ಜನಾರ್ಧನ ರೆಡ್ಡಿ 
ರಾಜಕೀಯ

ಕೆಆರ್‌ಪಿಪಿ ಅಧಿಕಾರಕ್ಕೆ ಬಂದಿದ್ದೇ ಆದರೆ, ರೈತರಿಗೆ ಪ್ರತೀ ವರ್ಷ ರೂ.15 ಸಾವಿರ ನೆರವು: ಜನಾರ್ಧನ ರೆಡ್ಡಿ ಘೋಷಣೆ

ಇತ್ತೀಚೆಗಷ್ಟೇ ತಮ್ಮದೇ ರಾಜಕೀಯ ಪಕ್ಷ ಆರಂಭಿಸಿದ್ದ ಬಿಜೆಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು, ಕರ್ನಾಟಕದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ರಾಜ್ಯದ ಪ್ರತೀ ರೈತ ಕುಟುಂಬಕ್ಕೆ ವಾರ್ಷಿಕ 15 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ.

ತುಮಕೂರು: ಇತ್ತೀಚೆಗಷ್ಟೇ ತಮ್ಮದೇ ರಾಜಕೀಯ ಪಕ್ಷ ಆರಂಭಿಸಿದ್ದ ಬಿಜೆಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು, ಕರ್ನಾಟಕದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ರಾಜ್ಯದ ಪ್ರತೀ ರೈತ ಕುಟುಂಬಕ್ಕೆ ವಾರ್ಷಿಕ 15 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ.
    
ಗಣಿ ಉದ್ಯಮಿ ಇತ್ತೀಚೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಆರಂಭಿಸಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆ.

ಶನಿವಾರ ಪಾವಗಡದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರೆಡ್ಡಿ, ರೈತರಿಗೆ ಬೀಜ ಮತ್ತು ರಸಗೊಬ್ಬರಗಳನ್ನು ವಿತರಿಸಲು 'ರೈತ ಭರವಸೆ ಕೇಂದ್ರ'ಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 2,500 ರೂ ನೀಡುವುದಾಗಿ ಘೋಷಿಸಿದರು.

ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲವಾದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆಂದು ಹೇಳಿದರು.

ಕೆಆರ್‌ಪಿಪಿ 40 ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸುವತ್ತ ಗಮನ ಹರಿಸಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ನಾಗೇಂದ್ರ ಕುಮಾರ್ ನೇರಲಕುಣೆ ಅವರು ಕೆಆರ್‌ಆರ್‌ಪಿಗೆ ಸೇರ್ಪಡೆಗೊಂಡರು, ಬಳಿಕ ರೆಡ್ಡಿ ಅವರು, ನಾಗೇಂದ್ರ ಅವರನ್ನು ಪಾವಗಡದಿಂದ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

SIR ಗೆ ಆಕ್ಷೇಪ; ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಥಾಣೆ ಬಳಿ ಕಾಂಕ್ರೀಟ್ ಮಿಕ್ಸರ್ ಲಾರಿ - ವ್ಯಾನ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ 11 ಮಂದಿ ಸಾವು

SCROLL FOR NEXT