ರಾಜಕೀಯ

ಪೆಗಾಸಸ್ ವಿವಾದ ಕುರಿತ ಸುಪ್ರೀಂ ಕೋರ್ಟ್ ಆದೇಶ ನಮಗೆ ಸಿಕ್ಕ ಗೆಲುವು: ಮಲ್ಲಿಕಾರ್ಜುನ ಖರ್ಗೆ

Manjula VN

ಹಾನಗಲ್: ಪೆಗಾಸಸ್ ವಿವಾದ ಕುರಿತು ಸುಪ್ರೀಂಕೋರ್ಟ್ ತನಿಖೆಗೆ ಆದೇಶಿಸಿರುವುದು ನಮಗೆ ಸಿಕ್ಕಿರುವ ಗೆಲುವಾಗಿದೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆಗಿರುವ ಸೋಲಾಗಿದೆ ಎಂದು ಕಾಂಗ್ರಸ್ ಹಿರಿಯ ನಾಯಕ ಮಲ್ಲಿಕಾರ್ಜನ ಖರ್ಗೆಯವರು ಬುಧವಾರ ಹೇಳಿದ್ದಾರೆ.

ಹಾನಗಲ್ ನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರವ ಅವರು, ವಿರೋಧ ಪಕ್ಷಗಳ ನಾಯಕರ ಮೊಬೈಲ್ ಫೋನ್ ಗಳನ್ನು ಅಕ್ರಮವಾಗಿ ಹ್ಯಾಕ್ ಮಾಡಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೆವು. ಆದರೆ, ಪ್ರಧಾನಿ ಮೋದಿಯವರು ನಮ್ಮ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಇದೀಗ ಕಾಂಗ್ರೆಸ್ ಆಗ್ರಹಿಸಿದ್ದನ್ನೇ ಸುಪ್ರೀಂಕೋರ್ಟ್ ಕೋರ್ಟ್ ಕೂಡ ಹೇಳಿದೆ. ಇದು ನಮಗೆ ಸಿಕ್ಕಿರುವ ಗೆಲುವಾಗಿದೆ. ಪ್ರಧಾನಿ ಮೋದಿಯವರಿಗೆ ಸೋಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಎನು ಮಾಡಿತು ಎಂದು ಪ್ರಧಾನಿ ಮೋದಿಯವರು ಸುದೀರ್ಘವಾಗಿ ಪ್ರಶ್ನೆ ಮಾಡುತ್ತಲೇ ಇದ್ದಾರೆ. ನಾವು ಈ ದೇಶವನ್ನು ಕಟ್ಟಿದ್ದೇವೆ. ಆದರೆ, ರಸ್ತೆ, ರೈಲು ಹಾಗೂ ವಿಮಾನ ನಿಲ್ದಾಣಗಳನ್ನು ಕಳೆದ 7 ವರ್ಷಗಳ ಆಡಳಿತದಲ್ಲಿ ಬಿಜೆಪಿಯವರು ಮಾರಾಟ ಮಾಡುತ್ತಿದ್ದಾರೆ. ಮೋದಿಯವರು ಸರ್ ಕಾ ಸರ್ವನಾಶ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಮತದಾರರು ಕಾಂಗ್ರೆಸ ಅಭ್ಯರ್ಥಿ ಶ್ರೀನಿವಾಸ್ ಮಾನೆಯವರಿಗೆ ಬೆಂಬಲ ನೀಡಬೇಕು. ಕೋವಿಡ್ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಜನರೊಂದಿಗೆ ಶ್ರೀನಿವಾಸ್ ಮಾನೆ ನಿಂತಿದ್ದರು. ಇತರೆ ಪಕ್ಷದವರು ಹಣ ನೀಡಿದರೆ ತೆಗೆದುಕೊಳ್ಳಿ, ಆದರೆ, ಕಾಂಗ್ರೆಸ್ ಅಭ್ಯರ್ಥಿಗೇ ಮತ ನೀಡಿ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಮೊದಲೇ ಟಿಕೆಟ್ ನೀಡಿದ್ದರೆ, 2018ರ ಚುನಾವಣೆಯಲ್ಲಿ ಮಾನೆಯವರು ಗೆಲುವು ಸಾಧಿಸುತ್ತಿದ್ದರು. ಹೆಸರು ಪ್ರಕಟಿಸುವುದು ತಡವಾಗಿದ್ದರಿಂದ ಕೆಲವೇ ಅಂತರದಲ್ಲಿ ಅವರಿಗೆ ಸೋಲಾಯಿತು ಎಂದಿದ್ದಾರೆ.

SCROLL FOR NEXT