ಎ.ಎಚ್.ವಿಶ್ವನಾಥ್ 
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಭೇಟಿ ಮಾಡಿದ ತಕ್ಷಣ ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದಲ್ಲ: ವಿಶ್ವನಾಥ್ ಸ್ಪಷ್ಟನೆ

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಭೇಟಿ ಮಾಡಿದ ತಕ್ಷಣ ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದಲ್ಲ.. ಭೇಟಿ ಹಿಂದೆ ರಾಜಕೀಯ ಉದ್ದೇಶ ಇಲ್ಲ ಎಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಹೇಳಿದ್ದಾರೆ.

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಭೇಟಿ ಮಾಡಿದ ತಕ್ಷಣ ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದಲ್ಲ.. ಭೇಟಿ ಹಿಂದೆ ರಾಜಕೀಯ ಉದ್ದೇಶ ಇಲ್ಲ ಎಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಹೇಳಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಿಪುರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಸೌಜನ್ಯಯುತವಾಗಿದ್ದು, ಅದರಲ್ಲಿ ರಾಜಕೀಯ ಉದ್ದೇಶ ಇಲ್ಲ. ನಾನು ಯಾವುದೇ ಟಿಕೆಟ್‌ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು.

‘ನಮ್ಮ ರಾಜ್ಯದ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅಂತೆಯೇ, ಸಿದ್ದರಾಮಯ್ಯ ಅವರು ಆಪರೇಷನ್‌ ಮಾಡಿಸಿಕೊಂಡಿದ್ದು ಈ ಕಾರಣಕ್ಕೆ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಅವರನ್ನು ಭೇಟಿ ಮಾಡಿದ ತಕ್ಷಣಕ್ಕೆ ಕಾಂಗ್ರೆಸ್‌ಗೆ ಹೋಗುತ್ತೇನೆ ಎನ್ನಲು ಆಗುವುದಿಲ್ಲ. ನಾನು ಇವತ್ತಿಗೂ ಬಿಜೆಪಿಯಲ್ಲೇ ಇದ್ದೇನೆ. ನನಗೀಗ 75 ವರ್ಷ ಆಗಿದೆ. ಶಾಸಕನಾಗಿ ಎಲ್ಲ ಮಜಲುಗಳನ್ನು ನೋಡಿದ್ದೇನೆ. ಯುವಕರಿಗೆ ಟಿಕೆಟ್ ನೀಡಲಿ. ನಾವು ಸಂಘಟನೆ ಮಾಡುತ್ತೇವೆ’ ಎಂದರು.

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು ‘ ಹಿಂದೆಲ್ಲ ಕಾಂಗ್ರೆಸ್ ಎಲ್ಲ ಕಡೆ ಅಧಿಕಾರಕ್ಕೆ ಬರುತ್ತಿತ್ತು. ಈಗ ಕಾಲ, ನಾಯಕತ್ವ ಎಲ್ಲವೂ ಬದಲಾಗಿದೆ. ಸಂಘಟನಾ ಚತುರತೆ ಬದಲು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ರಾಹುಲ್‌ ಗಾಂಧಿ ಸಹ ಭಾರತ್‌ ಜೋಡೊ ಮೂಲಕ ಸಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲ ಪಕ್ಷಗಳ ಸಿದ್ದಾಂತವನ್ನು ಜನರು ಒಪ್ಪುತ್ತಾರೆ. ಆದರೆ ಪಕ್ಷ ನಡೆಸುವ ನಾವಿಕನ ಎಡವಟ್ಟಿನಿಂದ ವಿರೋಧ ಪಕ್ಷದಲ್ಲಿ ಕೂರಬೇಕಾಗುತ್ತದೆ’ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kolkata: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪಿಎ ಗುಂಡೇಟಿಗೆ ಬಲಿ!

ವಿಜಯ್ ಸಿಎಂ ಕನಸಿಗೆ ತಣ್ಣೀರು?: ತಮಿಳುನಾಡಿನಲ್ಲಿ ರಾಜಕೀಯ ಸಂಚಲನ, DMK-AIADMK ಮೈತ್ರಿ ಸರ್ಕಾರ ರಚನೆ?

ವಿಜಯ್ ಗೆ ಬೆಂಬಲ ನೀಡಲ್ಲ- ಎಡಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್; ನಾವು ಇನ್ನೂ ನಿರ್ಧರಿಸಿಲ್ಲ- ವಿಸಿಕೆ

IPL 2026: ಕೂಪರ್ ಕೊನೊಲಿ ಶತಕ ವ್ಯರ್ಥ, 33 ರನ್ ಗಳ ಅಂತರದಿಂದ SRH ಗೆಲುವು!

ತಮಿಳುನಾಡು: TVK ಗೆ ಬಹುಮತದ ಕೊರತೆ; ಇಕ್ಕಟ್ಟಿನಲ್ಲಿ ವಿಜಯ್; ರಾಜ್ಯಪಾಲರ ನಡೆ ಏನು?

SCROLL FOR NEXT