ಡಿಕೆ ಸುರೇಶ್ 
ರಾಜಕೀಯ

ಸರ್ಕಾರ- ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಇಲ್ಲ: ಡಿಕೆ ಸುರೇಶ್ 

ಸರ್ಕಾರದಲ್ಲಾಗಲಿ, ಅಧಿಕಾರಿಗಳಲ್ಲಾಗಲೀ ಯಾವುದೇ ಸಮನ್ವಯತೆ ಇಲ್ಲ ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ. 

ಬೆಂಗಳೂರು: ಸರ್ಕಾರದಲ್ಲಾಗಲಿ, ಅಧಿಕಾರಿಗಳಲ್ಲಾಗಲೀ ಯಾವುದೇ ಸಮನ್ವಯತೆ ಇಲ್ಲ ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಟೆಸ್ಟ್ ಗಳನ್ನು ಬೇಕಾಬಿಟ್ಟಿ ಮಾಡಲಾಗುತ್ತಿದ್ದು, ಕೆಲವೆಡೆ ಪಾಸಿಟಿವ್ ಬಂದರೆ, ಮತ್ತೆ ಕೆಲವೆಡೆ ನೆಗೆಟಿವ್ ಬರುತ್ತಿವೆ. ಯಾರೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ತಮ್ಮ ಸ್ವಾರ್ಥ, ಹಣದ ಆಸೆಗೆ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಡಿಕೆ ಸುರೇಶ್ ಆರೋಪಿಸಿದರು. 

ರೆಮಿಡಿಸಿವಿರ್ ಸಂಗ್ರಹಕ್ಕೆ ಪ್ರಧಾನಿಗಳು ಸೂಚಿಸಿದ್ದರೂ ಚುಚ್ಚುಮದ್ದು ಕೊರತೆಯಾಗಿದೆ. ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಡಿಕೆ ಸುರೇಶ್,  ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಕೊಡುತ್ತಿರುವ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
ಸೋಂಕಿತರ ಸಂಖ್ಯೆ ದ್ವಿಗುಣ ಗೊಳ್ಳುತ್ತಿದೆ ಆದರೂ ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಅಮೆರಿಕ ವ್ಯಾಪಾರ ಒಪ್ಪಂದ: 'ಬಹುತೇಕ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಿವೆ': ಸರ್ಕಾರಿ ಮೂಲಗಳು!

ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)

ನಾವು ಭಾರತೀಯರನ್ನು ನಂಬುತ್ತೇವೆ; ಟ್ರಂಪ್ ನಮಗೆ...: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಾ ಕೊರಿನಾ ಮಚಾದೊ ಅಚ್ಚರಿ ಹೇಳಿಕೆ

Pratap Simha vs Pradeep Eshwar: 'ಲೇ ಮಗನೆ.. ನಮ್ಮಪ್ಪನ್ನಂತೂ ನಿಮ್ಮೂರಿಗೆ ಕಳಿಸಲ್ಲ': ಮಿತಿ ಮೀರಿದ ವಾಕ್ಸಮರ, Video

ಯಾರತ್ರ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ: ಯತೀಂದ್ರಗೆ ಡಿ.ಕೆ ಶಿವಕುಮಾರ್ ತಿರುಗೇಟು

SCROLL FOR NEXT