ರಾಜಕೀಯ

‘ಹಲ್ಕಾ’ಮಾತಿನಿಂದ  ಕಾಂಗ್ರೆಸ್ -ಬಿಜೆಪಿ ಶಾಸಕರ ನಡುವೆ ಜಟಾಪಟಿ 

Nagaraja AB

ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ ಮತ್ತು ಔಷಧಿ,ಉಪಕರಣ ಖರೀದಿಯಲ್ಲಿ ಅವ್ಯವಹಾರ ಕುರಿತ ನಿಯಮ 69ರ ಮೇಲಿನ ಚರ್ಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಉತ್ತರ ನೀಡುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್  ಬಳಕೆ ಮಾಡಿದ ‘ಹಲ್ಕಾ’ಎಂಬ ಪದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು.

ವಿಧಾನಸಭೆಯ ಸ್ಪೀಕರ್ ಆಗಿದ್ದ ವೇಳೆ ಸಂಸದೀಯ ಪದಗಳ ಬಳಕೆಗೆ ಒತ್ತು ನೀಡುತ್ತಿದ್ದ ಪ್ರತಿಪಕ್ಷ ಕಾಂಗ್ರೆಸ್‌ನ ಹಿರಿಯ ಸದಸ್ಯ ರಮೇಶ್‌ಕುಮಾರ್ ಅವರು ಇದೀಗ ತಾವೇ ಮುಂದಾಗಿ ಅಸಂಸದೀಯ ಪದ ಬಳಕೆ ಮಾಡುವುದಲ್ಲದೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ವಿನಾಕಾರಣ ಹರಿಹಾಯುತ್ತಿದ್ದಾರೆ ಎಂಬ ಅಸಮಾಧಾನ ಅವರ ಪಕ್ಷದಲ್ಲೇ ಕಾಣಿಸಿಕೊಂಡಿದೆ.

 ಇತರ ಸಮಯದಲ್ಲಿ ತಾಳ್ಮೆಯಿಂದ ಇರುವ ರಮೇಶ್‌ಕುಮಾರ್ ಅವರು ಸುಧಾಕರ್ ಅವರ ವಿಷಯ ಬಂದಾಗ ಗರಂ ಆಗುತ್ತಾರೆ.ಜಿಲ್ಲಾ ರಾಜಕಾರಣ ತಲೆದೂರುತ್ತದೆ.ಸುಧಾಕರ್ ವಿರುದ್ಧ ವೈಯಕ್ತಿಕವಾಗಿ ವಾಗ್ದಾಳಿ ನಡೆಸಲು ಮುಂದಾಗುತ್ತಾರೆ ಎಂಬ ಮಾತು ಕೇಳಿಬಂದಿದೆ.

SCROLL FOR NEXT