ಬಿಎಸ್ ಯಡಿಯೂರಪ್ಪ 
ರಾಜಕೀಯ

ಸಿಎಂ ಬಿಎಸ್‌ವೈಗೆ ಸಂಕಷ್ಟ: ವಿರೋಧಿಗಳಿಂದ 'ಗೋ ಬ್ಯಾಕ್, ಸಿಂಗ್' ಅಭಿಯಾನಕ್ಕೆ ಕರೆ?

ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ ಇದೀಗ ಈ ಕುರಿತಂತೆ ಹೊಸ ಬೆಳವಣಿಗೆ ನಡೆದಿದೆ.ಯಡಿಯೂರಪ್ಪ ಅವರ ವಿರೋಧಿಗಳು ಈಗ ಅರುಣ್ ಸಿಂಗ್ ಅವರ ಮೇಲೆ ತಮ್ಮ ಮುನಿಸನ್ನು ತೋರುತ್ತಿದ್ದಾರೆ.

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ ಇದೀಗ ಈ ಕುರಿತಂತೆ ಹೊಸ ಬೆಳವಣಿಗೆ ನಡೆದಿದೆ. ಯಡಿಯೂರಪ್ಪ ಅವರ ವಿರೋಧಿಗಳು ಈಗ ಅರುಣ್ ಸಿಂಗ್ ಅವರ ಮೇಲೆ ತಮ್ಮ ಮುನಿಸನ್ನು ತೋರುತ್ತಿದ್ದಾರೆ.

ಸಿಂಗ್ ಅವರು ಬುಧವಾರ ರಾಜ್ಯಕ್ಕೆ ಆಗಮಿಸಿದಾಗ, ಅವರು ಶಾಸಕರನ್ನು ಭೇಟಿ ಮಾಡುವ ಮೊದಲು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ್ ಬೆಲ್ಲದ್ ಮತ್ತು ಜಿ.ಎಚ್. ​​ತಿಪ್ಪಾರೆಡ್ಡಿ ಸಚಿವ ಸಿ.ಪಿ. ಯೋಗೇಶ್ವರ, ಸುನಿಲ್ ಕುಮಾರ್ ಮತ್ತು ಇನ್ನೂ ಕೆಲವರನ್ನೊಳಗೊಂಡ ಒಂದು ಗುಂಪು, ಮೊದಲು ಶಾಸಕಾಂಗ ಪಕ್ಷದ ಸಭೆಗೆ ಸಿಂಗ್ ಕರೆ ನೀಡಬೇಕೆಂದು ಒತ್ತಾಯಿಸಲು ಯೋಜಿಸಿದೆ.

ಮೊದಲು ಸಚಿವರನ್ನು ಭೇಟಿಯಾಗುವುದಾಗಿ ಸಿಂಗ್ ಸೂಚಿಸಿದ್ದರು ಮತ್ತು ಅಗತ್ಯವಿದ್ದರೆ ಶಾಸಕಾಂಗ ಸಭೆ ನಡೆಸಲು ಸಿಂಗ್ ತಯಾರಾಗಿರಬಹುದು. ಆದರೆ ಅಗತ್ಯವಾದರೆ ‘ಗೋ ಬ್ಯಾಕ್, ಅರುಣ್ ಸಿಂಗ್’ ಅಭಿಯಾನವನ್ನು ಪ್ರಾರಂಭಿಸಲು ಸಹ ಸಿಂಗ್ ವಿರೋಧಿ ಬಣ ಸಿದ್ದವಾಗಿದೆ ಎಂಬ ಆತಂಕವಿದೆ.

ಯಡಿಯೂರಪ್ಪ ಅವರು ಇನ್ನೂ ಎರಡು ವರ್ಷಗಳ ಕಾಲ ಸಿಎಂ ಆಗಿ ಉಳಿಯುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಲು ಸಿಎಂಗೆ ಅಧಿಕಾರ ನೀಡಿದ ಕಾರಣವನ್ನು ಸಿಂಗ್ ಅವರಲ್ಲಿ ಕೇಳಲು ಈ ಗುಂಪು ಬಯಸಿದೆ ಎನ್ನುವುದಾದಲ್ಲಿ ಈ ಭೇಟಿಯ ಉದ್ದೇಶವೇನು ಎನ್ನುವುದು ಈಗಿನ ಪ್ರಶ್ನೆಯಾಗಿ ಉಳಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!