ರಾಜಕೀಯ

ಉಪಸಭಾಪತಿ ಕುತ್ತಿಗೆ ಹಿಡಿದು ಎಳದಾಡಿದ್ದು ದೇಶದಲ್ಲಿ ಇದೇ ಮೊದಲು: ಮುಖ್ಯಮಂತ್ರಿ ಯಡಿಯೂರಪ್ಪ

Srinivasamurthy VN

ಬೆಂಗಳೂರು: ಉಪಸಭಾಪತಿ ಕುತ್ತಿಗೆ ಹಿಡಿದು ಎಳದಾಡಿದ್ದು ದೇಶದಲ್ಲಿ ಇದೇ ಮೊದಲು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಪರಿಷತ್ ಕಲಾಪದಲ್ಲಿ ನಡೆದ ಜಟಾಪಟಿಗೆ ಸಂಬಂಧಿಸಿದಂತೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಸಭಾಪತಿಗಳ ಕುತ್ತಿಗೆ ಹಿಡಿದು ಎಳೆದಾಡಿದದ್ದು ದೇಶದ ಇತಿಹಾದಲ್ಲಿ ಇದೇ ಮೊದಲು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು, ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಇದು ಕಾಂಗ್ರೆಸ್ ನವರ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವಕ್ಕೆ ಚ್ಯುತಿಯಾಗಿದೆ. ಜೆಡಿಎಸ್ ಬಹಿರಂಗವಾಗಿ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಿದೆ. ಹಾಲಿ ಸಭಾಪತಿಗೆ ಜೆಡಿಎಸ್ ಬೆಂಬಲ ಇಲ್ಲ. ಹೀಗಾಗಿ ರಾಜೀನಾಮೆ ಕೊಡಿಸುವುದು ಕಾಂಗ್ರೆಸ್ ಕರ್ತವ್ಯ.  ಪ್ರತಾಪಚಂದ್ರ ಶೆಟ್ಟಿಯವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಸಿಎಂ ಹೇಳಿದ್ದಾರೆ.

ಒಮ್ಮೆ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡಿದರೆ ಸಭಾಪತಿಗೆ ಆ ಕುರ್ಚಿಯಲ್ಲಿ ಕೂರಲು ಅರ್ಹತೆಯಿಲ್ಲ. ಇದು ಇಡೀ ಜಗತ್ತಿಗೆ ಗೊತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಅನೇಕ ತೀರ್ಮಾನಗಳಿವೆ. ಉಪ ಸಭಾಪತಿಗಳನ್ನು ಕೂರಿಸುವುದಾಗಿ ನಿನ್ನೆಯೇ ಬಹಿರಂಗವಾಗಿ ನಾವು ಹೇಳಿಕೆ ನೀಡಿದ್ದೇವೆ ಎಂದು  ಯಡಿಯೂರಪ್ಪ ಹೇಳಿದರು.

ಬೆಲ್ ಆದ್ಮೇಲೆ ಬಂದರು, ಮೊದಲು ಬಂದರು ಎಂಬುದೆಲ್ಲ ಮುಖ್ಯವಲ್ಲ. ಬಹುಮತ ಇಲ್ಲ ಅನ್ನುವುದೇ ಮುಖ್ಯ ಎಂದು ಹೇಳಿದರು. ಉಪಸಭಾಪತಿಗಳನ್ನು ಎಳೆದಾಡಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಸಿಎಂ ಬಿಎಸ್‌ವೈ ಹೇಳಿದರು. ಇದು ಕಾಂಗ್ರೆಸ್‌ನವರ ಸಂಸ್ಕೃತಿಯನ್ನು  ತೋರಿಸುತ್ತದೆ. ರಾಜೀನಾಮೆ ಬಿಸಾಕುವಂತೆ ಸಭಾಪತಿಗಳಿಗೆ ಹೇಳಲಿ ಎಂದು ಹೇಳಿದರು. ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡಿದ ಬಳಿಕ ಕುರ್ಚಿಯಲ್ಲಿ ಕೂರುವಂತಿಲ್ಲ. ಜೊತೆಗೆ, ಉಪಸಭಾಪತಿಯನ್ನು ಎಳೆದಾಡಿರುವುದು ಕಪ್ಪು ಚುಕ್ಕೆ ಎಂದು ಹೇಳಿದರು.

ಕಾಂಗ್ರೆಸ್ ನಡಾವಳಿಕೆ ಸರಿಯಲ್ಲ. ಈ ಬೆಳವಣಿಗೆಯನ್ನು ರಾಜ್ಯಪಾಲರ ಗಮನಕ್ಕೆ ತರುತ್ತೇವೆ. ಜೆಡಿಎಸ್ ನವರು ಸಹ ರಾಜ್ಯಪಾಲರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಲಿದ್ದಾರೆ ಎಂದರು.

SCROLL FOR NEXT