ರಾಜಕೀಯ

ಸಿದ್ದರಾಮಯ್ಯನವರು ಈ ಬಾರಿ ಚುನಾವಣೆಗೆ ನಿಲ್ಲದೆ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಗಮನ ಹರಿಸಲಿ: ಸಂತೋಷ್ ಲಾಡ್

Sumana Upadhyaya

ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಣ, ಡಿ ಕೆ ಶಿವಕುಮಾರ್ ಬಣ ಎಂಬುದಿಲ್ಲ, ಮೇಲ್ನೋಟದಲ್ಲಿ ಈ ರೀತಿ ಮಾತನಾಡಬಹುದು, ಬೇಕಿದ್ದರೆ ಯಾರು ಬೇಕಾದರೂ ಬಂದು ಸಮೀಕ್ಷೆ ಮಾಡಲಿ, ಹಳ್ಳಿಗಳಲ್ಲಿ ಬೇಕಾದರೆ ಬಂದು ನೋಡಲಿ ಎಂದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಲ್ಲಿ ನಿಂತರೂ ಗೆಲ್ಲುತ್ತಾರೆ, ಆದರೆ ಅವರು ಈ ಬಾರಿ ಚುನಾವಣೆಗೆ ನಿಲ್ಲದೆ ರಾಜ್ಯಾದ್ಯಂತ ಎಲ್ಲ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು. 

ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಯಾರಾಗಬೇಕೆಂಬುದು ಅಂತಿಮವಾಗಿ ಹೈಕಮಾಂಡ್ ಗೆ ಬಿಟ್ಟ ವಿಚಾರ. ಸಿದ್ದರಾಮಯ್ಯನವರು ಚುನಾವಣೆಗೆ ನಿಂತುಕೊಳ್ಳದೆ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಸಿದ್ದರಾಮಯ್ಯನವರನ್ನು ಮುಕ್ತವಾಗಿ ಬಿಡಬೇಕು. ಡಿ ಕೆ ಶಿವಕುಮಾರ್ ಅವರನ್ನು ಸಹ ಮುಕ್ತವಾಗಿ ಬಿಡಬೇಕು. ಉನ್ನತ ನಾಯಕರು ಒಂದೇ ಜಿಲ್ಲೆಗೆ ಸೀಮಿತವಾಗಬಾರದು ಇಡೀ ರಾಜ್ಯಕ್ಕೆ ಸಂಬಂಧಿಸಿದವರಾಗಿ ಪಕ್ಷದ ಇತರ ನಾಯಕರು, ಶಾಸಕರ ಬೆಂಬಲಕ್ಕೆ ನಿಂತು ಕೆಲಸ ಮಾಡಬೇಕೆಂಬುದು ನನ್ನ ಅಭಿಪ್ರಾಯ ಎಂದರು.

ಇದು ಪಕ್ಷದ ನಿಲುವು, ಅಭಿಪ್ರಾಯವಲ್ಲ, ಕೇವಲ ನನ್ನ ವೈಯಕ್ತಿಕ, ಇದರ ಹಿಂದೆ ಯಾವುದೇ ರಾಜಕೀಯ ಒತ್ತಡ, ದುರುದ್ದೇಶಗಳಿಲ್ಲ ಎಂದು ಸಂತೋಷ್ ಲಾಡ್ ಹೇಳಿದರು.

SCROLL FOR NEXT