ರಾಜಕೀಯ

ಜೆಡಿಎಸ್ ಜಾತ್ಯತೀತ ಎಂಬ ಟ್ಯಾಗ್ ತೆಗೆಯಬೇಕು: ದಿನೇಶ್ ಗುಂಡೂರಾವ್

Nagaraja AB

ಬೆಂಗಳೂರು: ಜೆಡಿಎಸ್ ಜಾತ್ಯತೀತ ಎಂಬ ಟ್ಯಾಗ್ ತೆಗೆಯಬೇಕಾದ ಅಗತ್ಯವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಗೆ ತಮ್ಮ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನಡುವೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ , ಜೆಡಿಎಸ್‌ಗೆ ಜಾತ್ಯತೀತ ರಾಜಕೀಯದಲ್ಲಿ ನಿಜವಾಗಿ ನಂಬಿಕೆಯಿಲ್ಲ ಎಂಬುದು ನಮಗೆ ತಿಳಿದಿದೆ. ಅವರು ಹಿಂದೆಯೂ ಕೂಡಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗಾಗೀ ಇದೇನೂ ಹೊಸದಲ್ಲ. ಜನತಾ ದಳ ಜಾತ್ಯತೀತ ಎಂಬ ಟ್ಯಾಗ್ ತೆಗೆಯಬೇಕಾದ ಅಗತ್ಯವಿದೆ ಎಂದರು.

ಜೆಡಿಎಸ್ ನವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅವರಿಗೆ ಯಾವುದೇ ತತ್ವ, ಸಿದ್ಧಾಂತಗಳಿಲ್ಲ. ಕುಮಾರಸ್ವಾಮಿ ಅವರಿಗೆ ಅಧಿಕಾರ ಮಾತ್ರ ಮುಖ್ಯ. ಇದು ಕರ್ನಾಟಕದಲ್ಲಿ ಜೆಡಿ(ಎಸ್) ಮೇಲೆ ಆಳವಾದ ಪರಿಣಾಮ ಬೀರಲಿದ್ದು, ಅಂತ್ಯವೂ ಆಗಬಹುದು ಎಂದನಿಸುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

SCROLL FOR NEXT