ರಾಜಕೀಯ

ಪಿಎಂ ಕೇರ್ಸ್ ಹಾಗೂ ಟೋಪಿ ಹಾಕುವ ಸ್ಕೀಂ ಎರಡೂ ಒಂದೇ: ದಿನೇಶ್ ಗುಂಡೂರಾವ್

Raghavendra Adiga

ಬೆಂಗಳೂರು: ಕೋವಿಡ್ ಪರಿಹಾರಕ್ಕಾಗಿ ಸ್ಥಾಪಿಸಲಾಗಿರುವ "ಪಿಎಂ ಕೇರ್ಸ್" ವಿರುದ್ಧ ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಗುಂಡೂರಾವ್ "ಪಿಎಂ-ಕೇರ್ಸ್ ಎಂಬ ನಿಧಿ ಸ್ಥಾಪಿಸಿ ಸ್ವತಃ ಕೇಂದ್ರ ಸರ್ಕಾರವೇ ಆರ್ಥಿಕ ಅಪರಾಧದಲ್ಲಿ ತೊಡಗಿದೆ. ದೇಶದಲ್ಲಿ ನಡೆಯುವ ಅನೇಕ ಟೋಪಿ ಹಾಕುವ ಸ್ಕೀಂಗಳಿಗೂ ಈ ಪಿಎಂ-ಕೇರ್ಸ್‌ಗೂ ಏನಾದರೂ ವ್ಯತ್ಯಾಸವಿದೆಯೆ.?"ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆದ್ "ಕೋವಿಡ್ ಸಂಕಷ್ಟಕಾಲದಲ್ಲಿ ಜನರಿಗೆ ನೆರವಾಗಬೇಕಾದ ಸರ್ಕಾರ,ಜನರಿಂದಲೇ ದೇಣಿಗೆ ಪಡೆದು,ಬಿಡಿಗಾಸು ಖರ್ಚು ಮಾಡದೆ ಮಾಹಿತಿ ಮುಚ್ಚಿಟ್ಟರೆ ಏನರ್ಥ.?" ಎಂದು ಕೇಳಿದ್ದಾರೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ಸರ್ಕಾರ ಜನರಿಂದ ದೇಣಿಗೆ ಪಡೆದು ಜನರಿಗೇ ಟೋಪಿ ಹಾಕುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ/

"ಪಿಎಂ ಕೇರ್ಸ್" ಕೋವಿಡ್ ನಿಂದಾದ ಸಮಸ್ಯೆಗಳ ಪರಿಹಾರಕ್ಕೆ ದೇಣಿಗೆಗಳನ್ನು ಸ್ವೀಕರಿಸಲು ಸರ್ಕಾರವೇ ರಚಿಸಿದ ನಿಧಿಯಾದ ಕಾರಣ ಅದೊಂದು ಸಾರ್ವಜನಿಕ ಘಟಕವಾಗಿದೆ. ಇದರ ನಿಯಂತ್ರಣ ಹಾಗೂ ಮಾಲಿಕತ್ವ ಕೇಂದ್ರ ಸರ್ಕಾರದ ಬಳಿ ಇದ್ದರೂ ಖಾಸಗಿಯವರಿಂದಲೂ ದೇಣಿಗೆ ಸಂಗ್ರಹಿಸುತ್ತಿರುವುದರಿಂದ ಇದು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರ ಹೇಳಿದೆ.

SCROLL FOR NEXT