ಕಾಂಗ್ರೆಸ್ 
ರಾಜಕೀಯ

ಕರ್ನಾಟಕ ಚುನಾವಣೆ: ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ಸುಳಿವು, ಎಲ್ಲಾ ದೌರ್ಬಲ್ಯಗಳನ್ನು ದಾಟಿ ಕಾಂಗ್ರೆಸ್ ಗೆಲುವು ಸಾಧ್ಯವೇ?

ದೇಶದಾದ್ಯಂತ ಕಾಂಗ್ರೆಸ್‌ಗೆ ಕಾಯಕಲ್ಪ ಸಿಗುವ ಭರವಸೆ ಇದ್ದರೆ ಅದು ಕರ್ನಾಟಕ ರಾಜ್ಯದಿಂದಲೇ ಶುರುವಾಗಬೇಕು. 2013ರಿಂದ 2018ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪಕ್ಷ ಈ ಬಾರಿಯೂ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. 

ದೇಶದಾದ್ಯಂತ ಕಾಂಗ್ರೆಸ್‌ಗೆ ಕಾಯಕಲ್ಪ ಸಿಗುವ ಭರವಸೆ ಇದ್ದರೆ ಅದು ಕರ್ನಾಟಕ ರಾಜ್ಯದಿಂದಲೇ ಶುರುವಾಗಬೇಕು. 2013ರಿಂದ 2018ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪಕ್ಷ ಈ ಬಾರಿಯೂ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. 

2013ರಲ್ಲಿ ಕಾಂಗ್ರೆಸ್ 120 ಸ್ಥಾನಗಳನ್ನು ಗೆದ್ದು, ಶೇ 36.6 ರಷ್ಟು ಮತಗಳನ್ನು ಗಳಿಸಿತ್ತು. ಬಿಜೆಪಿಯು 40 ಸ್ಥಾನಗಳು (ಶೇ 19.9) ಮತ್ತು ಜೆಡಿಎಸ್ 40 ಸ್ಥಾನಗಳು (ಶೇ 20.2) ರಷ್ಟು ಗೆದ್ದಿದ್ದವು. ಆದರೆ, 2018ರಲ್ಲಿ ಕಾಂಗ್ರೆಸ್‌ ಶೇ 38.14ರಷ್ಟು ಮತಗಳಿದ್ದರೂ 80 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಈಗ, ಪಕ್ಷವು ತನ್ನ ಮತ ಪಾಲನ್ನು ಶೇ 42ಕ್ಕೆ ಕೊಂಡೊಯ್ಯಲು ಮತ್ತು 113ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರುವ ಹಂಬಲದಲ್ಲಿದೆ. 

ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅದು ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಲಿಂಗಾಯತರನ್ನು ಓಲೈಸಲು ಸಹಾಯ ಮಾಡಬಹುದು. ಈ ಮಧ್ಯೆ, ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ದಲಿತ ಮತ್ತು ಕುರುಬ ಸಮುದಾಯದ ಮತಗಳನ್ನು ಪಕ್ಷಕ್ಕೆ ದೊರಕುವಂತೆ ಮಾಡಬಹುದು. ಅಲ್ಪಸಂಖ್ಯಾತ ಸಮುದಾಯದ ಮತದಾರರಿಂದಲೂ ಬೆಂಬಲ ಪಡೆಯುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ.

ಬೆಂಗಳೂರಿನಲ್ಲಿ ಪಕ್ಷವು 28 ಸ್ಥಾನಗಳಲ್ಲಿ ಕನಿಷ್ಠ 12 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಅವರ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಕೋಮು ಸೂಕ್ಷ್ಮವಾಗಿರುವ ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಈ ಬಾರಿ ಇನ್ನೂ ಕೆಲವು ಸ್ಥಾನಗಳ ನಿರೀಕ್ಷೆಯಲ್ಲಿದೆ. ಆದರೆ, 'ಹಿಜಾಬ್' ನಂತಹ ಸಮಸ್ಯೆಗಳು ಎಸ್‌ಡಿಪಿಐಗೆ ಸಹಾಯ ಮಾಡಬಹುದು ಮತ್ತು ಕಾಂಗ್ರೆಸ್ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಪಕ್ಷವು ಈಗಾಗಲೇ ಐದು ಭರವಸೆಗಳನ್ನು ಘೋಷಿಸಿದೆ. ಭ್ರಷ್ಟಾಚಾರ, ಶೇ 40 ರಷ್ಟು ಕಮಿಷನ್ ಮತ್ತು ಬೆಲೆ ಏರಿಕೆಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ, ಪಕ್ಷವು ಬಿಜೆಪಿ ವಿರುದ್ಧ ಉತ್ತಮ ಕಾರ್ಯತಂತ್ರ ರೂಪಿಸಲು ಯಶಸ್ವಿಯಾಗಿದೆ. ಈಗಿರುವ ಪರಿಸ್ಥಿತಿಯು 2013ರಂತೆಯೇ ಕಂಡುಬಂದರೂ, ಅಂದಿನಂತೆಯೇ ಇಂದು ಆಗುವ ಸಾಧ್ಯತೆಯನ್ನು ಸ್ಪಷ್ಟವಾಗಿ ಹೇಳುವಂತಿಲ್ಲ. 

ಕಾಂಗ್ರೆಸ್ ಬಲಗಳು

ರಾಜ್ಯದಲ್ಲಿ ಬಲವಾದ ನೆಲೆ ಹೊಂದಿರುವುದು

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರಂತಹ ನಾಯಕರು

ಕಾರ್ಯತಂತ್ರ ರೂಪಿಸುವ ಸಾಮರ್ಥ್ಯ, ಐದು ಖಾತರಿಗಳು

ದೌರ್ಬಲ್ಯಗಳು

ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾಯಕರ ನಡುವೆ ಆಂತರಿಕ ಕಚ್ಚಾಟ

ಪ್ರಚಾರದ ವೇಳೆ ನಾಯಕರಿಂದ ನಾಲಿಗೆ ಹರಿಬಿಡುವುದು

ಚುನಾವಣಾ ಪ್ರಚಾರದಲ್ಲಿ ಕೇಡರ್ ಆಧಾರಿತ ವಿಧಾನವಿಲ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!