ಎಂ.ಬಿ ಪಾಟೀಲ್ 
ರಾಜಕೀಯ

ನೀವು ನಿಜವಾಗಲೂ ಲಿಂಗಾಯತರಾ? ಡಿಕೆ ಸುರೇಶ್‌ ಕೊರಳಪಟ್ಟಿ ಹಿಡಿತಾರೆ; ಬ್ರಾಹ್ಮಣರ ಮೇಲೆ ಏಕಿಷ್ಟು ದ್ವೇಷ?

ಕಾಂಗ್ರೆಸ್​​ ಸಂಸದ ಡಿ.ಕೆ.ಸುರೇಶ್ ವಿಧಾನಸೌಧದಲ್ಲಿ ಶರ್ಟ್ ಎಳೆದಿದ್ದಾರೆ. ಮತ್ತೊಮ್ಮೆ 5 ವರ್ಷ ಸಿಎಂ ಅಂದರೇ ನಿಮ್ಮ ಕೊರಳ ಪಟ್ಟಿ ಹಿಡಿಯುತ್ತಾರೆ ಎಂದು ಎಂಬಿ ಪಾಟೀಲ್ ಗೆ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.

ಮೈಸೂರು: ಕಾಂಗ್ರೆಸ್​​ ಸಂಸದ ಡಿ.ಕೆ.ಸುರೇಶ್ ವಿಧಾನಸೌಧದಲ್ಲಿ ಶರ್ಟ್ ಎಳೆದಿದ್ದಾರೆ. ಮತ್ತೊಮ್ಮೆ 5 ವರ್ಷ ಸಿಎಂ ಅಂದರೇ ನಿಮ್ಮ ಕೊರಳ ಪಟ್ಟಿ ಹಿಡಿಯುತ್ತಾರೆ ಎಂದು ಎಂಬಿ ಪಾಟೀಲ್ ಗೆ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ  ಮಾತನಾಡಿದ ಅವರು, ಸಂಸದ ಪ್ರತಾಪ್​ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಈಗ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎನ್ನುವ ಮೂಲಕ ಒಕ್ಕಲಿಗರನ್ನು ಮುಗಿಸಲು ಹೊರಟ್ಟಿದ್ದೀರಾ? ನಿಮ್ಮ ಒಂದು ಹೇಳಿಕೆ ಪರಿಣಾಮ ಸಂಸದ ಡಿಕೆ ಸುರೇಶ್ ನಿಮ್ಮ ಕೈ ಎಳೆದಿದ್ದಾರೆ. ಇನ್ನೊಂದು ಬಾರಿ ಅಂತಹ ಹೇಳಿಕೆ ಕೊಡಿ ಡಿಕೆ ಸುರೇಶ್ ನಿಮ್ಮ ಕೊರಳ ಪಟ್ಟಿ ಹಿಡಿಯುತ್ತಾರೆ ಎಂದ ಪ್ರತಾಪ್‌ ಸಿಂಹ, ಎಂಬಿ ಪಾಟೀಲ್, ಸಿಎಂ ಸಿದ್ದರಾಮಯ್ಯ ಅವರ ಛೇಲಾ ಪಡೆಯ ಅಧ್ಯಕ್ಷ ಎಂದು ಕಿಡಿಕಾರಿದರು.

ಎಂ.ಬಿ.ಪಾಟೀಲ್​ಗೆ ಸಿಕ್ಕಿದ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತಾ ಒದ್ದಾಡುತ್ತಿದ್ದಾರೆ. ಎಂ.ಬಿ.ಪಾಟೀಲ್ ಅವರಿಗೆ ಬರೀ ಚಿಲ್ಲರೆ, ನೋಟಿನ ಬಗ್ಗೆ ಮಾತ್ರ ಚಿಂತೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ? ಎಂದು ಎಂ.ಬಿ.ಪಾಟೀಲ್ ವಿರುದ್ಧ ಪ್ರತಾಪ್​ ಸಿಂಹ ವಾಗ್ದಾಳಿ ಮಾಡಿದರು.

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ವಿರುದ್ದ ಷಡ್ಯಂತ್ರ ಮಾಡಲು ಕಾಂಗ್ರೆಸ್‌ನಿಂದ ಸುಫಾರಿ ತೆಗೆದುಕೊಂಡವರು ನೀವೆ ತಾನೇ? ಸಿದ್ದರಾಮಯ್ಯರು ಲಿಂಗಾಯತ ಧರ್ಮ ಒಡೆಯಲು ಹೋದಾಗ ಅದರ ಸುಫಾರಿ ಪಡೆದವರು ನೀವೆ ತಾನೇ? ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಬಗ್ಗೆ ಎಂಬಿ ಪಾಟೀಲ್ ವ್ಯಂಗ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಂಬಿ ಪಾಟೀಲ್ ಅವರೇ ನೀವು ನಿಜವಾಗಲೂ ಲಿಂಗಾಯತರಾ? ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ಕಾಂಗ್ರೆಸ್ ಕುತಂತ್ರ ಅಲ್ವಾ? ಕಾಂಗ್ರೆಸ್ ಲಿಂಗಾಯತರಿಗೆ ಅನ್ಯಾಯ ಮಾಡಿದ್ರೂ ನೀವು ಸುಮ್ಮನೆ ಇದ್ರಿ. ದಿನೇಶ್ ಗುಂಡೂರಾವ್ ಯಡಿಯೂರಪ್ಪರನ್ನು ಹುಚ್ಚ ಅಂದಿದ್ದರು. ಆಗಲೂ ನಿಮ್ಮೊಳಗೆ ಲಿಂಗಾಯತ ಭಾವನೆ ಜಾಗೃತ ಆಗಲಿಲ್ಲವಲ್ಲ? ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಎಲ್‌ ಸಂತೋಷ್ ಅವರ ಬಗ್ಗೆ ಪದೇ ಪದೇ ಯಾಕೆ ಮಾತಾಡ್ತೀರಿ? ಬ್ರಾಹ್ಮಣರನ್ನು ದಿನವೂ ಯಾಕೆ ಬೈಯ್ತೀರಿ, ಯಾಕೆ ನಿಮಗೆ ಬ್ರಾಹ್ಮಣರ ಮೇಲೆ ಇಷ್ಟು ದ್ವೇಷ? ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರು ಅಲ್ವಾ? ಬಿಎಲ್ ಸಂತೋಷ್ ನಿಮಗೆ ಏನಾದರೂ ತಿವಿದಿದ್ದಾರಾ ಎಂದು ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel