ಗ್ಯಾಂಗ್ ರೇಪ್ ಪ್ರಕರಣ: ವಿವಾದಿತ ದೇವಮಾನವ Asaram Bapu ಖುಲಾಸೆ

ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು ಅವರಿಗೆ ಬುಧವಾರ ರಾಜಸ್ತಾನ ಹೈಕೋರ್ಟ್ (Rajasthan High Court) ಬಿಗ್ ರಿಲೀಫ್ ನೀಡಿದ್ದು, ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಳಿಸಿದೆ.
Asaram Bapu
ಅಸಾರಾಂ ಬಾಪು
Updated on

ಜೈಪುರ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ವಿವಾದಿತ ದೇವಮಾನವ ಅಸಾರಾಂ ಬಾಪು ಅವರನ್ನು ರಾಜಸ್ತಾನ ಹೈಕೋರ್ಟ್ ಖುಲಾಸೆಗೊಳಿಸಿದೆ.

ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು ಅವರಿಗೆ ಬುಧವಾರ ರಾಜಸ್ತಾನ ಹೈಕೋರ್ಟ್ (Rajasthan High Court) ಬಿಗ್ ರಿಲೀಫ್ ನೀಡಿದ್ದು, ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಳಿಸಿದೆ. ಭಾರತೀಯ ದಂಡ ಸಂಹಿತೆ (IPC) ಹಾಗೂ POCSO ಕಾಯ್ದೆಯಡಿ ದಾಖಲಿಸಲಾಗಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಲಾಯಿತು.

ಆದರೆ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಮುಂದುವರಿಸಿದೆ. ನ್ಯಾಯಮೂರ್ತಿ ಅರುಣ್ ಮೊಂಗಾ ಮತ್ತು ನ್ಯಾಯಮೂರ್ತಿ ಯೋಗೇಂದ್ರ ಕುಮಾರ್ ಪುರೋಹಿತ್ ಒಳಗೊಂಡ ವಿಭಾಗೀಯ ಪೀಠವು IPC ಸೆಕ್ಷನ್ 376(D) ಮತ್ತು POCSO ಕಾಯ್ದೆಯ ಸೆಕ್ಷನ್ 5(G)/6 ಅಡಿಯಲ್ಲಿ ಇದ್ದ ಆರೋಪಗಳಿಂದ ಆಸಾರಾಂ ಅವರನ್ನು ಖುಲಾಸೆಗೊಳಿಸಿತು.

ಅದೇ ವೇಳೆ ಅಪರಾಧ ಸಂಚು ಸಂಬಂಧಿಸಿದ IPC ಸೆಕ್ಷನ್ 120(B) ಅಡಿನ ಆರೋಪಗಳಿಂದಲೂ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ತಿಳಿದುಬಂದಿದೆ.

Asaram Bapu
ಗುಜರಾತ್‌ನಲ್ಲಿ ಮಾನವ ಕಳ್ಳಸಾಗಣೆ, ಅತ್ಯಾಚಾರ; ಸಂತ್ರಸ್ತ ಮಹಿಳೆಯ ಪತಿ ಸೇರಿ 7 ಜನರ ಬಂಧನ

ಆದರೆ IPC ಸೆಕ್ಷನ್ 376(2)(F) ಅಡಿಯಲ್ಲಿ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಧಿಸಲಾದ ಶಿಕ್ಷೆಯನ್ನು ನ್ಯಾಯಪೀಠವು ಸಮರ್ಥಿಸಿದೆ. ಇದರಿಂದ ವಿಚಾರಣಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆ ಮುಂದುವರಿಯಲಿದೆ.

ದೋಷಾರೋಪಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಆಸಾರಾಂ ಶರಣಾಗಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು. ಪ್ರಸ್ತುತ ಆಸಾರಾಂ ಬಾಪು ಅವರು ತಾತ್ಕಾಲಿಕ ಜಾಮೀನಿನ ಮೇಲೆ ಹೊರಗಿದ್ದು, ಸೋಮವಾರ ಆ ಜಾಮೀನು ಅವಧಿಯನ್ನು ಇನ್ನೂ ಏಳು ದಿನಗಳ ಕಾಲ ವಿಸ್ತರಿಸಲಾಗಿತ್ತು.

IPC ಸೆಕ್ಷನ್ 342 (ಅಕ್ರಮ ಬಂಧನ), 370(4) (ಮಾನವ ಕಳ್ಳಸಾಗಣೆ), 506 (ಅಪರಾಧ ಬೆದರಿಕೆ), 509 (ಮಹಿಳೆಯ ಗೌರವಕ್ಕೆ ಧಕ್ಕೆ), 354(A) (ಲೈಂಗಿಕ ಕಿರುಕುಳ) ಸೇರಿದಂತೆ ಹಲವು ವಿಧಿಗಳಡಿ ನೀಡಲಾದ ಶಿಕ್ಷೆಗಳನ್ನು ಹೈಕೋರ್ಟ್ ಮುಂದುವರಿಸಿದೆ. ಇದರ ಜೊತೆಗೆ POCSO ಕಾಯ್ದೆಯ ಸೆಕ್ಷನ್ 7/8 ಹಾಗೂ ಜುವೆನೈಲ್ ಜಸ್ಟಿಸ್ ಕಾಯ್ದೆಯ ಸೆಕ್ಷನ್ 23 ಅಡಿನ ಶಿಕ್ಷೆಗಳನ್ನೂ ನ್ಯಾಯಾಲಯ ಮಾನ್ಯಗೊಳಿಸಿದೆ.

ಇದಲ್ಲದೆ IPC ಸೆಕ್ಷನ್ 376 ಹಾಗೂ POCSO ಕಾಯ್ದೆಯ ಸೆಕ್ಷನ್ 34 ಅಡಿಯಲ್ಲಿ ನೀಡಲಾದ ಶಿಕ್ಷೆಯನ್ನೂ ನ್ಯಾಯಪೀಠ ಸಮರ್ಥಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com