ವಿಶ್ವನಾಥ್-ಎಚ್ ಡಿ ಕುಮಾರಸ್ವಾಮಿ 
ರಾಜಕೀಯ

ನಿಖಿಲ್ ದುಬಾರಿ ಮದುವೆ: ಹಿತೈಷಿಗಳಿಗೆ ಆತಿಥ್ಯ ಕೊಡುವುದೂ ದುಂದುವೆಚ್ಚವೇ?: ವಿಶ್ವನಾಥ್'ಗೆ ಕುಮಾರಸ್ವಾಮಿ ತಿರುಗೇಟು

ರಾಜ್ಯದಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬದವರನ್ನು ಬೆಳೆಸಿದವರಿಗೆ ಹಾಗೂ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಆತಿಥ್ಯ ಕೊಡುವುದು ದುಂದುವೆಚ್ಚವೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮೈಸೂರು: ರಾಜ್ಯದಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬದವರನ್ನು ಬೆಳೆಸಿದವರಿಗೆ ಹಾಗೂ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಆತಿಥ್ಯ ಕೊಡುವುದು ದುಂದುವೆಚ್ಚವೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಿಖಿಲ್ ಕುಮಾರ್ ಆಡಂಬರದ ಮದುವೆ ಕುರಿತಂತೆ ಮಾಜಿ ಸಚಿವ‌ ಎಚ್. ವಿಶ್ವನಾಥ್ ಮಾಡಿರುವ ಆರೋಪಕ್ಕೆ ಇಂದಿಲ್ಲಿ ತಿರುಗೇಟು ನೀಡಿದ ಕುಮಾರಸ್ವಾಮಿ, ತಮ್ಮ ಕುಟುಂಬದಲ್ಲಿ ತಾವು ಮದುವೆ  ಮಾಡುವುದಕ್ಕೆ ಇವರಿಗೆ ಏಕೆ ಚಿಂತೆ. ಉಪ ಚುನಾವಣೆಗೆಯಲ್ಲಿ ಖರ್ಚು ಮಾಡಿದ್ದ ಕೋಟ್ಯಾಂತರ  ರೂಪಾಯಿ ಯಾರಪ್ಪನ ಮನೆ ದುಡ್ಡು. ಅದಕ್ಕೆ ಬಂಡವಾಳ ಹಾಕಿದವರು ಯಾರು?. ಒಂದೊಂದು ಕ್ಷೇತ್ರಕ್ಕೆ 60 ಕೋಟಿ, 100 ಕೋಟಿ ಖರ್ಚು ಮಾಡುವಾಗ ಜನರ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಾಗಲಿಲ್ಲವೇ? ಎಂದು ಪ್ರಶ್ನಿಸಿ, ಇಂತಹವರಿಂದ ತಾವು ಹೇಳಿಸಿಕೊಳ್ಳಬೇಕಾಗಿಲ್ಲ ಎಂದರು.

ಪರಿಷತ್  ಮಾಜಿ ಸದಸ್ಯ ರಮೇಶ್ ಬಾಬು ಜೆಡಿಎಸ್ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ‌  ನೀಡಿರುವುದರಿಂದ ತಮ್ಮ ಪಕ್ಷಕ್ಕೆ ಯಾವುದೇ ತೊಂದರೆಯಾಗಿಲ್ಲ. ಅವರಿಗೆ ಎಲ್ಲಾ ಅಧಿಕಾರಿ ಕೊಟ್ಟರೆ ಚೆನ್ನಾಗಿರುತ್ತದೆ, ಅಧಿಕಾರ ಕೊಡದೆ‌ ಇದ್ದಾಗ ವರಿಷ್ಠರ ನಡೆ ಚೆನ್ನಾಗಿ ಇರುವುದಿಲ್ಲ. ಇಂತಹ ಭಾವನೆ ಸರ್ವೆಸಾಮಾನ್ಯ ತಾನೇ ಎಂದು ಮಾರ್ಮಿಕವಾಗಿ ನುಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!