ಡಿ.ಕೆ ಶಿವಕುಮಾರ್ 
ರಾಜಕೀಯ

'ಅಣ್ಣ' ಕೋಣನಾದ್ರೂ ಬಲಿ ಕೊಡ್ಲಿ, ನಿಂಬೆ ಹಣ್ಣನ್ನಾದ್ರೂ ಮಂತ್ರಿಸಿ ಇಟ್ಟುಕೊಳ್ಳಲಿ; ಪುತ್ರವ್ಯಾಮೋಹ ತಿರಸ್ಕರಿಸಿ ಇತಿಹಾಸ ಸೃಷ್ಟಿಸಿ!

ಈ ಪುತ್ರ ವ್ಯಾಮೋಹ ಯಾರನ್ನೂ ಬಿಡೋದಿಲ್ಲ. ಧೃತರಾಷ್ಟ್ರನ ಪುತ್ರ ಪ್ರೇಮದಿಂದಲೇ ಮಹಾಭಾರತ ನಡೆಯಿತು. ಒಂದು ಕಡೆ ಪಾಂಡವರು, ಇನ್ನೊಂದು ಕಡೆ ನೂರು ಮಂದಿ ಕೌರವರು. ಪಾಂಡವರು ಬರೀ ಐದು ಗ್ರಾಮ ಕೇಳ್ತಾರೆ.

ಹಾಸನ: ಅಣ್ಣ (ರೇವಣ್ಣ) ಕೋಣನಾದ್ರೂ ಬಲಿ ಕೊಡ್ಲಿ. ನಿಂಬೆ ಹಣ್ಣನಾದ್ರೂ ಮಂತ್ರಿಸಿ ಇಟ್ಟುಕೊಳ್ಳಲಿ, ಆದರೆ ಒಂದು ಮಾತು ಹೇಳ್ತೇನೆ, ಇದು ನೂರಕ್ಕೆ ನೂರರಷ್ಟು ಸತ್ಯ, ಈಗ ನಿಂಬೆ ಹಣ್ಣು ವರ್ಕೌಟ್ ಆಗಲ್ಲ. ಎಲ್ಲ ರಿವರ್ಸ್ ಹೊಡೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಹೊಳೆನರಸೀಪುರದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿ ಅವರು,  ಈ ಪುತ್ರ ವ್ಯಾಮೋಹ ಯಾರನ್ನೂ ಬಿಡೋದಿಲ್ಲ. ಧೃತರಾಷ್ಟ್ರನ ಪುತ್ರ ಪ್ರೇಮದಿಂದಲೇ ಮಹಾಭಾರತ ನಡೆಯಿತು. ಒಂದು ಕಡೆ ಪಾಂಡವರು, ಇನ್ನೊಂದು ಕಡೆ ನೂರು ಮಂದಿ ಕೌರವರು. ಪಾಂಡವರು ಬರೀ ಐದು ಗ್ರಾಮ ಕೇಳ್ತಾರೆ. ಆದರೆ ಧೃತರಾಷ್ಟ್ರ ಪುತ್ರ ಪ್ರೇಮದಿಂದ ಅವರಿಗೆ ಐದು ಗ್ರಾಮ ಸಿಗೋದಿಲ್ಲ. ಕೊನೆಗೆ ಕುರುಕ್ಷೇತ್ರ ಯುದ್ಧ ನಡೆಯಿತು. ಧರ್ಮರಾಜ್ಯ ಸಂಸ್ಥಾಪನೆ ಆಯಿತು ಎಂದರು.

ನೀವು ಹೊಳೆನರಸೀಪುರದ ಜನ ಈ ಧರ್ಮ ಸೂಕ್ಷ್ಮ ಅರ್ಥ ಮಾಡಿಕೊಂಡು, ಇಂಥದ್ದೇ ಇತಿಹಾಸ ಸೃಷ್ಟಿ ಮಾಡಬೇಕು, ಕಾಂಗ್ರೆಸ್ ಅಭ್ಯರ್ಥಿಯನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಐತಿಹಾಸಿಕ ನಿರ್ಧಾರವನ್ನು ನೀವು ಮಾಡಬೇಕು. ಆ ಮೂಲಕ ಧರ್ಮರಾಜ್ಯ ಸ್ಥಾಪನೆ ಮಾಡಬೇಕು ಎಂದು ಕರೆ ನೀಡಿದರು.

ಅಣ್ಣ (ರೇವಣ್ಣ) ಕೋಣನಾದ್ರೂ ಬಲಿ ಕೊಡ್ಲಿ. ನಿಂಬೆ ಹಣ್ಣನಾದ್ರೂ ಮಂತ್ರಿಸಿ ಇಟ್ಟುಕೊಳ್ಳಲಿ. ಆದರೆ ಒಂದು ಮಾತು ಹೇಳ್ತೇನೆ, ಇದು ನೂರಕ್ಕೆ ನೂರರಷ್ಟು ಸತ್ಯ, ಈಗ ನಿಂಬೆ ಹಣ್ಣು ವರ್ಕೌಟ್ ಆಗಲ್ಲ. ಎಲ್ಲ ರಿವರ್ಸ್ ಹೊಡಿಯುತ್ತದೆ. ಈಗಾಗಲೇ ಹೊಡೀತಾ ಇದೆ. ಹೊಳೆನರಸೀಪುರ, ಹಾಸನ, ಅರಸೀಕೆರೆಯಲ್ಲಿ ಏನೇನು ಆಗ್ತಾ ಇದೆ ಅಂತ ನೀವೇ ನೋಡ್ತಾ ಇದ್ದೀರಲ್ಲ ಎಂದು ಮಾಜಿ ಸಚಿವ ಎಚ್‌.ಡಿ ರೇವಣ್ಣ ವಿರುದ್ದ ಕಿಡಿಕಾರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT