ರಾಜಕೀಯ

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆಪ್ತ ನಾಸೀರ್ ಹುಸೇನ್ ಗೆ ಸ್ಥಾನ!

Shilpa D

ಬೆಂಗಳೂರು: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮರು ರಚನೆಗೊಂಡಿದ್ದು, ಹೊಸದಾಗಿ ಕೆಲವರ ಹೆಸರು ಸೇರ್ಪಡೆಗೊಂಡಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯ 79ನೇ ಜನ್ಮದಿನವಾದ ಆ. 20ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಸಿಡಬ್ಲ್ಯುಸಿಗೆ ಸೇರ್ಪಡೆಗೊಂಡ ಹೆಸರುಗಳನ್ನು ಘೋಷಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಖಾಯಂ ಆಹ್ವಾನಿತರಾಗಿ ಕನ್ಹಯ್ಯ ಕುಮಾರ್ ನೇಮಕಗೊಂಡಿದ್ದಾರೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ, ಹಾಗೆಯೇ  ವಿಶ್ವವಿದ್ಯಾಲಯದ ಮತ್ತೊಂದು ಒಕ್ಕೂಟದ ಅಧ್ಯಕ್ಷರು , ಕರ್ನಾಟಕ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರಿಗೂ  ಸ್ಥಾನ ನೀಡಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅವರ ಅತ್ಯಾಪ್ತ ಹುಸೇನ್ ಕೂಡ ಸಿಡಬ್ಲ್ಯೂಸಿ ಸದಸ್ಯರಾಗಿದ್ದಾರೆ. ಇನ್ನಿಬ್ಬರು ಹಿರಿಯ ನಾಯಕರಾದ ಬಿಕೆ ಹರಿಪ್ರಸಾದ್ ಮತ್ತು ವೀರಪ್ಪ ಮೊಯ್ಲಿ ಅವರನ್ನು ಕಾಯಂ ಆಹ್ವಾನಿತರನ್ನಾಗಿ ನೇಮಕ ಮಾಡಲಾಗಿದೆ.

ಮೈಸೂರಿನಲ್ಲಿ ವಿದ್ಯಾರ್ಥಿ ನಾಯಕರಾಗಿ ಆರಂಭಿಸಿದ ಹುಸೇನ್ ಅವರು ದೆಹಲಿಯಲ್ಲಿ ಖರ್ಗೆಯವರ ಕಚೇರಿಯನ್ನು ನಿರ್ವಹಿಸುತ್ತಿದ್ದಾರೆ.  ಆಗಾಗ್ಗೆ  ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಾರೆ, ರಾಷ್ಟ್ರದಾದ್ಯಂತದ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುತ್ತಾರೆ. ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಕೃಷಿ ಕಾನೂನುಗಳ ಮಸೂದೆಯ ವಿರುದ್ಧ ಆಕ್ರಮಣಕಾರಿಯಾಗಿ ಪ್ರತಿಭಟಿಸಿದಾಗ , ಇತರ ಏಳು ಮಂದಿಯೊಂದಿಗೆ ಅಮಾನತುಗೊಂಡು ಸುದ್ದಿಯಲ್ಲಿದ್ದರು.

ಕಾಂಗ್ರೆಸ್‌ನ ಅಲ್ಪಸಂಖ್ಯಾತ ಸಮುದಾಯದ ಐವರು ಪ್ರಮುಖ ನಾಯಕರಲ್ಲಿ ಹುಸೇನ್ (52) ಒಬ್ಬರು.  ಎಕೆ ಆಂಥೋನಿ, ಸಲ್ಮಾನ್ ಖುರ್ಷಿದ್ ಮತ್ತು ಗುಲಾಮ್ ಅಹ್ಮದ್ ಮಿರ್ ಮತ್ತು ತಾರಿಕ್ ಅನ್ವರ್ ಅವರಾಗಿದ್ದಾರೆ.

ಜಾಫರ್ ಷರೀಫ್ ನಂತರ, ಅಲ್ಪಸಂಖ್ಯಾತ ನಾಯಕತ್ವದ ಕೊರತೆಯನ್ನು ಹುಸೇನ್ ತುಂಬಿದಂತಿದೆ. ಹುಸೇನ್ ಅವರು ಗಣಿ ಜಿಲ್ಲೆ ಬಳ್ಳಾರಿಯಿಂದ ಬಂದವರು ಮತ್ತು ಸ್ವಚ್ಛ ಮತ್ತು ಬೌದ್ಧಿಕ ವ್ಯಕ್ತಿತ್ವ ಉಳಿಸಿಕೊಂಡಿದ್ದಾರೆ.

SCROLL FOR NEXT