ಶಿವಾಜಿನಗರ, ಡಿ.2ರಂದು ಗೋಕಾಕ್, ಅಥಣಿ, ಕಾಗವಾಡ ಮತ್ತು ಡಿ.3ರಂದು ಅಥಣಿ ಮತ್ತು ಕಾಗವಾಡದಲ್ಲಿ ಸಾರ್ಜಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.