ಸಿ.ಟಿ ರವಿ ಮತ್ತು ತಮ್ಮಯ್ಯ 
ರಾಜಕೀಯ

ಸಿ.ಟಿ ರವಿ ‘ಏಕಚಕ್ರಾಧಿಪತ್ಯ’ಕ್ಕೆ ಬ್ರೇಕ್: ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಕಾಂಗ್ರೆಸ್ ಮಾಸ್ಟರ್ ಸ್ಟ್ರೋಕ್!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರ 14 ವರ್ಷದ ಸಹವರ್ತಿ, ಆಪ್ತ ಲಿಂಗಾಯತ ಮುಖಂಡ ಎಚ್.ಡಿ.ತಮ್ಮಯ್ಯ ಪಕ್ಷದಿಂದ ನಿರ್ಗಮಿಸಿದ್ದು, ಈ ಬಾರಿಯ ಚುನಾವಣೆ ಕೇಸರಿ ಪಕ್ಷಕ್ಕೆ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದ

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರ 14 ವರ್ಷದ ಸಹವರ್ತಿ, ಆಪ್ತ ಲಿಂಗಾಯತ ಮುಖಂಡ ಎಚ್.ಡಿ.ತಮ್ಮಯ್ಯ ಪಕ್ಷದಿಂದ ನಿರ್ಗಮಿಸಿದ್ದು, ಈ ಬಾರಿಯ ಚುನಾವಣೆ ಕೇಸರಿ ಪಕ್ಷಕ್ಕೆ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದ

ತಮ್ಮಯ್ಯ ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. 2004ರಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ರವಿ, ಎಲ್ಲ ಕಾಲದಲ್ಲೂ ತಮ್ಮನ್ನು ಬೆಂಬಲಿಸಿದ್ದ ಲಿಂಗಾಯತರ ವಿಶ್ವಾಸ ಗಳಿಸಲು ಹೊಸ ತಂತ್ರಗಾರಿಕೆ ರೂಪಿಸಬೇಕಿದೆ. ಸಾಕಷ್ಟು ಸಂಖ್ಯೆಯಲ್ಲಿ ಇರುವ ಲಿಂಗಾಯತರು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ನಿರ್ಣಾಯಕ ಅಂಶವಾಗಿದೆ.

ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಸಿ.ಟಿ ರವಿಗೆ ಬ್ರೇಕ್ ಹಾಕುವುದು ಕಾಂಗ್ರೆಸ್ ನಾಯಕರ ಯೋಜನೆಯಾಗಿತ್ತು. ಆರು ಟಿಕೆಟ್ ಆಕಾಂಕ್ಷಿಗಳ ಪೈಕಿ ಇಬ್ಬರು ಲಿಂಗಾಯತರಾಗಿದ್ದಾರೆ, ಮಹಡಿಮನೆ ಸತೀಶ್ ಮತ್ತು ಬಿ.ಎಚ್.ಹರೀಶ್. ಸತೀಶ್ ಸಕ್ರಯಪಟ್ಟಣ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಅವರ ಪ್ರಭಾವ ಸೀಮಿತವಾಗಿದೆ.

2018 ರಲ್ಲಿ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ 37,988 ಮತಗಳನ್ನು ಪಡೆದಿದ್ದ ಹರೀಶ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಭರವಸೆಯ ಮೇರೆಗೆ ಕಾಂಗ್ರೆಸ್‌ ಸೇರ್ಪಡೆಯಾದರು, ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಟಿಕೆಟ್ ಧಕ್ಕಲಿಲ್ಲ.

ಈ ಮಧ್ಯೆ, ರವಿ ತಮ್ಮ ನಿಕಟವರ್ತಿ ತಮ್ಮಯ್ಯ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಲಿಂಗಾಯತ ಆಕಾಂಕ್ಷಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿದ್ದ ಕಾಂಗ್ರೆಸ್‌ಗೆ ಹಾರಿದರು. ಬ್ಲಾಕ್ ಮಟ್ಟದಿಂದ ಹಲವಾರು ಸಭೆಗಳು ಮತ್ತು ಚರ್ಚೆಗಳ ನಂತರ, ಕಾಂಗ್ರೆಸ್ ಹೈಕಮಾಂಡ್ ತಮ್ಮಯ್ಯ ಅವರನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು, ನಾಮಪತ್ರ ಸಲ್ಲಿಸುವ ದಿನಾಂಕಕ್ಕಿಂತ ಕೇವಲ ಎರಡು ದಿನಗಳ ಮುಂಚಿತವಾಗಿ ಅವರ  ಹೆಸರನ್ನು ಘೋಷಿಸಿತು. ಎಲ್ಲ ಆಕಾಂಕ್ಷಿಗಳ  ಮನವೊಲಿಕೆ ಬಳಿಕ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದರು.

ತಮ್ಮಯ್ಯ ಅವರು ಮೂಲತಃ ಕಾಂಗ್ರೆಸ್‌ನವರು ಮತ್ತು 1996 ರಲ್ಲಿ CMC ಸದಸ್ಯ ಮತ್ತು ಅಧ್ಯಕ್ಷರಾಗಿದ್ದರು. ಉತ್ತಮ ಸಂಘಟಕ ಮತ್ತು ಭಾಷಣಕಾರರಾಗಿದ್ದರು. ಬಿಜೆಪಿಯ ಒಳಗಿನ ವ್ಯಕ್ತಿಯಾಗಿ ಬಿಜೆಪಿಯ ಚುನಾವಣಾ ತಂತ್ರದ ಒಳಸುಳಿಗಳನ್ನು ಅವರು ತಿಳಿದಿದ್ದಾರೆ ಎಂಬುದು ಅವರ ಬಲ.

ಅವರ ಅಧಿಕಾರಾವಧಿಯಲ್ಲಿ ಅವರು ಕಲ್ಯಾಣ ಯೋಜನೆಗಳನ್ನು ಕೈಗೆತ್ತಿಕೊಂಡು ಸೂಕ್ಷ್ಮ ಸಮುದಾಯಗಳು ಮತ್ತು ಅಲ್ಪಸಂಖ್ಯಾತರ ಅಭಿಮಾನವನ್ನು ಗಳಿಸಿದ್ದರು. ಕೆಲವರು ಅವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ, ಆದೆರ ಪೂರ್ಣ ಪ್ರಮಾಣದಲ್ಲಿ ಲಿಂಗಾಯತ ಸಮುದಾಯದ ಬೆಂಬಲ ಪಡೆಯಲು ಅವರಿಂದ ಸಾಧ್ಯವಿಲ್ಲ ಎಂಬುದು ಮತ್ತಷ್ಟು ಮಂದಿಯ ಅಭಿಪ್ರಾಯ.

ರವಿ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದು ತಮ್ಮಯ್ಯ ಹೇಳಿದ್ದಾರೆ. ಅತಿರೇಕದ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ, ಗುತ್ತಿಗೆ ಕೆಲಸಗಳಲ್ಲಿ ರವಿ ಮತ್ತು ಅವರ ಸೋದರ ಸಂಬಂಧಿ  ಹಸ್ತ ಕ್ಷೇಪ ಮಾಡುತ್ತಾರೆ. ಇದು ಲಿಂಗಾಯತರ ಕೋಪದ ಜೊತೆಗೆ ಅವರ ವಿರುದ್ಧವಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT