ಸದನದಲ್ಲಿ ಗೂಂಡಾಗಿರಿಗೆ ಬಿಜೆಪಿ ಜೊತೆ ಜೆಡಿಎಸ್ ಸಹ ಕಾರಣ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
ರಾಜ್ಯದ ಇತಿಹಾಸದಲ್ಲೇ ಮೇಲ್ಮನೆಯಲ್ಲಿ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗೂಂಡಾಗಿರಿಯನ್ನು ಹಿಂದೆಂದೂ ನೋಡಿಲ್ಲ. ಸದನದಲ್ಲಿನ ದೂಂಡಾವರ್ತನೆಗೆ ಜೆಡಿಎಸ್ ಕಾರಣ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೇಲ್ಮನೆಯಲ್ಲಿ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗೂಂಡಾಗಿರಿಯನ್ನು ಹಿಂದೆಂದೂ ನೋಡಿಲ್ಲ. ಸದನದಲ್ಲಿನ ದೂಂಡಾವರ್ತನೆಗೆ ಜೆಡಿಎಸ್ ಕಾರಣ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಾಗಿಲು ಹಾಕಿ ಸಭಾಪತಿ ಅವರನ್ನು ಸದನದ ಒಳಗಡೆ ಬರದಂತೆ ತಡೆದಿರುವುದು ಕಾನೂನು ಬಾಹಿರ. ಸಭಾಪತಿಯನ್ನೇ ಸದನದೊಳಗೆ ಬರದಂತೆ ತಡೆದಿದ್ದು ನಿಯಮಬಾಹಿರ ನಡೆಯಾಗಿದೆ. ಸಭಾಪತಿ ಇದ್ದಾಗ ಉಪಸಭಾಪತಿ ಕೂರುವಂತಿಲ್ಲ. ಸಭಾಪತಿಗಳಿಗೆ ಏನಾದರೂ ಸಮಸ್ಯೆ ಇದ್ದಾಗ ಇಲ್ಲವೇ ಸಭಾಪತಿ ಹೇಳಿದಾಗ ಮಾತ್ರ ಉಪಸಭಾಪತಿ ಪೀಠದಲ್ಲಿ ಕೂತು ಕಲಾಪ ನಡೆಸಬೇಕು ಎಂದರು.
ಸಭಾಪತಿಗಳಿದ್ದಾಗಲೂ ಉಪಸಭಾಪತಿಗಳನ್ನು ಪೀಠದಲ್ಲಿ ಕೂರಿಸಿದ್ದು ಸಂವಿಧಾನ, ಪ್ರಜಾಪ್ರಭುತ್ವ, ಕಾನೂನು ಬಾಹಿರ ನಡೆಯಾಗಿದೆ. ಬಿಜೆಪಿಯವರು ಕಲಾಪದ ನಿಯಮಗಳನ್ನು ಪಾಲಿಸುತ್ತಿಲ್ಲ. ಬಿಜೆಪಿಯ ನಡೆ ಕಾನೂನುಬಾಹಿರ. ಇದನ್ನು ಖಂಡಿಸುವುದಾಗಿ ಹೇಳಿದರು.