ಎಚ್. ವಿಶ್ವನಾಥ್ 
ರಾಜಕೀಯ

ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಇಬ್ಬರೂ ಕಾರಣ; ವಿಶ್ವನಾಥ್

ಮೈತ್ರಿ ಸರ್ಕಾರದ ಪತನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಮಾಜಿ  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯೂ ಕಾರಣ ಎಂದು ಜೆಡಿಎಸ್ ಅನರ್ಹ ಶಾಸಕ  ಹೆಚ್.ವಿಶ್ವನಾಥ್ ಹೇಳಿದ್ದಾರೆ.

ನವದೆಹಲಿ: ಮೈತ್ರಿ ಸರ್ಕಾರದ ಪತನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಮಾಜಿ  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯೂ ಕಾರಣ ಎಂದು ಜೆಡಿಎಸ್ ಅನರ್ಹ ಶಾಸಕ  ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ  ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ  ಇಬ್ಬರು  ಸಮಬಲರು. ಕಾಂಗ್ರೆಸ್ ಶಾಸಕರ ಸಮಸ್ಯೆಗಳನ್ನು ಸಿದ್ದರಾಮಯ್ಯ ಕೇಳಲಿಲ್ಲ. ಜೆಡಿಎಸ್ ಶಾಸಕರನ್ನು ಕುಮಾರಸ್ವಾಮಿ ಕೇಳಲಿಲ್ಲ. ಯಾರೊಂದಿಗೂ ಚರ್ಚಿಸದೇ ಮೈತ್ರಿ ಸರ್ಕಾರ ರಚನೆ  ಮಾಡಿದ್ದೆ ತಪ್ಪು ಎಂದು ಆರೋಪಿಸಿದರು. 

ಸರ್ಕಾರ ಪತನವಾದ ಬಳಿಕ ಇಬ್ಬರು ಕೆಸರೆರಚಾಟದಲ್ಲಿ  ತೊಡಗಿದ್ದು ಪರಸ್ಪರ ಒಬ್ಬರನ್ನೊಬ್ಬರು ಆರೋಪಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಪಕ್ಷ  ರಾಜಕಾರಣ ಇಲ್ಲದ ಕಾರಣ ಪಕ್ಷಾಂತರಕ್ಕೆ ಕಾರಣವಾಗಿದೆ. ಯಾವುದೇ ಒಂದು ಪಕ್ಷ ಕುಟುಂಬ, ವ್ಯಕ್ತಿ, ಒಂದು ಗುಂಪಿಗೆ ಮಾತ್ರ ಸೀಮಿತವಾದಲ್ಲಿ ಪಕ್ಷಾಂತರ ಆಗುವುದು ಸಹಜ ಎಂದು  ಪರೋಕ್ಷವಾಗಿ ಹೆಚ್.ಡಿ.ದೇವೇಗೌಡರನ್ನು ವಿಶ್ವನಾಥ್ ಕುಟುಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!