ರಾಜಕೀಯ

ಸಿದ್ದರಾಮಯ್ಯಗಾಗಿ ಕ್ಷೇತ್ರ ತ್ಯಾಗ! 2023ರ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಖಾನ್ ತುಮಕೂರಿನಿಂದ ಸ್ಪರ್ಧೆ?

Shilpa D

ತುಮಕೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪದೇ ಪದೇ ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟು, 2023ರ ವಿಧಾನಸಭೆ ಚುನಾವಣೆಯಲ್ಲಿ ಜಮೀರ್ ತುಮಕೂರಿನಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಇಲಾಹಿ ಸಿಖಂದರ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಭಾನುವಾರ ಜಮೀರ್ ಹುಟ್ಟುಹಬ್ಬವನ್ನು ಆಚರಿಸಿದರು, ಇದೇ ವೇಳೆ ನಗರದಲ್ಲಿ ಅಗತ್ಯವಿರುವ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದರು. ಎಲ್ಲರ ಬೆಂಬಲದೊಂದಿಗೆ ಯುವ ಕಾಂಗ್ರೆಸ್ ಅನ್ನು ಸಂಘಟಿಸಲು ಜಮೀರ್ ಸಹಾಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

2021ರ ಮೇ ತಿಂಗಳಿನಲ್ಲಿ ಕೋವಿಡ್ ಸಾಂಕ್ರಾಮಿಕದ ವೇಳೆ  ಜಮೀರ್ ಅಹ್ಮದ್ ಖಾನ್ ಸ್ವತಃ ತುಮಕೂರಿಗೆ ತೆರಳಿ ಆಕ್ಸಿಜನ್ ಸಿಲಿಂಡರ್ ನೀಡುವ ಮೂಲಕ ಜನಪ್ರಿಯತೆ ಗಳಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವರನ್ನು ಕಣಕ್ಕಿಳಿಸಿದರೆ, ತುಮಕೂರಿನಲ್ಲಿ ಮುಸ್ಲಿಮರನ್ನು ಒಂದುಗೂಡಿಸಲು ಜಮೀರ್ ಮುಂದಾಗಬಹುದು.ಒಂದು ವೇಳೆ ಅವರು ತಮ್ಮ ಭದ್ರಕೋಟೆಯಾದ ಚಾಮರಾಜಪೇಟೆಯನ್ನು ಸಿದ್ದರಾಮಯ್ಯನವರಿಗೆ ಬಿಟ್ಟುಕೊಟ್ಟರೆ ತುಮಕೂರಿನಿಂದ ಜಮೀರ್‌ಗೆ ಟಿಕೆಟ್ ಪಡೆಯಲು ಇದು ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತುಮಕೂರು ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ನಾಯಕರದ್ದ ಒಡೆದ ಮನೆಯಾಗಿದೆ, ಇವರುಗಳ ಭಿನ್ನಾಭಿಪ್ರಾಯದಿಂದ 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿತು, ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಅಲ್ಪಸಂಖ್ಯಾತರ ಸಂಪೂರ್ಣ ಬೆಂಬಲವನ್ನು ಪಡೆಯುವಲ್ಲಿ ವಿಫಲರಾದರು. 

ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರಾದ ಅಥೀಕ್ ಅಹಮದ್ ಮತ್ತು ಇಕ್ಬಾಲ್ ಅಹ್ಮದ್ ರಫೀಕ್ ವಿರುದ್ಧ ಶೀತಲ ಸಮರ ನಡೆಯುತ್ತಿದೆ. ಹಿರಿಯ ನಾಯಕ ನಯಾಜ್ ಅಹ್ಮದ್ ಬಾಬು 2018 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಹಿರಂಗವಾಗಿ ಬೆಂಬಲಿಸಿಲುವುದರೊಂದಿಗೆ ಮತ ಬ್ಯಾಂಕ್ ವಿಭಜಿಸಿದರು.

ಜಮೀರ್ ಅಹ್ಮದ್ ಮುಸ್ಲಿಂ ಸಮುದಾಯದ ಸಾಮೂಹಿಕ ನಾಯಕ ಮತ್ತು ಅವರು ತುಮಕೂರಿನಿಂದ ಸ್ಪರ್ಧಿಸಿದರೆ, ಅವರು ಗೆಲ್ಲುವ ಅವಕಾಶವಿದೆ. ಇಲ್ಲವಾದರೆ, ರನ್ನರ್ ಅಪ್ ಆಗಿ ಬಂದ ಜೆಡಿಎಸ್ ಮತ್ತೆ ಅಲ್ಪಸಂಖ್ಯಾತ ನಾಯಕರ ಕಿತ್ತಾಟದ ಆಂತರಿಕ ಲಾಭ ಪಡೆಯಬಹುದು ಎಂದು ವಿಶ್ಲೇಷಕ ಸಗೀರ್ ಅಹ್ಮದ್ ಅಭಿಪ್ರಾಯ ಪಟ್ಟಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಜಮೀರ್ ತುಮಕೂರಿನಿಂದ ಸ್ಪರ್ಧಿಸಬಹುದು ಎಂಬ ವಿಷಯವನ್ನು ನಿರಾಕರಿಸಿದರು, ಏಕೆಂದರೆ ಚಾಮರಾಜಪೇಟೆ ಸುರಕ್ಷಿತ ಕ್ಷೇತ್ರವಾಗಿದೆ, ಸಿದ್ದರಾಮಯ್ಯ ಬಾದಾಮಿ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ ಎಂದು ಮಾಜಿ ಶಾಸಕ ರಫೀಕ್ ಅಹ್ಮದ್ ಹೇಳಿದ್ದಾರೆ.

SCROLL FOR NEXT